ಬೆಂಗಳೂರು:ಸ್ಯಾಂಡಲ್ವುಡ್ ಡ್ರಗ್ ಪ್ರಕರಣ ಸಂಬಂಧ ಸದ್ಯ ಎ-6 ಆರೋಪಿ ಆದಿತ್ಯಾ ಆಳ್ವಾಗೆ ಸಿಸಿಬಿ ಎಲ್ಲೆಡೆ ಶೋಧ ಮುಂದುವರೆಸಿದೆ. ಮತ್ತೊಂದೆಡೆ ಬಾಲಿವುಡ್ ನಟ ವಿವೇಕ್ ಒಬೆರಾಯ್, ಪತ್ನಿ ಪ್ರಿಯಾಂಕಾಗೆ ಸಂಕಷ್ಟ ಎದುರಾಗಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್: ನಟ ವಿವೇಕ್ ಒಬೆರಾಯ್ಗೆ ಶುರುವಾಯ್ತು ಎನ್ಸಿಬಿ ಸಂಕಷ್ಟ
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಅವರ ಸಂಬಂಧಿ ನಟ ವಿವೇಕ್ ಒಬೆರಾಯ್ ಮತ್ತು ಪ್ರಿಯಾಂಕಾ ಅವರನ್ನ ಎನ್ಸಿಬಿ ವಿಚಾರಣೆಗೆ ಒಳಪಡಿಸಲಿದೆ.
ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ಸದ್ಯ ನಟನ ಕುಟುಂಬಸ್ಥರನ್ನು ಎನ್ಸಿಬಿ ವಿಚಾರಣೆಗೆ ಒಳಪಡಿಸಲಿದೆ. ಈಗಾಗಲೇ ಈ ವಿಚಾರ ಮಹಾರಾಷ್ಟ್ರ ಸಿಎಂ ಗಮನಕ್ಕೆ ಕೂಡ ಬಂದಿದೆಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಬೆಂಗಳೂರು ಪೊಲೀಸರು ಆದಿತ್ಯಾ ಆಳ್ವಾಗೆ ಆಶ್ರಯ ನೀಡಿದ ಆರೋಪದ ಮೇರೆಗೆ ನಟ ಒಬೆರಾಯ್ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ವಿಚಾರಣೆಗೆ ನಟನ ಕುಟುಂಬಸ್ಥರು ಸರಿಯಾದ ರೆಸ್ಪಾನ್ಸ್ ನೀಡದ ಕಾರಣ ಕಳೆದ ಶುಕ್ರವಾರ ಮಧ್ಯಾಹ್ನ ವಿಚಾರಣೆಗೆ ಬರುವಂತೆ ಪೊಲೀಸರು ಸೂಚಿಸಿದ್ರು.
ಆದ್ರೆ, ಮಳೆ ಹಾಗೂ ಇತರ ಕಾರಣ ನೀಡಿ ವಿಚಾರಣೆಗೆ ಬಂದಿರಲಿಲ್ಲ. ಎರಡನೇ ಬಾರಿ ಕೂಡ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾಗೆ ವಾಟ್ಸ್ಆ್ಯಪ್ ಮೂಲಕ ನೋಟಿಸ್ ನೀಡಿದ್ದು, ವಿಚಾರಣೆಗೆ ಗೈರಾದರೆ ಸಿಸಿಬಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಲಿದೆ. ಮತ್ತೊಂದೆಡೆ ಈಗಾಗಲೇ ಎನ್ಸಿಬಿ ತನಿಖೆ ನಡೆಸುತ್ತಿರುವ ಕಾರಣ ನಟ ವಿವೇಕ್ ಒಬೆರಾಯ್ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