ಕರ್ನಾಟಕ

karnataka

ETV Bharat / city

ನರ್ಸ್, ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ವಾರದೊಳಗೆ ಸಂಬಳ: ಸಚಿವ ಶ್ರೀರಾಮುಲು ಭರವಸೆ - ಆರೋಗ್ಯ ಸಿಬ್ಬಂದಿಗೆ ಬಿಡುಗಡೆಯಾಗದ ವೇತನ

ನರ್ಸ್​​​ ಮತ್ತು ಪ್ಯಾರಾ ಮೆಡಿಕಲ್​​ ಸಿಬ್ಬಂದಿಗೆ ವಾರದೊಳಗೆ ಸಂಬಳ ಆಗಲಿದೆ. ರಾಜ್ಯದ ಎಲ್ಲಾ ಕಡೆ ಆಗಿರುವ ಸಮಸ್ಯೆ ಪರಿಹಾರ ಆಗಲಿದೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

Salary release within a week for nurse, paramedic staff
ಆರೋಗ್ಯ ಸಚಿವ ಬಿ‌.ಶ್ರೀರಾಮುಲು

By

Published : Apr 16, 2020, 5:08 PM IST

ಬೆಂಗಳೂರು: ನರ್ಸ್ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ಈವರೆಗೂ ವೇತನ ನೀಡದ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಬಿ‌.ಶ್ರೀರಾಮುಲು, ವಾರದೊಳಗೆ ಸಂಬಳ ಬರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಹಾವೇರಿ, ಗದಗ ಜಿಲ್ಲೆಗೆ ಭೇಟಿ ನೀಡಿದ್ದೆ. ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ಸಂಬಳವಾಗದ ಬಗ್ಗೆ ಮಾಹಿತಿ ಪಡೆದಿದಿದ್ದೇನೆ. ಹೀಗಾಗಿ 36 ಕೋಟಿ ರೂ. ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದೇನೆ ಎಂದರು.

ಆರೋಗ್ಯ ಸಚಿವ ಬಿ‌.ಶ್ರೀರಾಮುಲು

ವಿವಿಧ ಮೂಲಗಳಿಂದ ನರ್ಸ್ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ಸಂಬಳ ನೀಡಲಾಗುತ್ತಿದೆ. ವೇತನ ವಿಳಂಬವಾಗಿರುವುದು ಗಮನಕ್ಕೆ ಬಂದಿದೆ. ಕೆಲವರಿಗೆ ಏಳೆಂಟು ತಿಂಗಳು, ಇನ್ನೂ ಕೆಲವರಿಗೆ ಮೂರು ತಿಂಗಳು ಸಂಬಳ ಆಗಿಲ್ಲ. ತಕ್ಷಣವೇ ಸಂಬಳ ನೀಡುವ ಕುರಿತು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ ಎಂದರು.

ABOUT THE AUTHOR

...view details