ಬೆಂಗಳೂರು:ದಿನೇ ದಿನೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇಡೀ ಉದ್ಯಾನ ನಗರಿಯ ಜನ ಬೆಚ್ಚಿಬಿದ್ದಿದ್ದಾರೆ. ಇದರ ಹಿನ್ನೆಲೆಯಲ್ಲಿ ಸೌಂದರ್ಯಕ್ಕಿಂತ ಆರೋಗ್ಯವೇ ಮುಖ್ಯ ಎಂದು ಉದ್ದೇಶದೊಂದಿಗೆ ಸವಿತಾ ಸಮಾಜದವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಕೊರೊನಾ ಹೆಚ್ಚಳಕ್ಕೆ ಬೆಚ್ಚಿ ಬಿದ್ದ ಸವಿತಾ ಸಮಾಜ: 500ಕ್ಕೂ ಹೆಚ್ಚು ಸಲೂನ್ ಶಾಪ್ ಕ್ಲೋಸ್..! - savitha samaja
ಕೊರೊನಾ ಹರಡದಂತೆ ತಡೆಯಲು ಸವಿತಾ ಸಮಾಜ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಬೆಂಗಳೂರಿನಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಸಲೂನ್ ಶಾಪ್ಗಳನ್ನು ಬಂದ್ ಮಾಡಲಾಗಿದೆ.
![ಕೊರೊನಾ ಹೆಚ್ಚಳಕ್ಕೆ ಬೆಚ್ಚಿ ಬಿದ್ದ ಸವಿತಾ ಸಮಾಜ: 500ಕ್ಕೂ ಹೆಚ್ಚು ಸಲೂನ್ ಶಾಪ್ ಕ್ಲೋಸ್..! saloon shops closed](https://etvbharatimages.akamaized.net/etvbharat/prod-images/768-512-7926098-thumbnail-3x2-raa.jpg)
ಸಲೂನ್ ಶಾಪ್ ಬಂದ್
ಸಲೂನ್ ಶಾಪ್ ಬಂದ್
ಕೊರೊನಾ ನಿಯಂತ್ರಣಕ್ಕಾಗಿ ಸುಮಾರು 15 ದಿನಗಳ ಕಾಲ ನಗರದ ಎಲ್ಲ ಸಲೂನ್ ಶಾಪ್ಗಳನ್ನು ಬಂದ್ ಮಾಡಲು ಸಲೂನ್ ಶಾಪ್ಗಳ ಮಾಲೀಕರು ಮುಂದಾಗಿದ್ದಾರೆ. ಇದು ಸ್ವಯಂಪ್ರೇರಿತ ಬಂದ್ ಆಗಿದ್ದು, ಸುಮಾರು 500 ರಿಂದ 600 ಸಲೂನ್ ಶಾಪ್ಗಳು ಕ್ಲೋಸ್ ಆಗಿವೆ.
ಈ ಮುಂಚೆ ಲಾಕ್ಡೌನ್ ವೇಳೆ ಸಲೂನ್ ಶಾಪ್ ತೆರೆಯಲು ಅವಕಾಶ ಕೊಡುವಂತೆ ಒತ್ತಡ ಹಾಕಿದರು. ಆದರೆ, ಇದೀಗ ಜೀವವಿದ್ದರೆ ಏನನ್ನಾದರೂ ಮಾಡಬಹುದು ಅನ್ನೋ ನಿರ್ಧಾರಕ್ಕೆ ಸಲೂನ್ ಶಾಪ್ ಮಾಲೀಕರು ಬಂದಿದ್ದಾರೆ. ಹೀಗಾಗಿ ಸ್ವಯಂ ಸಲೂನ್ ಶಾಪ್ಗಳನ್ನು ಮುಚ್ಚಿ ಕೊರೊನಾ ವಿರುದ್ಧ ಹೋರಾಟ ಮುಂದುವರೆಸಿದ್ದಾರೆ.