ಬೆಂಗಳೂರು: ಜನರಿಗೆ ದಿನಸಿ ಹಂಚಲು ಹೋಗುತ್ತಿದ್ದ ಆರ್ಎಸ್ಎಸ್ ಕಾರ್ಯಕರ್ತನ ಮೇಲೆ ಹಲಸೂರು ಗೇಟ್ ಪೊಲೀಸರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ದಿನಸಿ ಹಂಚಲು ಹೋಗುತ್ತಿದ್ದ ಆರ್ಎಸ್ಎಸ್ ಕಾರ್ಯಕರ್ತನ ಮೇಲೆ ಪೊಲೀಸರಿಂದ ಹಲ್ಲೆ: ಆರೋಪ - ಆರ್ಎಸ್ಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ
ಲಾಕ್ಡೌನ್ ಹಿನ್ನೆಲೆ ಅನಗತ್ಯವಾಗಿ ಓಡಾಡುವವರ ಮೇಲೆ ಖಾಕಿ ಕಣ್ಣಿಟ್ಟಿದ್ದು, ನಿನ್ನೆ ದಿನಸಿ ಹಂಚಲು ಹೋಗುತ್ತಿದ್ದ ಆರ್ಎಸ್ಎಸ್ ಕಾರ್ಯಕರ್ತನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಲಾಕ್ಡೌನ್ ಹಿನ್ನೆಲೆ ಅನಗತ್ಯವಾಗಿ ಓಡಾಡುವವರ ಮೇಲೆ ಖಾಕಿ ಕಣ್ಣಿಟ್ಟಿದ್ದು, ತಪಾಸಣೆ ನಡೆಸಿ ನಂತರ ಬಿಟ್ಟು ಕಳುಹಿಸುತ್ತಿದ್ದಾರೆ. ಆರ್ಎಸ್ಎಸ್ ಸ್ವಯಂ ಸೇವಕರ ತಂಡ ಲಾಕ್ಡೌನ್ ಆದ ಮೊದಲ ದಿನದಿಂದಲೂ ಜನರಿಗೆ ದಿನಸಿ ವಿತರಿಸುತ್ತಿದ್ದಾರೆ. ನಿನ್ನೆ ಕಬ್ಬನ್ಪೇಟೆಯಿಂದ ಸಂಪಂಗಿ, ರಾಮನಗರಕ್ಕೆ ದಿನಸಿ ತೆಗೆದುಕೊಂಡು ಅಮಿತ್, ವಿನಯ್ ಪಾಂಡೆ, ಪ್ರತಾಪ್ ಎನ್ನುವವರು ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಹಲಸೂರು ಗೇಟ್ ಪೊಲೀಸರು ತಡೆದು ವಿಚಾರಣೆ ನಡೆಸಿದ್ದಾರೆ. ಪಾಸ್ ಇದ್ದರೂ ಸಹ ವಾಹನ ತಡೆದು ಪ್ರತಾಪ್ ಎಂಬುವವರ ಮೇಲೆ ಹಲ್ಲೆ ಮಾಡಿ ಎಂದು ಆರ್ಎಸ್ಎಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಈ ಸಂಬಂಧ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
TAGGED:
RSS activist assault news