ಕರ್ನಾಟಕ

karnataka

ETV Bharat / city

ಸ್ಯಾಂಡಲ್​ವುಡ್​ಗೆ 'ಮಾದಕ' ನಂಟು: ಚಿಕ್ಕಮಗಳೂರಲ್ಲಿ ಮತ್ತೋರ್ವನ ಬಂಧನ - bengaluru crime news

ಚಂದನವನಕ್ಕೆ ಡ್ರಗ್ಸ್ ನಂಟು ಆರೋಪ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ.

ccb
ಸಿಸಿಬಿ

By

Published : Oct 13, 2020, 10:32 AM IST

Updated : Oct 13, 2020, 12:09 PM IST

ಬೆಂಗಳೂರು:ಸ್ಯಾಂಡಲ್​​ವುಡ್ ಡ್ರಗ್ ಮಾಫಿಯಾ ಸಂಬಂಧ ಕಾಟನ್‌ ಪೇಟೆ ಪೊಲೀಸ್ ಠಾಣೆಯ ಎಫ್​ಐಆರ್​​ನಲ್ಲಿ ದಾಖಲಾದ ಆರೋಪಿಗಳ ಪೈಕಿ ಹಲವರು ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು 9ನೇ ಆರೋಪಿಯಾದ ಅಶ್ವಿನ್ ಭೋಗಿಯನ್ನು ಬಂಧಿಸಿದ್ದಾರೆ.

ಸ್ಯಾಂಡಲ್​​ವುಡ್​​ನ ಕೆಲ ವ್ಯಕ್ತಿಗಳು ಡ್ರಗ್ ಮಾಫಿಯಾದಲ್ಲಿ ತೊಡಗಿದ್ದಾರೆಂದು ಎನ್​ಸಿಬಿ ಮಾಹಿತಿ ನೀಡಿದ ಬೆನ್ನಲ್ಲೇ ಕಾರ್ಯಾಚರಣೆಗೆ ಇಳಿದ ಸಿಸಿಬಿ ಎಫ್​ಐಆರ್ ದಾಖಲು ಮಾಡಿತ್ತು. ಈ ಎಫ್​ಐಆರ್​ನಲ್ಲಿ ಅಶ್ವಿನ್ ಭೋಗಿ ಹೆಸರು ಸೇರಿಸುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.

ಚಿಕ್ಕಮಗಳೂರಿನಲ್ಲಿ ಆರೋಪಿಯ ಸುಳಿವು ಪತ್ತೆ ಹಚ್ಚಿದ ಸಿಸಿಬಿ ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದೆ. ಸತತ ಒಂದು ತಿಂಗಳಿನಿಂದ ಈತನಿಗಾಗಿ ಪೊಲೀಸರು ಬಲೆ ಬೀಸಿದ್ದರು.

ಬಂಧಿತನಾಗಿರುವ ಅಶ್ವಿನ್ ಭೋಗಿ ನಟಿಯರ ಜೊತೆಗೆ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಎನ್ನಲಾಗುತ್ತಿದ್ದು, ಡ್ರಗ್ ಪೆಡ್ಲಿಂಗ್ ಮಾಡಿರುವ ಆರೋಪ ಕೂಡ ಈತನ ಮೇಲಿದೆ. ಸದ್ಯ ಸಿಸಿಬಿ ವಶದಲ್ಲಿರುವ ಈತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Last Updated : Oct 13, 2020, 12:09 PM IST

ABOUT THE AUTHOR

...view details