ಕರ್ನಾಟಕ

karnataka

ETV Bharat / city

ಸಿಸಿಬಿ ಕಚೇರಿಯಲ್ಲಿ ರಾಗಿಣಿ ತೀವ್ರ ವಿಚಾರಣೆ: ಬಂಧನ ಅಥವಾ ರಿಲೀಫ್​ ಇಂದೇ ನಿರ್ಧಾರ - actress ragini probe in ccb

ಚಾಮರಾಜಪೇಟೆ ಕಚೇರಿಯಲ್ಲಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ ಕುಮಾರ್, ಸೈಬರ್ ತಂಡ ಟೆಕ್ನಿಕಲ್ ಆ್ಯಂಗಲ್​ನಲ್ಲಿ ತನಿಖೆ ನಡೆಸಿದ್ದಾರೆ. ತಾಂತ್ರಿಕ ಸಾಕ್ಷಿಗಳನ್ನು ನಾಶ ಮಾಡಿರುವ ಹಿನ್ನೆಲೆ ಈ ದಿಕ್ಕಿನಲ್ಲಿ ವಿಚಾರಣೆ ಬಳಿಕ ಬಂಧನ, ರಿಲೀಫ್​ ಬಗ್ಗೆ ನಿರ್ಧಾರವಾಗಲಿದೆ.

ರಾಗಿಣಿ
ರಾಗಿಣಿ

By

Published : Sep 4, 2020, 6:01 PM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​ ಪ್ರಕರಣ ಸಂಬಂಧ ನಟಿ ರಾಗಿಣಿ ಅವರನ್ನು ಸಿಸಿಬಿ ಕಚೇರಿಯಲ್ಲಿ ಸಂಜೆ 6 ಗಂಟೆವೆರೆಗೆ ವಿಚಾರಣೆ ನಡೆಸಲಾಯಿತು.

ಚಾಮರಾಜಪೇಟೆ ಕಚೇರಿಯಲ್ಲಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ ಕುಮಾರ್, ಸೈಬರ್ ತಂಡ​ ಟೆಕ್ನಿಕಲ್ ಆ್ಯಂಗಲ್​ನಲ್ಲಿ ತನಿಖೆ ನಡೆಸಿದ್ದಾರೆ. ತಾಂತ್ರಿಕ ಸಾಕ್ಷಿಗಳನ್ನು ನಾಶ ಮಾಡಿರುವ ಹಿನ್ನೆಲೆ ಈ ದಿಕ್ಕಿನಲ್ಲಿ ವಿಚಾರಣೆ ಬಳಿಕ ಬಂಧನ, ರಿಲೀಫ್​ ಬಗ್ಗೆ ನಿರ್ಧಾರವಾಗಲಿದೆ.

ಸಂಜೆ 6.30ರ ಒಳಗೆ ರಾಗಿಣಿ ಅವರನ್ನು ಬಿಟ್ಟು ಕಳಿಸಬೇಕಾ, ಬೇಡವಾ ಎಂಬುದರ ಬಗ್ಗೆ ನಿರ್ಧಾರವಾಗಲಿದೆ. ಏಕೆಂದರೆ ರಾತ್ರಿಯಾದ ಮೇಲೆ ಯಾವುದೇ ಮಹಿಳಾ ಆರೋಪಿಯನ್ನ ವಿಚಾರಣೆ ನಡೆಸುವಂತಿಲ್ಲ. ಅಲ್ಲದೆ ಕಸ್ಟಡಿಗೂ ತೆಗೆದುಕೊಳ್ಳುವಂತಿಲ್ಲ. ಇದರ ಬದಲು ಕಾನೂನು ಪ್ರಕ್ರಿಯೆ ಶುರು ಮಾಡುವ ಸಾಧ್ಯತೆ ಇದೆ. ಹೀಗಾಗಿ ಇನ್ನೊಂದು ಗಂಟೆ ರಾಗಿಣಿ ವಿಚಾರ ನಿರ್ಧಾರವಾಗಲಿದೆ.

ABOUT THE AUTHOR

...view details