ಕರ್ನಾಟಕ

karnataka

ETV Bharat / city

ಸಾರಿಗೆ ಸಂಗ್ರಾಮದ ನಡುವೆ ಕೆಲಸಕ್ಕೆ ಹಾಜರಾದವರ ಅಕೌಂಟ್​ಗೆ ಬಂತು ವೇತನ ​

ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಗೈರಾದ ನೌಕರರಿಗೆ ವೇತನವನ್ನ ನೀಡದೇ, ಮುಷ್ಕರದ ನಡುವೆ ಕೆಲಸಕ್ಕೆ ಹಾಜರಾದ ನೌಕರರಿಗೆ ಇಂದು ವೇತನ ಭಾಗ್ಯವನ್ನು ಸರ್ಕಾರ ಕರುಣಿಸಿದೆ.‌ ನಾಲ್ಕು ನಿಗಮದ ಚಾಲಕ-ನಿರ್ವಾಹಕರಿಗೆ ವೇತನವನ್ನು ಪಾವತಿಸಲಾಗಿದೆ.

salary-release-for-transport-employees
ಸಾರಿಗೆ ನೌಕರರ ಮುಷ್ಕರ

By

Published : Apr 12, 2021, 5:21 PM IST

ಬೆಂಗಳೂರು: ಮುಷ್ಕರದಲ್ಲಿ ಪಾಲ್ಗೊಂಡ ಸಾರಿಗೆ ನೌಕರರ ಮಾರ್ಚ್ ತಿಂಗಳ ವೇತನಕ್ಕೆ ತಡೆಹಿಡಿದಿರುವ ನಿಗಮಗಳು, ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಸಂಬಳ ಪಾವತಿಸಿವೆ. ‌

ಕೆಲಸಕ್ಕೆ ಹಾಜರಾದ ನೌಕರರಿಗೆ ವೇತನ‌ ಬಿಡುಗಡೆ

ಮುಷ್ಕರದ ನಡುವೆ ಕೆಲಸಕ್ಕೆ ಹಾಜರಾದ ನಾಲ್ಕು ನಿಗಮಗಳ ನೌಕರರಿಗೆ ಇಂದು ವೇತನ ಭಾಗ್ಯ ಕರುಣಿಸಿದೆ.‌ ನಾಲ್ಕು ನಿಗಮಗಳ ಚಾಲಕ-ನಿರ್ವಾಹಕರಿಗೆ ವೇತನ ಪಾವತಿಸಲಾಗಿದೆ.

ಕೆಎಸ್ಆರ್​ಟಿಸಿ 4,256 ನೌಕರರಿಗೆ, ಬಿಎಂಟಿಸಿ 960, ಎನ್​ಡಬ್ಲೂಕೆಎಸ್​ಆರ್​ಟಿಸಿ -1,837, ಎನ್ಇಕೆಎಸ್ಆರ್​ಟಿಸಿ-3,377 ನೌಕರರಿಗೆ ಮಾತ್ರ ವೇತನ ಬಿಡುಗಡೆ ಮಾಡಿದೆ.

ಉಳಿದ ಸಿಬ್ಬಂದಿ ಈವರೆಗೆ ತಮ್ಮ ಪಟ್ಟು ಸಡಿಲಿಸದೇ ಸತತ 6ನೇ ದಿನವೂ ಮುಷ್ಕರ ಮುಂದುವರಿಸಿದ್ದಾರೆ. ಇಂದು ತಮ್ಮ ತಮ್ಮ ಕುಟುಂಬಗಳೊಂದಿಗೆ ತಟ್ಟೆ, ಲೋಟ ಹಿಡಿದು ಬೀದಿಗಿಳಿದಿದ್ದಾರೆ.

ABOUT THE AUTHOR

...view details