ಬೆಂಗಳೂರು:ಡಿ ಜೆ ಹಳ್ಳಿ ಠಾಣೆ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿಯಿಂದ ಠಾಣೆ ಸಂಪೂರ್ಣ ಹಾಳಾಗಿದೆ. ಸದ್ಯ ಬಿಬಿಎಂಪಿ ಇಲ್ಲಿ ಸ್ವಚ್ಛತೆ ಮಾಡುವ ಜವಾಬ್ದಾರಿ ತೆಗೆದುಕೊಂಡಿದೆ.
ಡಿಜೆ ಹಳ್ಳಿ ಠಾಣೆ ಸ್ಯಾನಿಟೈಸ್: ಸುಟ್ಟ ವಾಹನಗಳ ತೆರವು ಮಾಡುತ್ತಿರುವ ಪೊಲೀಸರು - BBMP news
ಗಲಭೆ ಬಳಿಕ ಅಸ್ತವ್ಯಸ್ತಗೊಂಡಿದ್ದ ಡಿಜೆ ಹಳ್ಳಿ ಠಾಣೆಯ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಬಿಬಿಎಂಪಿ ಇಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದೆ. ಇದರೊಂದಿಗೆ ಈ ಪ್ರದೇಶದಲ್ಲಿ ಬೆಂಕಿ ಹಚ್ಚಲಾಗಿರುವ ವಾಹನಗಳ ಅವಶೇಷಗಳನ್ನು ಪೊಲೀಸರು ತೆರವುಗೊಳಿಸುತ್ತಿದ್ದಾರೆ.
ಈಗಾಗಲೇ ಬಂಧಿತರ ಪೈಕಿ ಕೆಲವರಿಗೆ ಕೊರೊನಾ ದೃಢಪಟ್ಟ ಕಾರಣ ಸದ್ಯ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿದ್ದಾರೆ. ಠಾಣೆಯ ಹೊರಗೆ, ಒಳಗಡೆ ಎಲ್ಲಾ ಗುಂಪು-ಗುಂಪಾಗಿ ದಾಳಿ ಮಾಡಿದ್ದಾರೆ. ಈ ವೇಳೆ ಯಾರೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ. ಅಲ್ಲದೆ ಘಟನೆ ಬಳಿಕ ಠಾಣೆಗೆ ಹಲವು ಮಂದಿ ದೂರು ಕೊಡಲು ಬರುತ್ತಿದ್ದಾರೆ. ಠಾಣೆಯಲ್ಲಿ ಗಲಭೆ ಸಂಬಂಧ ತನಿಖೆ ಚುರುಕುಗೊಳ್ಳಲಿದ್ದು, ಸದ್ಯ ಸ್ವಚ್ಛತೆ ಹಾಗೂ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಠಾಣೆಯನ್ನು ಪೂರ್ತಿ ಸ್ಯಾನಿಟೈಸ್ ಮಾಡಲಾಗಿದೆ.
ಮತ್ತೊಂದೆಡೆ ಗಲಭೆ ವೇಳೆ ಠಾಣೆ ಎದುರು ನಿಲ್ಲಿಸಿದ್ದ ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ರು. ವಾಹನಗಳೆಲ್ಲಾ ಗುರುತು ಪತ್ತೆಯಾಗದಂತ ರೀತಿಯಲ್ಲೂ ರಸ್ತೆಯುದ್ದಕ್ಕೂ ಸುಟ್ಟು ಕರಕಲಾಗಿದ್ದವು. ಹೀಗಾಗಿ ರಸ್ತೆಯಲ್ಲಿ ಓಡಾಡುವವರಿಗೆ ತೊಂದರೆಯಾಗಬಾರದು ಎಂದು ಸುಟ್ಟ ವಾಹನಗಳ ಅವಶೇಷಗಳನ್ನು ತೆರವು ಮಾಡಲು ಪೊಲೀಸ್ ಸಿಬ್ಬಂದಿ ಮುಂದಾಗಿದ್ದಾರೆ.