ಬೆಂಗಳೂರು:ಬಿಜೆಪಿ ಪಕ್ಷದ ವಿರುದ್ದ ಆರ್ಆರ್ ನಗರ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿ ಕುಸುಮ ತಂದೆ ಹನುಮಂತರಾಯಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಉಪ ಚುನಾವಣಾ ಕದನ: ಗರಂ ಆದ ಕುಸುಮಾ ತಂದೆ, ಬಿಜೆಪಿ ಅಭ್ಯರ್ಥಿ ವಿರುದ್ದ ಗಂಭೀರ ಆರೋಪ ಬೆಳಗ್ಗೆಯಿಂದ ಸುಮಾರು ಶೇ 80 ರಷ್ಟು ಮತಗಟ್ಟೆಗಳಿಗೆ ಭೇಟಿ ಕೊಟ್ಟಿದ್ದೇನೆ. ಮತದಾರರು ಸಂತೋಷದಿಂದ ಮತದಾನ ಮಾಡಲು ಬರುತ್ತಿದ್ದು, ಬಿಜೆಪಿ ಅಭ್ಯರ್ಥಿ ತನ್ನ ಸೋಲಿನ ಭಯದಿಂದ ಹಲವಾರು ಕಡೆ ಅಕ್ರಮಗಳನ್ನು ಪ್ರಾರಂಭ ಮಾಡಿದ್ದಾರೆ.
ಈಗ ನಮ್ಮ ಕಾರ್ಯಕರ್ತರು ಕರೆ ಮಾಡಿ ನನಗೆ ಮಾಹಿತಿ ನೀಡಿದರು. ಕೊಟ್ಟಿಗೆಪಾಳ್ಯ ವಾರ್ಡ್ನ ಮಾಳಗಾಳದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಜಿ.ಮೋಹನ್ ಕುಮಾರ್ ಭಾಮೈದ ಹಾಗೂ ಸೋದರ ರಾಜಾರೋಷವಾಗಿ ಹಣ ಹಂಚಿಕೆ ಮಾಡುತ್ತಿದ್ದಾರೆ. ಒಂದು ಮತಕ್ಕೆ ಎರಡು ಸಾವಿರ ರೂಪಾಯಿ ಹಂಚಿಕೆ ಮಾಡ್ತಿದ್ದಾರೆ ಎಂದು ದೂರು ಬಂದಿದೆ.
ಈಗಾಗಲೇ ನಾನು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದೇನೆ. ಇಂತಹ ಅಕ್ರಮಗಳನ್ನು ಮಾಡಿ ಎಲೆಕ್ಷನ್ ಗೆಲ್ಲಬಹುದು ಅಂದುಕೊಂಡಿದ್ದಾರೆ. ಮತದಾರರು ಈಗಾಗಲೇ ಅವರನ್ನು ತಿರಸ್ಕಾರ ಮಾಡಬೇಕು ಅಂತ ನಿರ್ಧಾರ ಮಾಡಿದ್ದಾರೆ. ಹಣದಿಂದ ಎಲ್ಲವನ್ನೂ ಕೊಂಡುಕೊಳ್ಳಬಹುದು ಎಂದು ಬಿಜೆಪಿ ಅಭ್ಯರ್ಥಿ ಇವತ್ತು ನೀಚ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದರು.