ಕರ್ನಾಟಕ

karnataka

ETV Bharat / city

ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣ: ಮತ್ತೋರ್ವ ವಿದೇಶಿ ಪೆಡ್ಲರ್ ಬಂಧನ - ಚಿಡಿಬೈರ್ ಆ್ಯಮರೋಸ್ ಬಂಧನ

ಸ್ಯಾಂಡಲ್​ವುಡ್​ ಡ್ರಗ್ಸ್​ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೋರ್ವ ವಿದೇಶಿ ಡ್ರಗ್ಸ್ ಪೆಡ್ಲರ್​ನನ್ನು ಬಂಧಿಸಿದ್ದಾರೆ. ಈ ಮೂಲಕ‌ ಪ್ರಕರಣದಲ್ಲಿ 21 ಆರೋಪಿಗಳನ್ನು ಬಂಧಿಸಿದಂತಾಗಿದೆ.

sandalwood-drugs-case-another-foreign-peddler-arrested
ಚಿಡಿಬೈರ್ ಆ್ಯಮರೋಸ್ ಬಂಧಿತ ಆರೋ

By

Published : Jan 18, 2021, 7:57 AM IST

Updated : Jan 18, 2021, 8:29 AM IST

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೋರ್ವ ವಿದೇಶಿ ಡ್ರಗ್ಸ್ ಪೆಡ್ಲರ್​ನನ್ನು ಬಂಧಿಸಿದ್ದಾರೆ.

ಚಿಡಿಬೈರ್ ಆ್ಯಮರೋಸ್ ಬಂಧಿತ ಆರೋಪಿ. ಈತನನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ‌. ಆ್ಯಮರೋಸ್​ನಿಂದ​ 10 ಗ್ರಾಂ ಎಲ್​ಎಸ್​ಡಿ ವಶಕ್ಕೆ ಪಡೆಯಲಾಗಿದ್ದು, ಈ ಮೂಲಕ‌ ಪ್ರಕರಣದಲ್ಲಿ 21 ಆರೋಪಿಗಳನ್ನು ಬಂಧಿಸಿದಂತಾಗಿದೆ.

ಓದಿ:ಮಂಗಳೂರು: ಬಸ್ - ಲಾರಿ ಡಿಕ್ಕಿ, ಪ್ರಯಾಣಿಕರು ಪಾರು

ಲೂಮ್ ಪೆಪ್ಪರ್, ಬೊನಾಲ್ಡ್ ಜೊತೆಗೆ ಮೂರನೇ ವಿದೇಶಿ ಡ್ರಗ್ಸ್ ಪೆಡ್ಲರ್ ಹೈಫೈ ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡುವ ಪಟ್ಟಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಸಿಸಿಬಿ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

Last Updated : Jan 18, 2021, 8:29 AM IST

ABOUT THE AUTHOR

...view details