ಕರ್ನಾಟಕ

karnataka

ETV Bharat / city

ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ: ದರ್ಶನ್ ಟ್ವೀಟ್​ - ಸ್ಯಾಂಡಲ್​ವುಡ್ ಲೇಟೆಸ್ಟ್ ನ್ಯೂಸ್

ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯ ಮತ್ತು ಆಕರ್ಷಕ ನಗುವನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಒಳ್ಳೆ ಮತ್ತು ಕೆಟ್ಟ ಸಮಯದಲ್ಲಿ ಅವರು ನಮ್ಮೊಂದಿಗೆ ಇದ್ದರು ಎಂದು ಸ್ಯಾಂಡಲ್​ವುಡ್ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಟ್ವೀಟ್ ಮಾಡಿದ್ದಾರೆ.

sandalwood-actor-darshan-tweet-on-ambi-death-anniversary
ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ: ದರ್ಶನ್ ಟ್ವೀಟ್​

By

Published : Nov 24, 2021, 12:58 PM IST

ಬೆಂಗಳೂರು:ರೆಬೆಲ್ ಸ್ಟಾರ್ ಅಂಬಿ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದು, ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯ ಮತ್ತು ಆಕರ್ಷಕ ನಗುವನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ ಎಂದು ಸ್ಮರಿಸಿಕೊಂಡಿದ್ದಾರೆ.

ವಿಶೇಷ ಮಾರ್ಗದರ್ಶಕರಾಗಿ, ಅಪ್ಪಾಜಿ ಯಾವಾಗಲೂ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಇದ್ದರು. ಈ ಪುಣ್ಯತಿಥಿಯಂದು ನಾವೆಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅಪ್ಪಾಜಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿ ಬಳಿಗೆ ಆಗಮಿಸಿದ ಸುಮಲತಾ ಅಂಬರೀಶ್, ನಟ ದೊಡ್ಡಣ್ಣ ಹಾಗೂ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಪೂಜೆ ಸಲ್ಲಿಸಿದ್ದಾರೆ. ಸಮಾಧಿ ಬಳಿ ಅಭಿಮಾನಿಗಳು ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ:ಅಂಬಿ 3ನೇ ವರ್ಷದ ಪುಣ್ಯಸ್ಮರಣೆ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

ABOUT THE AUTHOR

...view details