ಕರ್ನಾಟಕ

karnataka

ETV Bharat / city

ಆರ್​.ಆರ್.ನಗರದಲ್ಲಿ ಶೇ.39.15, ಶಿರಾದಲ್ಲಿ 77.34ರಷ್ಟು ಮತದಾನ.. LIVE UPDATES

RR Nagar, Shira By Election
ಆರ್​ಆರ್ ನಗರ - ಶಿರಾ ಮಿನಿಸಮರ

By

Published : Nov 3, 2020, 6:51 AM IST

Updated : Nov 3, 2020, 7:05 PM IST

17:56 November 03

ಶೇಕಡಾ 51.30ರಷ್ಟು ಮತದಾನ

  • ಉಪಚುನಾವಣೆಯಲ್ಲಿ ಒಟ್ಟಾರೆ ಶೇಕಡಾ 51.30ರಷ್ಟು ಮತದಾನ
  • ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 77.34ರಷ್ಟು ವೋಟಿಂಗ್​
  • ಬೆಂಗಳೂರಿನ ಆರ್​.ಆರ್.ನಗರದಲ್ಲಿ ಶೇಕಡಾ 39.15ರಷ್ಟು ಮತದಾನ

17:56 November 03

ಸೋಂಕಿತರಿಂದ ಮತದಾನ

  • ಆರ್​.ಆರ್​.ನಗರದಲ್ಲಿ ಮತದಾನ ಮಾಡಿದ ಕೊರೊನಾ ಸೋಂಕಿತ
  • 43 ವರ್ಷದ ಕೊರೊನಾ ಸೋಂಕಿತನಿಂದ ಮತದಾನ
  • ಮತದಾನದ ಬಳಿಕ ಮತಗಟ್ಟೆ ಸ್ಯಾನಿಟೈಸ್ ಮಾಡಿ ಇತರರಿಗೆ ಅವಕಾಶ

17:32 November 03

ಶಿರಾದಲ್ಲಿ ಶೇ.77.34ರಷ್ಟು ಮತದಾನ

  • ಶಿರಾದಲ್ಲಿ ಬಿರುಸಿನಿಂದ ಸಾಗಿದ ಮತದಾನ ಪ್ರಕ್ರಿಯೆ
  • ಸಂಜೆ 5 ಗಂಟೆ ವೇಳೆಗೆ ಶೇ.77.34ರಷ್ಟು ಮತದಾನ
  • ಈವರೆಗೆ 1,66,847 ಮಂದಿಯಿಂದ ಮತ ಚಲಾವಣೆ
  • ಮತ ಚಲಾವಣೆ ಮಾಡಿದ 82,019 ಮಹಿಳಾ ಮತದಾರರು
  • ಹಕ್ಕು ಚಲಾಯಿಸಿದ 84,828 ಪುರುಷ ಮತದಾರರು

16:47 November 03

ಸೋಂಕಿತರಿಂದ ಮತಚಲಾವಣೆಗೆ ಸಿದ್ಧತೆ

  • ಕೋವಿಡ್ ನಡುವೆ ಆರ್.ಆರ್.ನಗರ ಉಪಚುನಾವಣೆ
  • ಹಕ್ಕು ಚಲಾವಣೆಗೆ ಮತಗಟ್ಟೆಗಳಿಗೆ ಬರಲಿರುವ ಸೋಂಕಿತರು
  • ಸಂಜೆ 5ರಿಂದ 6 ಗಂಟೆಯವರೆಗೆ ಸೋಂಕಿತರಿಂದ ಮತದಾನ
  • ಒಟ್ಟು ಏಳು ಮಂದಿಯಿಂದ ಹಕ್ಕು ಚಲಾವಣಗೆ ಸಿದ್ಧತೆ
  • ಪಿಪಿಇ ಕಿಟ್ ಧರಿಸಿ ಬಂದು ಮತ ಹಾಕಲು ಅವಕಾಶ

16:10 November 03

ರಾಜರಾಜೇಶ್ವರಿ ನಗರದಲ್ಲಿ ಮತದಾನ ಕ್ಷೀಣ

  • ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ಕ್ಷೀಣ
  • ಮಧ್ಯಾಹ್ನ 3ರವರೆಗೆ ಕೇವಲ ಶೇ.32ರಷ್ಟು ಮಾತ್ರ ಮತದಾನ
  • ಬೆಳಗ್ಗೆ 9 ಗಂಟೆ ವೇಳೆಗೆ ಶೇಕಡಾ 6ರಷ್ಟು ಮತದಾನವಾಗಿತ್ತು
  • ಬೆಳಗ್ಗೆ 11 ಗಂಟೆ ವೇಳೆಗೆ ಶೇಕಡಾ 14ರಷ್ಟು ಮತದಾನವಾಗಿತ್ತು
  • ಮಧ್ಯಾಹ್ನ ಮೂರು ಗಂಟೆಯವರೆಗೆ  ಶೇಕಡಾ 32ರಷ್ಟು ವೋಟಿಂಗ್
  • ಸಂಜೆ ವೇಳೆಗೆ ಶೇಕಡಾ 50ರಷ್ಟು ಮತದಾನವಾಗುವುದು ಅನುಮಾನ
  • ಆರ್​.ಆರ್​.ನಗರಕ್ಕೆ ಹೋಲಿಸಿದರೆ ಶಿರಾದಲ್ಲೇ ಅತಿ ಹೆಚ್ಚು ಮತದಾನ

15:31 November 03

ಶಿರಾದಲ್ಲಿ ಈವರೆಗೆ ಶೇ.62.1ರಷ್ಟು ಮತದಾನ

  • ಶಿರಾ ಉಪಚುನಾವಣೆಯಲ್ಲಿ ಬಿರುಸಿನಿಂದ ಸಾಗಿದ ಮತದಾನ
  • ಮಧ್ಯಾಹ್ನ 3 ಗಂಟೆ ವೇಳೆಗೆ ಶೇಕಡಾ 62.1ರಷ್ಟು ಮತದಾನ
  • ಈವರೆಗೆ 1,33,974 ಮಂದಿಯಿಂದ ಮತ ಚಲಾವಣೆ
  • ಮತ ಚಲಾವಣೆ ಮಾಡಿದ 67,058 ಮಹಿಳಾ ಮತದಾರರು
  • ಹಕ್ಕು ಚಲಾಯಿಸಿದ 66, 916 ಪುರುಷ ಮತದಾರರು

15:00 November 03

''ಬಿಜೆಪಿಯಿಂದ ಚುನಾವಣಾ ಅಕ್ರಮ''

  • ಬೆಳಗ್ಗೆಯಿಂದ ಸುಮಾರು ಶೇಕಡಾ 80 ಮತಗಟ್ಟೆಗಳಿಗೆ ಭೇಟಿ ಕೊಟ್ಟಿದ್ದೇನೆ
  • ಮತದಾರರು ಸಂತೋಷದಿಂದ ಮತದಾನ ಮಾಡಲು ಬರುತ್ತಿದ್ದಾರೆ
  • ಬಿಜೆಪಿ ಅಭ್ಯರ್ಥಿ ತನ್ನ ಸೋಲಿನ ಭಯದಿಂದ ಅಕ್ರಮಗಳನ್ನು ಮಾಡಿದ್ದಾರೆ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮ ತಂದೆ ಹನುಮಂತರಾಯಪ್ಪ ಗಂಭೀರ ಆರೋಪ
  • ಈಗ ನಮ್ಮ ಕಾರ್ಯಕರ್ತರು ಕರೆ ಮಾಡಿ ನನಗೆ ಮಾಹಿತಿ ನೀಡಿದ್ದಾರೆ
  • ಜಿ. ಮೋಹನ್ ಕುಮಾರ್ ಭಾಮೈದ ಹಾಗೂ ಸೋದರನಿಂದ ಹಣ ಹಂಚಿಕೆ
  • ಬಿಬಿಎಂಪಿ ಮಾಜಿ  ಸದಸ್ಯರಾಗಿರುವ ಜಿ.ಮೋಹನ್ ಕುಮಾರ್
  • ಕೊಟ್ಟಿಗೆಪಾಳ್ಯ ವಾರ್ಡ್​​ನ ಮಾಲಗಾಳದಲ್ಲಿ ಹಣ ಹಂಚಿಕೆ ಆರೋಪ
  • ಮತಕ್ಕೆ  ಎರಡು ಸಾವಿರ ರೂಪಾಯಿ ಹಂಚಿಕೆ ಮಾಡುತ್ತಿದ್ದ ದೂರು ಬಂದಿದೆ
  • ಈಗಾಗಲೇ ನಾನು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದೇನೆ
  • ಅಕ್ರಮಗಳನ್ನು ಮಾಡಿ ಚುನಾವಣೆ ಗೆಲ್ಲಬಹುದು ಅಂದುಕೊಂಡಿದ್ದಾರೆ
  • ಮತದಾರರು ಈಗಾಗಲೇ ಅವರನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮ ತಂದೆ ಹನುಮಂತರಾಯಪ್ಪ  ಭರವಸೆ

