ಬೆಂಗಳೂರು:ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ ಎಂದು ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದಮೇಲೆ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಿದ್ದೆವು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ 172.5 ಟಿಎಂಸಿ ಕುಡಿಯುವ ನೀರು ನೀಡಬೇಕು. 25 ಜನ ಸಂಸದರು ದೆಹಲಿಯಲ್ಲಿ ಕೂತುಕೊಂಡು ಏನ್ ಮಾಡ್ತಾರೆ ಅಂತ ಕೆಲ ಕಾಂಗ್ರೆಸ್ ನಾಯಕರು ಕೇಳ್ತಾರಂತೆ. ಕರ್ನಾಟಕ ಜನರ ಹಕ್ಕನ್ನು ಈಡೇರಿಸುವ ಕೆಲಸವನ್ನ ನಾವು ಮಾಡುತ್ತಿದ್ದೇವೆ ಎಂದರು.
ಸಂಸತ್ತಿನಲ್ಲಿ ವಿಪಕ್ಷಗಳ ಗದ್ದಲ ವಿಚಾರ:
ಪಾರ್ಲಿಮೆಂಟ್ ಅನ್ನು ಶೃದ್ಧಾ ಕೇಂದ್ರ ಅಂತ ಕರಿತೀವಿ. ಕೋವಿಡ್ನಂತಹ ಮಹಾಮಾರಿ ಇಡೀ ಜಗತ್ತಿಗೆ ಬಂದಿದೆ. ಒಂದು ಮತ್ತು ಎರಡನೇ ಅಲೆ ನಿಯಂತ್ರಣವಾಗಿದೆ. ಈ ವೇಳೆ, ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರ ಗೊತ್ತಿದೆ. ಕೇವಲ ಕೊರೊನಾ ಬಗ್ಗೆ ಅಷ್ಟೇ ಅಲ್ಲ, ಭಯೋತ್ಪಾದನೆ ಬಗ್ಗೆ ಕೂಡ ಚರ್ಚೆ ಮಾಡಬೇಕಿದೆ. ಪಾಕಿಸ್ತಾನ, ಚೀನಾ ಸಾಕಷ್ಟು ತೊಂದರೆ ಕೊಡ್ತಿವೆ ಎಂದರು.
ಆದರೆ, ಕಾಂಗ್ರೆಸ್ ಕಳೆದ 19ನೇ ತಾರೀಖಿನಿಂದ ಪಾರ್ಲಿಮೆಂಟ್ ಅಪವಿತ್ರ ಮಾಡೋಕೆ ಪ್ಲಾನ್ ಮಾಡಿತ್ತು. ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡೋಕೆ ಬಿಡ್ತಿಲ್ಲ. ಚರ್ಚೆಗೂ ಬರುತ್ತಿಲ್ಲ. ಪ್ರಥಮ ದಿನದ ಅಧಿವೇಶನದಲ್ಲೇ ಕಾಂಗ್ರೆಸ್ ಪಲಾಯನವಾದ ಮಾಡಿದೆ. ಇದು ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಮಾಡಿದಂತ ಅಪಮಾನ ಎಂದರು.
ರಾಹುಲ್ ಗಾಂಧಿ ವಿರುದ್ಧ ಕಿಡಿ
ಕಾಂಗ್ರೆಸ್ ಅಷ್ಟೇ ಅಲ್ಲ, ಮಿತ್ರಪಕ್ಷಗಳು ಅವರ ಜೊತೆಗೂಡಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡ್ತಿದ್ದಾರೆ. ಪೆಗಾಸಿಸ್ ಟೂಲ್ ಕಿಟ್ ಪ್ರಕರಣದ ಮುಂದುವರೆದ ಭಾಗ. ಆರ್ಟಿಕಲ್ 370 ಬಳಿಕ ಕಾಶ್ಮೀರ ಈಗ ಹೇಗಿದೆ ನೋಡಿ. ನಾವು ಭಯೋತ್ಪಾದಕ ಚಟುವಟಿಕೆ ತಡೆಯಲು ಮುಂದಾಗಿದ್ದರೆ, ಇದಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತೆ. ಲೋಕಸಭೆಯಲ್ಲಿ ವಿಪಕ್ಷ ಸ್ಥಾನ ಪಡೆಯೋಕೆ ಆಗಿಲ್ಲ. ಕಾಂಗ್ರೆಸ್ ರಾಜ್ಯ ಯುವ ಘಟಕದ ಆಯ್ಕೆ ಗೊಂದಲ, ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡ ಕಾರಣ ಕಾಂಗ್ರೆಸ್ ಸದನದಲ್ಲಿ ಸರಿಯಾಗಿ ಭಾಗಿಯಾಗಲ್ಲ. 13 ತಾರೀಖಿನವರೆಗೂ ಪಾರ್ಲಿಮೆಂಟ್ ನಡೆದೇ ನಡೆಯುತ್ತೆ. ಇನ್ನಾದರೂ ವಿಪಕ್ಷಗಳು ಆರೋಗ್ಯಕರ ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ಇದನ್ನೂ ಓದಿ:ಸಚಿವರ ಸಭೆಗೆ ಆಗಮಿಸುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿ: ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ!