ಕರ್ನಾಟಕ

karnataka

ETV Bharat / city

ನಿಮ್ಮ ಶಾಸಕರೇ ಹಾದಿ ಬೀದಿಯಲ್ಲಿ ನಿಂತು ಸಿಎಂ ʼಫ್ಯಾಮಿಲಿ ಬಿಸಿನೆಸ್​ʼ ಬಗ್ಗೆ ಟೀಕಿಸಿದನ್ನ ಮರೆತುಬಿಟ್ರಾ? ಹೆಚ್‌ಡಿಕೆ ಪ್ರಶ್ನೆ - ಬಿಜೆಪಿ ನಾಯಕರು

ನಿಮ್ಮ ಪಕ್ಷದ ಶಾಸಕರೇ ಹಾದಿಬೀದಿಯಲ್ಲಿ ನಿಂತು ಮುಖ್ಯಮಂತ್ರಿ ʼಫ್ಯಾಮಿಲಿ ಬಿಸಿನೆಸ್ʼ ಬಗ್ಗೆ ಟೀಕೆ ಮಾಡಿದ್ದನ್ನು ಮರೆತುಬಿಟ್ರಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಿಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

RSS statement: clash between BJP leaders and Ex Cm HD Kumaraswamy
ನಿಮ್ಮ ಶಾಸಕರೇ ಹಾದಿಬೀದಿಯಲ್ಲಿ ನಿಂತು ಸಿಎಂ ʼಫ್ಯಾಮಿಲಿ ಬಿಸಿನೆಸ್ʼ ಬಗ್ಗೆ ಟೀಕಿಸಿದನ್ನ ಮರೆತುಬಿಟ್ರಾ? ಹೆಚ್‌ಡಿಕೆ ಪ್ರಶ್ನೆ

By

Published : Oct 7, 2021, 4:02 PM IST

ಬೆಂಗಳೂರು : ಆರ್‌ಎಸ್‌ಎಸ್ ಹೇಳಿಕೆ ಕುರಿತು ಬಿಜೆಪಿ ನಾಯಕರು ಹಾಗೂ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ನಡುವಿನ ಟ್ವಿಟರ್‌ ವಾರ್‌ ಮುಂದುವರಿದಿದ್ದು, ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ ನೀಡಿದ ಹೇಳಿಕೆಯಿಂದ ನೀವೆಲ್ಲರೂ ಮೈ ಪರಚಿಕೊಳ್ಳುತ್ತಿರುವುದನ್ನು ನೋಡಿದರೆ ಸತ್ಯ ಎಷ್ಟು ಕಹಿಯಾಗಿರುತ್ತದೆ ಎಂಬುದು ಅರ್ಥವಾಗುತ್ತದೆ ಎಂದು ಮಾಜಿ ಸಿಎಂ ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಟೀಕೆ ಮಾಡುವ ಭರದಲ್ಲಿ ಕಟೀಲ್ ಅವರುʼಫ್ಯಾಮಿಲಿ ಬಿಸಿನೆಸ್ʼ ಬಗ್ಗೆ ಹೇಳಿದ್ದಾರೆ. ಆದರೆ, ನಿಮ್ಮ ಪಕ್ಷದ ಫ್ಯಾಮಿಲಿ ಬಿಸಿನೆಸ್ʼಗೆ ಸಂಘದಲ್ಲಿಯೇ ತರಬೇತಿ ನೀಡಲಾಗುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಆಪರೇಷನ್ ಕಮಲದ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯನ್ನು ಕಣ್ಣೀರಿಡುತ್ತಲೇ ಕಳೆದುಕೊಂಡಿದ್ದು ಯಾಕೆ? ಅದು ಫ್ಯಾಮಿಲಿ ಬಿಸಿನೆಸ್ ನಿಂದ ಅಲ್ಲವೇ? ನಿಮ್ಮ ಪಕ್ಷದ ಶಾಸಕರೇ ಹಾದಿಬೀದಿಯಲ್ಲಿ ನಿಂತು ನಿಮ್ಮ ಮುಖ್ಯಮಂತ್ರಿಯ ʼಫ್ಯಾಮಿಲಿ ಬಿಸಿನೆಸ್ʼ ಬಗ್ಗೆ ಟೀಕೆ ಮಾಡಿದ್ದನ್ನು ಮರೆತುಬಿಟ್ಟಿರಾ ಕಟೀಲ್ ಅವರೇ? ಅನುಗ್ರಹದ ಹಿತ್ತಲಿನಲ್ಲಿ ನಡೆದ ವ್ಯವಹಾರಗಳ ಬಗ್ಗೆ ಹೇಳಲಿಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.

ಸ್ವಯಂ ಸೇವಕರನ್ನು ಗಡಿಗೆ ಕಳಿಸಿ:

ಐಎಎಸ್, ಐಪಿಎಸ್ ಅಭ್ಯರ್ಥಿಗಳಿಗೆ ತರಬೇತಿ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದೀರಿ, ಸರಿ. ಸಂಘದ ಸ್ವಯಂಸೇವಕರು ದೇಶ ಸೇವೆ ಮಾಡುತ್ತಿದ್ದಾರೆ ಎನ್ನುತ್ತೀರಿ. ಹಾಗಾದರೆ, ಎಲ್ಲರನ್ನೂ ಗಡಿಗೆ ಕಳಿಸಿ. ಗಡಿಯಲ್ಲಿ ಈಗ ಉದ್ವಿಗ್ನ ಪರಿಸ್ಥಿತಿ ಇದೆ. ಕಟೀಲ್ ಅವರೇ, ಸುಖಾಸುಮ್ಮನೆ ಮಾತನಾಡುವುದಲ್ಲ, ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಟ್ವೀಟ್ ಮೂಲಕವೇ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:ವೋಟಿಗಾಗಿ ಆರ್‌ಎಸ್‌ಎಸ್ ದೂಷಿಸಿ ನಿಮ್ಮ ವ್ಯಕ್ತಿತ್ವವನ್ನ ಚಿಲ್ಲರೆ ಮಾಡಬೇಡಿ: ಹೆಚ್‌ಡಿಕೆಗೆ ಕಟೀಲ್ ಸಲಹೆ

For All Latest Updates

ABOUT THE AUTHOR

...view details