ಬೆಂಗಳೂರು: ಆರ್ಟಿಓಗೆ ತೆರಿಗೆ ವಂಚಿಸಿ ರಾಜ್ಯದಲ್ಲಿ ಸಂಚರಿಸುತ್ತಿದ್ದ ನಾಗಾಲ್ಯಾಂಡ್ ನೋಂದಣಿಯ ಬಸ್ಸುಗಳನ್ನು ಆರ್ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಆರ್ಟಿಓ ಭರ್ಜರಿ ಕಾರ್ಯಾಚರಣೆ: ತೆರಿಗೆ ವಂಚಿಸಿ ಸಂಚರಿಸುತ್ತಿದ್ದ 4 ಬಸ್ಗಳು ಜಪ್ತಿ
ದುಡ್ಡಿದ್ದವರೇ ಹಾಗೆ, ನಿಯಮ ಇರೋದೇ ಮುರಿಯೋಕೆ ಅಂತ ಅಂದುಕೊಳ್ಳುತ್ತಾರೆ. ಹೀಗೆ ನಿಯಮ ಮೀರೋದ್ರ ಜೊತೆಗೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿದ್ದ ಹೈ- ಫೈ ಮಂದಿಯ ಅಸಲಿಯತ್ತನ್ನು ಸಾರಿಗೆ ಇಲಾಖೆ ಬಟಾಬಯಲು ಮಾಡಿದೆ.
ಆರ್ಟಿಓ
ಯಶವಂತಪುರ, ಎಲೆಕ್ಟ್ರಾನಿಕ್ ಸಿಟಿ ಆರ್ಟಿಓ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ತೆರಿಗೆ ವಂಚನೆ ಮಾಡುತ್ತಿದ್ದ ಒಂದೇ ಕಂಪನಿಯ ನಾಲ್ಕು ಬಸ್ಗಳನ್ನ ಪತ್ತೆ ಮಾಡಿದ್ದಾರೆ.
ನಾಗಾಲ್ಯಾಂಡ್ ರಾಜ್ಯದ ನಾಲ್ಕು ಬಸ್ಗಳು ತೆರಿಗೆ ಕಟ್ಟದೆ ರಾಜ್ಯದಲ್ಲಿ ಸಂಚಾರ ಮಾಡುತ್ತಿದ್ದವು. ಅವುಗಳನ್ನು ಆರ್ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜೊತೆಗೆ ಎನ್ಎಲ್ 01-b- 1974 ನಂಬರಿನ ಎರಡು ಬಸ್ಗಳನ್ನ ಜಪ್ತಿ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.