ಬೆಂಗಳೂರು:ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಶಿಕ್ಷಣ ಸಚಿವರ ನಿರ್ಧಾರ, ಧೋರಣೆ ಸರಿಯಲ್ಲ. ಪರೀಕ್ಷೆಗಾಗಿ ಸರ್ಕಾರದ ಖಜಾನೆಯಿಂದ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದೆ. ಕಳೆದ ವರ್ಷ 3,000 ಪರೀಕ್ಷಾ ಕೇಂದ್ರಗಳಿದ್ದು ಈ ವರ್ಷ 6,000 ಪರೀಕ್ಷಾ ಕೇಂದ್ರಗಳಾಗಿವೆ ಎಂದು ಆರ್ಟಿ ಕಾರ್ಯಕರ್ತ ಸುರೇಶ್ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.
ಪೋಷಕರು, ಸರ್ಕಾರ ಶಿಕ್ಷಣ ಸಚಿವರ ನಿರ್ಧಾರ ಅರ್ಥಮಾಡಿಕೊಳ್ಳಬೇಕು. ಸಿ.ಬಿ.ಎಸ್.ಇ ಪರೀಕ್ಷೆಯನ್ನು ಪ್ರಧಾನಿ ರದ್ದು ಮಾಡಿದರು. ಹಾಗೆಯೇ ಶಿಕ್ಷಣ ಸಚಿವರು ಮಾನವೀಯತೆಯಿಂದ ವರ್ತಿಸಿ ಪರೀಕ್ಷೆ ರದ್ದು ಮಾಡಬೇಕು. ಈ ಶೈಕ್ಷಣಿಕ ವರ್ಷ 200 ರಿಂದ 300 ಶಿಕ್ಷಕರನ್ನು ಕೋವಿಡ್ ಕೆಲಸಕ್ಕೆ ನೇಮಿಸಿದ್ದು ಈ ವರ್ಷ ಸರಿಯಾಗಿ ಪಾಠ ಮಾಡಿಲ್ಲ. ಇಂಥ ಸಂದರ್ಭದಲ್ಲಿ ಪರೀಕ್ಷೆ ಮಾಡುವುದಕ್ಕೆ ನಿರ್ಧರಿಸಿದ್ದಕ್ಕೆ ನಾಚಿಕೆ ಆಗಬೇಕು ಎಂದು ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.