ಬೆಂಗಳೂರು: ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಡಿಸೆಂಬರ್ 7ರಂದು ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದವರು ಇಂದು ಡಿಸ್ಚಾರ್ಜ್ ಆಗಿದ್ದಾರೆ.
24 ದಿನಗಳ ಬಳಿಕ ಆಸ್ಪತ್ರೆಯಿಂದ ಸಾಲು ಮರದ ತಿಮ್ಮಕ್ಕ ಡಿಸ್ಚಾರ್ಜ್ - ಬೆಂಗಳೂರು
ಕುಸಿದು ಬಿದ್ದು ಸೊಂಟದ ಮೂಳೆ ಕೊಂಚ ಮುರಿದ ಪರಿಣಾಮ ಸಾಲುಮರದ ತಿಮ್ಮಕ್ಕರನ್ನು ಡಿಸೆಂಬರ್ 7ರಂದು ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಇಂದು ಬಿಡುಗಡೆ ಆಗಿದ್ದಾರೆ.
ಮನೆಯಲ್ಲಿ ಇರುವಾಗಲೇ ಡಿಸೆಂಬರ್ 6ರ ಸಂಜೆ ದಿಢೀರ್ ಕುಸಿದು ಬಿದ್ದ ಪರಿಣಾಮ ಸೊಂಟದ ಮೂಳೆ ಕೊಂಚ ಮುರಿದಿತ್ತು. ಹೀಗಾಗಿ ಹತ್ತಿರದ ಹಾಸನದ ಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನೋವು ಹೆಚ್ಚು ಕಾಣಿಸಿಕೊಂಡ ಕಾರಣ ಹೆಚ್ಚಿನ ಚಿಕಿತ್ಸೆಗೆ ಜಯನಗರದ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ರಿಪೋರ್ಟ್ನಲ್ಲಿ ಮೂಳೆಗೆ ಸ್ಪಲ್ಪ ಸಮಸ್ಯೆಯಾಗಿರುವುದು ಕಂಡು ಬಂದಿತ್ತು. ಹೀಗಾಗಿ ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಇದೀಗ ಬರೋಬ್ಬರಿ 24 ದಿನಗಳ ಚಿಕಿತ್ಸೆ ಬಳಿಕ ವೃಕ್ಷ ಮಾತೆ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.