ಬೆಂಗಳೂರು: ವೇತನ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಆಯುಷ್ ಹಾಗೂ ಯುನಾನಿ ವೈದ್ಯರ ಹಾಗೂ ನರ್ಸ್ಗಳಿಗೆ ಬಂಪರ್ ಉಡುಗೊರೆ ನೀಡಿದೆ.
ವಿಧಾನಸೌಧದಲ್ಲಿ ಇಂದು ನಡೆದ ಸಭೆ ಬಳಿಕ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಆಯುಷ್ ಮತ್ತು ಯುನಾನಿ ವೈದ್ಯರ ತಿಂಗಳ ವೇತನವನ್ನು ₹48 ಸಾವಿರಕ್ಕೆ, ನರ್ಸ್ಗಳ ವೇತನವನ್ನು ₹30 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದು ಹೇಳಿದರು.
ಆಯುಷ್ ವೈದ್ಯರಿಗೆ ನೀಡಲಾಗುವ ವೇತನವನ್ನು ₹25 ರಿಂದ ₹48 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ತಾತ್ಕಾಲಿಕವಾಗಿ ಕಾರ್ಯನಿರ್ವಹಣೆಗೆ ನೇಮಿಸಿಕೊಳ್ಳುವ ಎಂಬಿಬಿಎಸ್ ವೈದ್ಯರಿಗೆ ₹80 ಸಾವಿರ ವೇತನ ನೀಡಲಾಗುವುದು. ಈವರೆಗೂ ₹15 ಸಾವಿರ ಪಡೆಯುತ್ತಿದ್ದ ನರ್ಸ್ಗಳು ಇನ್ಮುಂದೆ ₹30 ಸಾವಿರ ಪಡೆಯಲಿದ್ದಾರೆ. ಬಿಬಿಎಂಪಿ, ಆರೋಗ್ಯ, ಆಯುಷ್ ಎಲ್ಲಾ ನರ್ಸ್ಗಳಿಗೂ ಹೊಸ ವೇತನ ಅನ್ವಯವಾಗಲಿದೆ ಎಂದು ತಿಳಿಸಿದರು.