14:27 November 03

ಕೈ-ಕಮಲ ಕಾರ್ಯಕರ್ತರ ನಡುವೆ ಗಲಾಟೆ

  • ಬಿಜೆಪಿ ಕಾರ್ಯಕರ್ತರಿಂದ ಮತದಾರರಿಗೆ ತಿರುಪತಿ ಲಡ್ಡು ವಿತರಣೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ
  • ಕೈ-ಕಮಲ ಕಾರ್ಯಕರ್ತರ ನಡುವೆ ಗಲಾಟೆ
  • ಜೆಪಿ ಪಾರ್ಕ್ ವಾರ್ಡ್ ಬಳಿ ಘಟನೆ
  • ಗಲಾಟೆ ಬಳಿಕ ಲಡ್ಡು ಹಂಚಿಕೆ ನಿಲ್ಲಿಸಿದ ಬಿಜೆಪಿ ಕಾರ್ಯಕರ್ತರು

13:27 November 03

ಬಿರುಸಿನಿಂದ ಸಾಗಿದ ಮತದಾನ

  • ಶಿರಾ ಉಪಚುನಾವಣೆ
  • ಬಿರುಸಿನಿಂದ ಸಾಗಿದ ಮತದಾನ
  • ಶೇ. 44.13 ರಷ್ಟು ಮತದಾರರಿಂದ ಹಕ್ಕು ಚಲಾವಣೆ

13:27 November 03

ವೋಟ್​ ಮಾಡಿದ ನಟ ದರ್ಶನ್

  • ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ರಿಂದ ಮತದಾನ
  • ಮೌಂಟ್​ ಕಾರ್ಮೆಲ್​​ ಶಾಲೆಯಲ್ಲಿ ವೋಟ್​ ಮಾಡಿದ ದಚ್ಚು
  • ಆರ್​ಆರ್​ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಭರ್ಜರಿ ಪ್ರಚಾರ ಮಾಡಿದ್ದ ನಟ

13:26 November 03

ಮತ ಚಲಾಯಿಸಿದ‌ ನಟ ‌ದಿಗಂತ್

  • ಆರ್​ಆರ್​ ನಗರದಲ್ಲಿ ಮತ ಚಲಾಯಿಸಿದ‌ ನಟ ‌ದಿಗಂತ್
  • ನಾಗರೀಕನಾಗಿ ವೋಟ್​ ಮಾಡೋದು ನನ್ನ ಜವಾಬ್ದಾರಿ
  • ಕೋವಿಡ್ ಹಿನ್ನೆಲೆ ಮತಗಟ್ಟೆಯಲ್ಲಿ ಸುರಕ್ಷಿತ ಕ್ರಮಗಳನ್ನ ತೆಗೆದುಕೊಂಡಿದ್ದಾರೆ
  • ಯಾರೂ ಭಯ ಪಡಬೇಕಾಗಿಲ್ಲ, ಧೈರ್ಯವಾಗಿ ಬಂದು ಮತ ಚಲಾಯಿಸಿ
  • ಸಾರ್ವಜನಿಕರಿಗೆ ದಿಗಂತ್ ಕರೆ

13:13 November 03

ಉಪಚುನಾವಣೆಯ ಶೇಕಡಾವಾರು ಮತದಾನ 32.16%

  • ಎರಡೂ ಕ್ಷೇತ್ರಗಳಲ್ಲಿ ಒಟ್ಟು ಶೇ. 32.16 ರಷ್ಟು ಮತದಾನ
  • ಆರ್​ಆರ್​ ನಗರದಲ್ಲಿ ಶೇ.26.58
  • ಶಿರಾದಲ್ಲಿ ಶೇ. 44.13  ರಷ್ಟು ವೋಟಿಂಗ್​​
  • ಮಧ್ಯಾಹ್ನ ಒಂದು ಗಂಟೆಯ ವರೆಗಿನ ಅಪ್​ಡೇಟ್ಸ್​​​

