ಕರ್ನಾಟಕ

karnataka

By

Published : Oct 28, 2020, 7:15 PM IST

Updated : Oct 28, 2020, 7:35 PM IST

ETV Bharat / city

ಉಪಕದನ: ಪ್ರೀತಿ - ವಿಶ್ವಾಸ ನೆನೆದು ಭಾವುಕರಾದ 'ಕೈ' ಅಭ್ಯರ್ಥಿ ಕುಸುಮಾ

ಆರ್​ ಆರ್ ನಗರದಲ್ಲಿ ಬುಧವಾರ ನಡೆದ ಮಂಗಳಮುಖಿಯರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಬದುಕಿನಲ್ಲಿ ತಮಗಾಗಿರುವ ನೋವು, ಸಂಕಟಗಳನ್ನು ನೆನೆದರು. ಜತೆಗೆ ಪ್ರಚಾರಕ್ಕೆ ಹೋದ ಕಡೆಯೆಲ್ಲ ಮನೆ ಮಗಳಿಗಿಂತಲೂ ಹೆಚ್ಚಾಗಿ ಎಲ್ಲರಿಂದಲೂ ತಮಗೆ ಸಿಗುತ್ತಿರುವ ಪ್ರೀತಿ, ವಿಶ್ವಾಸ, ಗೌರವಾದರಗಳನ್ನು ನೆನೆದು ಗದ್ಗದಿತರಾದರು.

rr-nagara-by-election-congress-candidate-kusuma-tears-news
ಉಪಕದನ: ಪ್ರೀತಿ-ವಿಶ್ವಾಸ ನೆನೆದು ಭಾವುಕರಾದ 'ಕೈ' ಅಭ್ಯರ್ಥಿ ಕುಸುಮ

ಬೆಂಗಳೂರು:ರಾಜರಾಜೇಶ್ವರಿನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾ ಹನುಮಂತರಾಯಪ್ಪ ಕೂಡ ಇಂದು ವೇದಿಕೆ ಮೇಲೆ ಕಣ್ಣೀರು ಹರಿಸಿದರು.

ಉಪಕದನ: ಪ್ರೀತಿ - ವಿಶ್ವಾಸ ನೆನೆದು ಭಾವುಕರಾದ 'ಕೈ' ಅಭ್ಯರ್ಥಿ ಕುಸುಮಾ

ಆರ್​ಆರ್ ನಗರದಲ್ಲಿ ಬುಧವಾರ ನಡೆದ ಮಂಗಳಮುಖಿಯರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಬದುಕಿನಲ್ಲಿ ತಮಗಾಗಿರುವ ನೋವು, ಸಂಕಟಗಳನ್ನು ನೆನೆದರು. ಜತೆಗೆ ಪ್ರಚಾರಕ್ಕೆ ಹೋದ ಕಡೆಯೆಲ್ಲ ಮನೆ ಮಗಳಿಗಿಂತಲೂ ಹೆಚ್ಚಾಗಿ ಎಲ್ಲರಿಂದಲೂ ತಮಗೆ ಸಿಗುತ್ತಿರುವ ಪ್ರೀತಿ, ವಿಶ್ವಾಸ, ಗೌರವಾದರಗಳನ್ನು ನೆನೆದು ಗದ್ಗದಿತರಾದರು.

ಸಭೆಯಲ್ಲಿ ಶಾಸಕಿ ಸೌಮ್ಯಾರೆಡ್ಡಿ, ಮಂಗಳಮುಖಿಯರ ಸಂಘದ ರಾಜ್ಯಾಧ್ಯಕ್ಷೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಅಕೈ ಪದ್ಮಶಾಲಿ ಮತ್ತಿತರರು ಭಾವುಕರಾದ ಕುಸುಮಾ ಅವರನ್ನು ಸಂತೈಸಿ ಸಮಾಧಾನಿಸುವ ಕಾರ್ಯ ಮಾಡಿದರು.

ವೇದಿಕೆ ಮೇಲೆ ಮಾತನಾಡಿದ ಕುಸುಮಾ ಹನುಮಂತರಾಯಪ್ಪ, ’’ಶೋಷಿತ ವರ್ಗದವರ ದನಿಯಾಗಿ ಕಾರ್ಯನಿರ್ವಹಿಸುತ್ತೇನೆ. ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಎದುರಿಸುವವರ ಪರವಾಗಿ ನಿಲ್ಲಲು ಬಯಸುತ್ತೇನೆ. ಯಾರಲ್ಲಿಯೂ ಯಾವುದೇ ರೀತಿ ಭೇದಭಾವ ನೋಡದೇ ಮನುಷ್ಯರನ್ನು ಮನುಷ್ಯರಾಗಿ ನೋಡೋಣ. ನನ್ನ ಕಡೆಯಿಂದ ನಿಮಗೆ ಒಂದೇ ರೀತಿಯಾದ ಗೌರವ ಸಿಗಲಿದೆ’’ ಎಂದರು.

ನಾನು ಶಾಸಕಿ ಆಗಲಿ ಅಥವಾ ಆಗದಿರಲಿ ನಿಮ್ಮ ಹೋರಾಟಗಳಿಗೆ ಸದಾ ಬೆಂಬಲ ಸೂಚಿಸಿ, ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತೇನೆ. ನೀವೆಲ್ಲ ಇಂದು ನನಗೆ ಅರಿಶಿಣ - ಕುಂಕುಮ ಕೊಟ್ಟು ಉಡಿ ತುಂಬಿ ಆಶೀರ್ವಾದ ಮಾಡಿದ್ದೀರಿ. ಇದು ನನ್ನ ಪುಣ್ಯವೇ ಇರಬೇಕು. 2015 ರಲ್ಲಿ ನಡೆದ ಘಟನೆಯ ನಂತರ ನನ್ನ ಜೀವನದಲ್ಲಿ ತುಂಬಾ ಕಳೆದುಕೊಂಡಿದ್ದೇನೆ ಎಂಬ ಭಾವನೆ ಇತ್ತು. ನಾನು ಬಹಳಷ್ಟು ನೊಂದಿದ್ದೇನೆ ಹಾಗೂ ಅನುಭವಿಸಿದ್ದೇನೆ ಕೂಡ. ಅರಿಶಿನ ಕುಂಕುಮದ ವಿಷಯ ನನಗೆ ತುಂಬಾ ಸಂತಸ ತಂದಿದೆ ಎಂದು ಹೇಳುತ್ತಿದ್ದಂತೆ ಭಾವುಕರಾಗಿ ಕಣ್ಣೀರು ಸುರಿಸಿದರು.

Last Updated : Oct 28, 2020, 7:35 PM IST

ABOUT THE AUTHOR

...view details