ಬೆಂಗಳೂರು:ಸಾರಿಗೆ ನೌಕರರ ಮುಷ್ಕರವನ್ನೇ ಬಂಡವಾಳ ಮಾಡಿಕೊಂಡು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್‌ಗಳಿಗೆ ಆರ್ಟಿಒ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್‌ಗಳಿಗೆ ಎಚ್ಚರಿಕೆ ನೀಡಿದ ಆರ್ಟಿಒ ಅಧಿಕಾರಿಗಳು ಸಾರಿಗೆ ನೌಕರರ ಮುಷ್ಕರ ಒಂಭತ್ತನೇ ದಿನಕ್ಕೆ ಕಾಲಿಟ್ಟಿದ್ದು, ಬಸ್ ಸಂಚಾರ ಸ್ಥಗಿತವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ 8 ದಿನಗಳಿಂದಲೂ ಬಸ್ ಪ್ರಯಾಣವನ್ನೇ ನಂಬಿಕೊಂಡಿದ್ದ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಸರ್ಕಾರ ಖಾಸಗಿ ಬಸ್‌ಗಳ ಮೊರೆ ಹೋಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬಸ್ನವರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದರು.
ಹೀಗಾಗಿ, ಇಂದು ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಆರ್ಟಿಒ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಮೆಜೆಸ್ಟಿಕ್ನಿಂದ ಬೊಮ್ಮನಹಳ್ಳಿಗೆ ಹೋಗಲು ಖಾಸಗಿ ಬಸ್‌ನ ಕಂಡಕ್ಟರ್ 100 ರೂಪಾಯಿ ಕೇಳಿದ್ದ. ಹೀಗಾಗಿ, ಬಸ್ ತಡೆದು ಸರ್ಕಾರ ನಿಗದಿ ಮಾಡಿದ್ದ ದರದ ಪಟ್ಟಿಯನ್ನ ಕಂಡಕ್ಟರ್ಗೆ ನೀಡಿ, ಮತ್ತೊಮ್ಮೆ ಹೆಚ್ಚಿನ ದರ ಪಡೆದರೆ ಬಸ್ ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಓದಿ:ಆಮ್ಲಜನಕ ಸಂಪರ್ಕ ಕಡಿತಗೊಳಿಸಿದ ವಾರ್ಡ್ ಬಾಯ್: ಕೆಲವೇ ಕ್ಷಣಗಳಲ್ಲಿ ಕೊರೊನಾ ರೋಗಿ ಸಾವು