12:38 November 03

ಕೇವಲ 20% ಮತದಾನ ಆಗಿದೆ,4 ಗಂಟೆ ಬಳಿಕ ಪ್ರಮಾಣ ಹೆಚ್ಚಾಗಲಿದೆ: ಮುನಿರತ್ನ

  • ಆರ್.ಆರ್.ನಗರ ಮಿನಿಸಮರ
  • ಸೇಂಟ್​​ ಕ್ಲಾರೆಟ್ ಶಾಲೆಯ ಮತಗಟ್ಟೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಭೇಟಿ
  • ಇಷ್ಟು ಹೊತ್ತಿಗೆ ಶೇ.30ರಷ್ಟು ಮತದಾನ ಆಗಬೇಕಿತ್ತು
  • ಆದರೆ ಈ ಬಾರಿ ಶೇ.20ರಷ್ಟು ಮಾತ್ರ ಆಗಿದೆ
  • ಸಂಜೆ 4 ಗಂಟೆ ಮೇಲೆ ಮತದಾನದ ಪ್ರಮಾಣ ಹೆಚ್ಚಾಗುತ್ತದೆ ಎಂದ ಮುನಿರತ್ನ

12:26 November 03

ನಾನೇ ಬಿಜೆಪಿ ಅಭ್ಯರ್ಥಿಯೆಂದು ಮತದಾನ ಮಾಡಿದೆ: ಆರ್.ಅಶೋಕ್

  • ಕಂದಾಯ ಸಚಿವ ಆರ್.ಅಶೋಕ್​ರಿಂದ ಮತಚಲಾವಣೆ
  • ಸೇಂಟ್​‌ ಕ್ಲಾರೆಟ್‌ ಶಾಲೆಯ ಮತಗಟ್ಟೆಯಲ್ಲಿ ವೋಟಿಂಗ್​
  • ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ ಆರ್.ಅಶೋಕ್​ ಹಾಗೂ ಅವರ ಪತ್ನಿ
  • ನಾನೇ ಬಿಜೆಪಿ ಅಭ್ಯರ್ಥಿ ಎಂದು ಭಾವಿಸಿ ಇಂದು ಮತದಾನ‌ ಮಾಡಿದ್ದೇನೆ
  • ಕಳೆದ 15 ದಿನಗಳಲ್ಲಿ ಏನೇನು ಹೇಳಬೇಕು ಹೇಳಿದ್ದೇವೆ, ಏನೇನು ಕೇಳಬೇಕು ಕೇಳಿ ಬಿಟ್ಟಿದ್ದೇವೆ
  • ಇಂದು ನಿಮ್ಮ ಸರದಿ, ದಯವಿಟ್ಟು ಮತಗಟ್ಟೆಗೆ ಬಂದು ಮತದಾನ‌ ಮಾಡಿ
  • ಸಂಜೆ ಆರು ಗಂಟೆ ವರೆಗೆ ಎಲ್ಲರೂ ಮತದಾನ ಮಾಡಲು ಬರುತ್ತಾರೆ ಎಂಬ ವಿಶ್ವಾಸ ಇದೆ
  • ಕೋವಿಡ್ ಭೀತಿ ಬೇಡ, ಚುನಾವಣಾ ಆಯೋಗ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ
  • ವೋಟಿಂಗ್​ ಬಳಿಕ ಸಚಿವರ ಪ್ರತಿಕ್ರಿಯೆ

12:13 November 03

ಹಕ್ಕು ಚಲಾಯಿಸಿದ ಹಿರಿಯ ನಟ ಅವಿನಾಶ್

ಹಕ್ಕು ಚಲಾಯಿಸಿದ ಹಿರಿಯ ನಟ ಅವಿನಾಶ್
  • ಆರ್.ಆರ್.ನಗರ ಉಪಕದನ
  • ಹಕ್ಕು ಚಲಾಯಿಸಿದ ಹಿರಿಯ ನಟ ಅವಿನಾಶ್
  • ಮೌಂಟ್ ಕಾರ್ಮೆಲ್ ಸ್ಕೂಲ್​​ನಲ್ಲಿ ಮತದಾನ
  • ಯಾವುದೇ ಭಯವಿಲ್ಲದೆ ಸಾರ್ವಜನಿಕರು ಬಂದು ವೋಟ್​ ಮಾಡಿ ಎಂದ ನಟ

12:08 November 03

ಅರ್ಧಂಬರ್ಧ ಮಾಸ್ಕ್, ಕಣ್ಣಿಗೆ ಕಾಣದ ಸಾಮಾಜಿಕ ಅಂತರ

ಅರ್ಧಂಬರ್ಧ ಮಾಸ್ಕ್, ಕಣ್ಣಿಗೆ ಕಾಣದ ಸಾಮಾಜಿಕ ಅಂತರ
  • ರಾಜರಾಜೇಶ್ವರಿ ನಗರದ ಮತಕೇಂದ್ರಗಳಲ್ಲಿ ಕೋವಿಡ್ ನಿಯಮಗಳ ಪಾಲನೆಯಿಲ್ಲ
  • ಅರ್ಧಂಬರ್ಧ ಮಾಸ್ಕ್, ಕಣ್ಣಿಗೆ ಕಾಣದ ಸಾಮಾಜಿಕ ಅಂತರ
  • ಕಾರ್ಯಕರ್ತರು, ಮತದಾರರಿಗೆ ಎಚ್ಚರಿಕೆ ನೀಡಿ ಸುಸ್ತಾದ ಪೊಲೀಸರು

11:46 November 03

ಹಿರಿಯರ ಉತ್ಸಾಹ - ಯುವಕರ ತಾತ್ಸಾರ

  • ಮತದಾನಕ್ಕೆ ಹಿರಿಯ ನಾಗರಿಕರ ಹೆಚ್ಚು ಉತ್ಸಾಹ
  • ಹಕ್ಕು ಚಲಾಯಿಸಲು ಯುವ ಸಮುದಾಯದ ತಾತ್ಸಾರ
  • ಎಲ್ಲರೂ ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಿ ಎನ್ನುತ್ತಿರೋ ವೃದ್ಧರು

11:35 November 03

ನಟಿ ಕಾರುಣ್ಯ ರಾಮ್ ಮತದಾನ

  • ಆರ್​ ಆರ್​ ನಗರದಲ್ಲಿ ನಟಿ ಕಾರುಣ್ಯ ರಾಮ್ ಮತದಾನ
  • ತಂಗಿ, ತಾಯಿ ಜೊತೆ ಬಂದು ಬಿಇಟಿ ಶಾಲೆ ಮತಕೇಂದ್ರದಲ್ಲಿ ವೋಟ್​ ಮಾಡಿದ ನಟಿ
  • ನಾನು ಉತ್ತಮ್ಮ ವ್ಯಕ್ತಿಗೆ ಓಟ್ ಮಾಡಿದ್ದೇನೆ ಎಂದ ಕಾರುಣ್ಯ

11:15 November 03

ಮಾತಿನ ಚಕಮಕಿ

  • ಪೋಲಿಂಗ್ ಅಧಿಕಾರಿ ಹಾಗೂ ಸರ್ಕಾರಿ ನೌಕರರ ನಡುವೆ ಮಾತಿನ ಚಕಮಕಿ
  • ಜ್ಞಾನಭಾರತೀವಾರ್ಡ್‌ನ ಜ್ಞಾನ ಜ್ಯೋತಿ ನಗರದ ಹೆಚ್ಎಂಆರ್ ಸ್ಕೂಲ್​ನಲ್ಲಿ ಘಟನೆ
  • ರಜೆ ಸರ್ಕ್ಯುಲೇಶನ್ ಲೆಟರ್​​ಗೆ ಸಹಿ ವಿಚಾರವಾಗಿ ಜಗಳ
  • ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ನಿಯಂತ್ರಣ

11:12 November 03

ಉಪಚುನಾವಣೆಯ ಶೇಕಡಾವಾರು ಮತದಾನ 17.36%

  • ಎರಡೂ ಕ್ಷೇತ್ರಗಳಲ್ಲಿ ಒಟ್ಟು ಶೇ. 17.36 ರಷ್ಟು ಮತದಾನ
  • ಆರ್​ಆರ್​ ನಗರದಲ್ಲಿ ಶೇ.14.44
  • ಶಿರಾದಲ್ಲಿ ಶೇ. 23.63 ರಷ್ಟು ವೋಟಿಂಗ್​​

11:02 November 03

ಉಚಿತ ಆಟೋ ಸೇವೆ

ಉಚಿತ ಆಟೋ ಸೇವೆ
  • ವೃದ್ದರು, ವಿಶೇಷ ಚೇತನರಿಗೆ ಮತದಾನ ಮಾಡಲು ಉಚಿತ ಆಟೋ ಸೇವೆ
  • ಆಟೋ ಚಾಲಕ ಲಕ್ಷ್ಮೀಕಾಂತ್​ರ ಕಾರ್ಯಕ್ಕೆ ಮೆಚ್ಚುಗೆ
  • ಯಾವುದೇ ಪಕ್ಷಕ್ಕೆ ಪ್ರಚಾರ ಮಾಡದೆ ಈ ಸೇವೆ ಮಾಡುತ್ತಿದ್ದೇನೆ ಎಂದ ಲಕ್ಷ್ಮೀಕಾಂತ್

10:53 November 03

ಕೋವಿಡ್ ಆಸ್ಪತ್ರೆ ಪಕ್ಕದಲ್ಲೇ ಮತಕೇಂದ್ರ

ಕೋವಿಡ್ ಆಸ್ಪತ್ರೆ ಪಕ್ಕದಲ್ಲೇ ಮತಕೇಂದ್ರ
  • ಆರ್ ಆರ್ ನಗರ ಉಪಚುನಾವಣೆ
  • ಕೋವಿಡ್ ಆಸ್ಪತ್ರೆ ಪಕ್ಕದಲ್ಲೇ ಮತಕೇಂದ್ರ ಸ್ಥಾಪನೆ
  • ಲಗ್ಗೆರೆ ವಾರ್ಡ್​ನ ಬೆಥಲ್ ಮೆಡಿಕಲ್ ಮಿಷನ್ ಆಸ್ಪತ್ರೆಯ ಕಾಲೇಜಿನ ಮತಗಟ್ಟೆ
  • ಬೆಥಲ್ ಮೆಡಿಕಲ್ ಮಿಷನ್ ಆಸ್ಪತ್ರೆಯಲ್ಲಿ ಸುಮಾರು 17 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ
  • ಜನರು ಆತಂಕದಲ್ಲೇ ಮತದಾನ ಮಾಡುವ ಪರಿಸ್ಥಿತಿ ನಿರ್ಮಾಣ

10:46 November 03

ಕೊನೆಗೂ ಎಚ್ಚೆತ್ತ ಬಿಬಿಎಂಪಿ: ವಿಕಲಚೇತನರಿಗೆ ವೀಲ್ ಚೇರ್ ವ್ಯವಸ್ಥೆ

  • ವೀಲ್ ಚೇರ್ ಇಲ್ಲದ ಕಾರಣ ಮತಚಲಾಯಿಸದೇ ಹಿಂದಿರುಗಿದ್ದ ವಿಕಲಚೇತನ ಮತದಾರ ಆಂಥೋನಿ
  • ಮೌಂಟ್ ಕಾರ್ಮೆಲ್ ಸ್ಕೂಲ್ ಮತಕೇಂದ್ರದಲ್ಲಿ ನಡೆದಿದ್ದ ಘಟನೆ
  • ಈ ಬಗ್ಗೆ ಚುನಾವಣಾ ಸಿಬ್ಬಂದಿಯನ್ನ ಕೇಳಿದ್ರೆ ಬಿಬಿಎಂಪಿಯವರಿಗೆ ಕೇಳಬೇಕು ಎಂದಿದ್ರು
  • ಸುದ್ದಿವಾಹಿನಿಗಳಲ್ಲಿ ಈ ಬಗ್ಗೆ ವರದಿ ಪ್ರಸಾರ ಆಗುತ್ತಿದಂತೆ ಎಚ್ಚೆತ್ತ ಬಿಬಿಎಂಪಿ ಇದೀಗ ವೀಲ್ ಚೇರ್ ವ್ಯವಸ್ಥೆ ಮಾಡಿದೆ
  • ಮತ್ತೆ ಬಂದು ವೀಲ್ ಚೇರ್​​ನಲ್ಲಿ ತೆರಳಿ ತಮ್ಮ ಹಕ್ಕು ಚಲಾಯಿಸಿದ ಆಂಥೋನಿ

10:39 November 03

ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮರಿಂದ ಹಕ್ಕು ಚಲಾವಣೆ

  • ಶಿರಾ ಉಪಚುನಾವಣೆ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮರಿಂದ ಹಕ್ಕು ಚಲಾವಣೆ
  • ಶ್ರೀರಂಗನಾಥ ಶಾಲೆಯ ಮತಕೇಂದ್ರದಲ್ಲಿ ವೋಟಿಂಗ್​
  • ಅಳಿಯ ರಮೇಶ್ ಜೊತೆ ಬಂದು ಮತದಾನ
  • ಪತಿ ಸತ್ಯನಾರಾಯಣ ಮಾಡಿರುವ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಮತ ಕೇಳಿದ್ದೇನೆ
  • ಜನ ಇದಕ್ಕೆ ಸ್ಪಂದಿಸಲಿದ್ದಾರೆ ಎಂಬ ಭರವಸೆ ಇದೆ
  • ಮತ ಚಲಾವಣೆ ಬಳಿಕ ಅಮ್ಮಾಜಮ್ಮ ಪ್ರತಿಕ್ರಿಯೆ

10:33 November 03

ಕೇಂದ್ರ ಅರಸೇನಾ ಪಡೆ ಸಿಬ್ಬಂದಿ ಧರಿಸಿದ್ದ ಕೇಸರಿ ಬಣ್ಣದ ಮಾಸ್ಕ್ ತೆಗೆಸಿದ ಕೈ ಕಾರ್ಯಕರ್ತ

  • ಕೇಸರಿ ಬಣ್ಣದ ಮಾಸ್ಕ್ ಧರಿಸಿದ್ದ ಕೇಂದ್ರ ಅರಸೇನಾ ಪಡೆ ಸಿಬ್ಬಂದಿ
  • ಮಾಸ್ಕ್ ತೆಗೆಸಿದ ಕಾಂಗ್ರೆಸ್ ಕಾರ್ಯಕರ್ತ
  • ಬಳಿಕ ಕೈ ಕಾರ್ಯಕರ್ತ ನೀಡಿದ ಸರ್ಜಿಕಲ್ ಮಾಸ್ಕ್ ಧರಿಸಿದ ಸಿಬ್ಬಂದಿ

10:22 November 03

ಅಂಧ ದಂಪತಿಯಿಂದ ವೋಟಿಂಗ್

  • ಆರ್​ಆರ್​ ನಗರದಲ್ಲಿ ಅಂಧ ದಂಪತಿಯಿಂದ ಮತದಾನ
  • ಮಂಜುನಾಥ್, ನಾಗಮ್ಮ ದಂಪತಿಯಿಂದ ವೋಟಿಂಗ್
  • ಲಗ್ಗೆರೆಯ ಬೆತೆಲ್ ಮೆಡಿಕಲ್ ಮಿಷನ್​​ನಲ್ಲಿ ಮತಚಲಾವಣೆ

10:07 November 03

ಶೇ. 6.90 ರಷ್ಟು ಮತದಾನ

  • ಎರಡೂ ಕ್ಷೇತ್ರಗಳಲ್ಲಿ ಶೇ. 6.90 ರಷ್ಟು ಮತದಾನ
  • ಆರ್​ಆರ್​ ನಗರದಲ್ಲಿ ಶೇ.6.27
  • ಶಿರಾದಲ್ಲಿ ಶೇ. 8.45 ರಷ್ಟು ವೋಟಿಂಗ್​​

10:00 November 03

ತಿಮ್ಮಪ್ಪನ ಮೊರೆಹೋದ ಬಿಜೆಪಿ ಅಭ್ಯರ್ಥಿ ಮುನಿರತ್ನ

  • ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಆರಂಭಗೊಂಡಿದೆ
  • ಇತ್ತ ಬಿಜೆಪಿ ಅಭ್ಯರ್ಥಿ ಮುನಿರತ್ನ ತಿಮ್ಮಪ್ಪನ ಮೊರೆ ಹೋಗಿದ್ದಾರೆ
  • ವೈಯಾಲಿಕಾವಲ್​​ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ
  • ಬಾಲಾಜಿಗೆ ವಿಶೇಷ ಪೂಜೆ ಸಲ್ಲಿಸಿ ತಿಮ್ಮಪ್ಪನ ಆಶೀರ್ವಾದ ಪಡೆದ ಮುನಿರತ್ನ
  • ಪೂಜೆ ಬಳಿಕ ಆರ್.ಆರ್.ನಗರ ಕ್ಷೇತ್ರದ ಮತದಾನ ವೀಕ್ಷಣೆಗೆ ತೆರಳಿದರು
  • ವಿವಿಧ ವಾರ್ಡ್​ಗಳ ಮತಗಟ್ಟೆಗಳಿಗೆ ಭೇಟಿ ನೀಡಲಿದ್ದಾರೆ

09:48 November 03

ಕೋವಿಡ್ ನಿಯಮಗಳಿಗೆ ಡೊಂಟ್ ಕೇರ್

  • ಆರ್​​ಆರ್ ನಗರ ಉಪ ಚುನಾವಣೆ
  • ಲಗ್ಗೆರೆಯ ಬೂತ್​​ಗಳಲ್ಲಿ ಕೋವಿಡ್ ನಿಯಮಗಳಿಗೆ ಡೊಂಟ್ ಕೇರ್
  • ಗುಂಪು ಗುಂಪಾಗಿ ನಿಂತಿರುವ, ದೈಹಿಕ ಅಂತರವಿಲ್ಲದೆ ಕುಳಿತಿರುವ ಕಾರ್ಯಕರ್ತರು, ಬೂತ್​ ಏಜೆಂಟ್​ಗಳು,
  • ಸರಿಯಾಗಿ ಮಾಸ್ಕ್ ಹಾಕೊಳ್ಳದೇ ಬೂತ್​​ಗಳ ಬಳಿ ಬರುತ್ತಿರುವ ಜನರು

09:33 November 03

ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಶೇಕಡಾವಾರು ಮತದಾನ

  • ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ
  • ಬೆಳಗ್ಗೆ 9 ಗಂಟೆಯ ವರೆಗೆ ಶೇ.8.25 ರಷ್ಟು ಮತದಾನ

09:20 November 03

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮತ ಚಲಾವಣೆ

  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮತ ಚಲಾವಣೆ
  • ಶಿರಾ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ ಮತದಾನ
  • ಮತಗಟ್ಟೆ ಸಂಖ್ಯೆ 179 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮತಚಲಾವಣೆ
  • ಪತ್ನಿ ನಿರ್ಮಲ ಅವರೊಂದಿಗೆ ಆಗಮಿಸಿದ ಟಿ.ಬಿ.ಜಯಚಂದ್ರ
  • ಶಿರಾ ನಗರದ ಕೋಟೆ ಮಾರಮ್ಮ ದೇವಸ್ಥಾನ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕೆ

09:06 November 03

ಹಿರಿಯ ಮತದಾರರಿಗೆ - ವಿಶೇಷ ಚೇತನರಿಗೆ ತಲುಪೇ ಇಲ್ಲ ಪೋಸ್ಟಲ್ ವೋಟಿಂಗ್ ಸೌಲಭ್ಯ

  • ಬಿಬಿಎಂಪಿ ಎಲ್ಲಾ ಹಿರಿಯ ಮತದಾರರಿಗೆ, ವಿಶೇಷ ಚೇತನರಿಗೆ ಪೋಸ್ಟಲ್ ವ್ಯವಸ್ಥೆ ಮಾಡಿದೆ
  • ಆದರೆ ನೂರಾರು ಮಂದಿಗೆ ಈ ಸೌಲಭ್ಯ ತಲುಪಿಲ್ಲ
  • ಎಷ್ಟೋ ಜನರಿಗೆ ಇದರ ಮಾಹಿತಿಯೂ ಇಲ್ಲ
  • 90 ವರ್ಷ ಮೇಲ್ಪಟ್ಟ ವೃದ್ಧೆಯೊಬ್ಬರು ನಡೆಯಲು ಸಾಧ್ಯವಿಲ್ಲದಿದ್ದರೂ ಬಂದು ವೋಟ್​ ಮಾಡಿದ್ದಾರೆ

08:50 November 03

ಪೋಷಕರ ಜೊತೆ ಬಂದು ಮತದಾನ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

  • ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾರಿಂದ ಮತ ಚಲಾವಣೆ
  • ಜ್ಞಾನ ಭಾರತಿ ವಾರ್ಡ್‌ನ JSPU ಕಾಲೇಜಿನಲ್ಲಿ ವೋಟ್​ ಮಾಡಿದ ಕುಸುಮಾ
  • ಇದಕ್ಕೂ ಮೊದಲು ವಿಜಯನಗರದ ಆದಿಚುಂಚನಗಿರಿ ಮಠದಲ್ಲಿನ ಗಂಗಾಧರೇಶ್ವರ ದೇವರಿಗೆ ಪೂಜೆ
  • ತಂದೆ-ತಾಯಿ ಆಶೀರ್ವಾದ ಪಡೆದ ಕುಸುಮಾ
  • ಬಳಿಕ ಪೋಷಕರ ಜೊತೆ ಬಂದು ಮತದಾನ
  • ಖುದ್ದು ನಾನೇ ಮತ ಚಲಾಯಿಸಿದ್ದೇನೆ
  • ಪ್ರತಿಯೊಬ್ಬ ನಾಗರಿಕರು ಮನೆಯಿಂದ ಆಚೆ ಬಂದು ಅಂಜಿಕೆ, ಹೆದರಿಕೆ ಇಲ್ಲದೆ ವೋಟ್​ ಮಾಡಬೇಕು
  • ಚುನಾವಣಾ ಆಯೋಗ ಸಹ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದೆ, ಯಾವುದೇ ಆತಂಕ ಬೇಡ
  • ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಬೇಕು
  • ಇತರರನ್ನು ಮತಚಲಾವಣೆಗೆ ಪ್ರೇರೆಪಿಸಿ
  • ಎಲ್ಲಾ ಬೂತ್​ಗಳಿಗೂ ಭೇಟಿಕೊಟ್ಟು ಮತದಾನ ