ಬೆಂಗಳೂರು: ಡ್ರಗ್ಸ್ ಚಟ ಇರುವ ನಟನಟಿಯರು ಚಿತ್ರರಂಗಕ್ಕೆ ಬೇಡ, ನಶೆ ಮುಕ್ತ ನಾಡು ನಮಗೆ ಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಡ್ರಗ್ಸ್ ಚಟದ ನಟಿಯರ ವಿರುದ್ಧ ಕರವೇ ಪ್ರತಿಭಟನೆ - ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ
ನಟಿಯರಾದ ಸಂಜನಾ ಗರ್ಲಾನಿ, ರಾಗಿಣಿ ಹಾಗೂ ಶರ್ಮಿಳಾ ಮಾಂಡ್ರೆ ಫೋಟೊ ಹಿಡಿದು ಮಾದಕ ನಶೆಯಲ್ಲಿ ತೇಲುವ ನಟಿಯರು ಚಿತ್ರರಂಗಕ್ಕೆ ಬೇಡ ನಶೆ ಮುಕ್ತ ರಾಜ್ಯ ನಿರ್ಮಾಣ ಮಾಡೋಣ ಎಂದು ಕರವೇ ಕಾರ್ಯಕರ್ತರು ಘೋಷಣೆ ಕೂಗಿದರು.
ಕರವೇ ಪ್ರತಿಭಟನೆ
ಹೆಬ್ಬಾಳದಿಂದ ಗೃಹ ಸಚಿವರ ನಿವಾಸದವರೆಗೂ ಕಾಲ್ನಡಿಗೆಯಲ್ಲಿ ಜಾತಾ ಮಾಡಿ ನಟಿಯರಾದ ಸಂಜನಾ ಗರ್ಲಾನಿ, ರಾಗಿಣಿ ಹಾಗೂ ಶರ್ಮಿಳಾ ಮಾಂಡ್ರೆ ಫೋಟೊ ಹಿಡಿದು ಮಾದಕ ನಶೆಯಲ್ಲಿ ತೇಲುವ ನಟಿಯರು ಚಿತ್ರರಂಗಕ್ಕೆ ಬೇಡ ನಶೆ ಮುಕ್ತ ರಾಜ್ಯ ನಿರ್ಮಾಣ ಮಾಡೋಣ ಎಂದು ಘೋಷಣೆ ಕೂಗಿದರು.