ಕರ್ನಾಟಕ

karnataka

ETV Bharat / city

ಇನ್ನು ಆನ್-ಲೈನ್​ನಲ್ಲಿಯೇ ಆರ್​ಟಿಐ ಸೇವೆ : ಸಚಿವ ಸುರೇಶ್ ಕುಮಾರ್ - bangalore latest news

ನಾಗರಿಕರಿಗೆ ನಿಗದಿತ ಅವಧಿಯಲ್ಲಿ ಸೇವೆ ದೊರೆಯುವಂತೆ ಮಾಡಲು 'ಸಕಾಲ'ಸೇವೆಗಳನ್ನು ಆನ್​ಲೈನ್​ಗೊಳಿಸಿದ ಮಾದರಿಯಲ್ಲೇ ಮಾಹಿತಿ ಹಕ್ಕು ಅಧಿನಿಯಮ-ಆರ್.ಟಿ.ಐ. ಸೇವೆಗಳನ್ನೂ ಸಹ ಆನ್-ಲೈನ್ ಮಾಡಲಾಗುವುದು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ, ಕಾರ್ಮಿಕ ಮತ್ತು ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

RTI is going to give on-line Service: Suresh Kumar
ಇನ್ನು ಆನ್-ಲೈನ್​ನಲ್ಲಿಯೇ ಆರ್.ಟಿ.ಐ. ಸೇವೆ : ಸಚಿವ ಸುರೇಶ್ ಕುಮಾರ್

By

Published : Dec 24, 2019, 11:33 PM IST

ಬೆಂಗಳೂರು:ನಾಗರಿಕರಿಗೆ ನಿಗದಿತ ಅವಧಿಯಲ್ಲಿ ಸೇವೆ ದೊರೆಯುವಂತೆ ಮಾಡಲು 'ಸಕಾಲ'ಸೇವೆಗಳನ್ನು ಆನ್​ಲೈನ್​ಗೊಳಿಸಿದ ಮಾದರಿಯಲ್ಲೇ ಮಾಹಿತಿ ಹಕ್ಕು ಅಧಿನಿಯಮ-ಆರ್.ಟಿ.ಐ. ಸೇವೆಗಳನ್ನೂ ಸಹ ಆನ್-ಲೈನ್ ಮಾಡಲಾಗುವುದು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ, ಕಾರ್ಮಿಕ ಮತ್ತು ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇನ್ನು ಆನ್-ಲೈನ್​ನಲ್ಲಿಯೇ ಆರ್.ಟಿ.ಐ. ಸೇವೆ : ಸಚಿವ ಸುರೇಶ್ ಕುಮಾರ್

ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿ ಮತ್ತು ನೌಕರರಿಗೆ ಸಕಾಲ ಸೇವೆಗಳ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು, ಅನಗತ್ಯ ವಿಳಂಬ ಮಾಡುವುದನ್ನು ತಪ್ಪಿಸಲು ಸಕಾಲ ಸೇವೆಯನ್ನು ಆನ್-ಲೈನ್ ಮಾಡಿರುವಂತೆಯೇ ಆರ್.ಟಿ.ಐ.ನ್ನು ಆನ್-ಲೈನ್ ಮಾಡುವಂತಹ ಒಂದು ಹೊಸ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಾಲ ವ್ಯಾಪ್ತಿಗೆ ಒಳಗಾದ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡದಿರುವ ಪ್ರಕರಣಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಾಲ ಸೇವೆಗೆ ಬೆಂಗಳೂರು ನಗರದ ಒಟ್ಟು ಜನಸಂಖ್ಯೆಯ ಶೇ.0.01ರಷ್ಟು ಜನರಿಂದಲೂ ಅರ್ಜಿಗಳು ಬರುವುದಿಲ್ಲ. ನಾವು ಇಷ್ಟನ್ನೂ ಸಹ ಸಮರ್ಪಕವಾಗಿ ವಿಲೇವಾರಿ ಮಾಡದೇ ಹೋದರೆ ಇನ್ನು 1.40 ಕೋಟಿ ಜನರಿಗೆ ಮಾಡುವ ಎಲ್ಲ ಸೇವೆಗಳನ್ನು ಹೇಗೆ ನಿರ್ವಹಿಸಬಹುದಾಗಿದೆ ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ಅರ್ಥೈಸಿಕೊಳ್ಳಬೇಕಾಗಿದೆ ಎಂದು ಸಚಿವರು ಹೇಳಿದರು.

ಯಾವುದೇ ನೌಕರರಾಗಲಿ ತಾವು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆ ಕುರಿತು ಸಾರ್ವಜನಿಕರಲ್ಲಿ ಯಾವ ಅಭಿಪ್ರಾಯ ಇದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಈಗ ಸರ್ಕಾರಿ ನೌಕರರಾಗಿರಬಹುದು, ನಿವೃತ್ತರಾದ ನಂತರ ಸಾಮಾನ್ಯ ನಾಗರೀಕರೇ ಆಗುವುದರಿಂದ ನಾಳೆ ನಮಗೆ ಯಾವ ರೀತಿಯ ಸೇವೆ ದೊರೆಯಬಹುದು, ನಮ್ಮನ್ನು ಆಗ ಅಧಿಕಾರಿಗಳು ಹೇಗೆ ನಡೆಸಿ ಕೊಳ್ಳಬಹುದೆಂಬುದನ್ನು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

ಸಕಾಲ ಸೇವೆ ಕುರಿತು ನಮ್ಮ ದೇಶದ ಎಲ್ಲ ರಾಜ್ಯಗಳು ನಮ್ಮ ರಾಜ್ಯದತ್ತಲೇ ನೋಡುತ್ತಿವೆ. ನಮ್ಮ ಸಕಾಲ ಮಿಷನ್ ಯೋಜನೆ ಸೇವಾ ಪ್ರಕ್ರಿಯೆ ಕುರಿತು ಇಡೀ ದೇಶದಲ್ಲಿ ಉತ್ತಮ ಹೆಸರಿದೆ. ಆದರೆ ಅದನ್ನು ನಾವು ಇನ್ನೂ ಸಮರ್ಪಕವಾಗಿ ಕೆಲಸ ಮಾಡುವುದರಿಂದ ನಮ್ಮ ಜನರಿಗೆ ಹೆಚ್ಚಿನ ಸೇವೆ ಒದಗಲಿದೆ ಎಂದರು.

ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿದ ಜಿಲ್ಲೆ ಮತ್ತು ತಾಲೂಕುಗಳಿಗೆ ರಾಜ್ಯಮಟ್ಟದಲ್ಲಿ ಪ್ರತಿ ತಿಂಗಳು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅದರಂತೆಯೇ ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುವುದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವ ಅಧಿಕಾರಿ ನಿಗದಿತ ಸಮಯದಲ್ಲಿ ಅರ್ಜಿ ವಿಲೇವಾರಿಯಲ್ಲಿ ಉತ್ತಮ ಸೇವೆ ತೋರುತ್ತಾರೋ ಅವರಿಗೆ ಈ ಪ್ರಶಸ್ತಿ ದೊರೆಯಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ABOUT THE AUTHOR

...view details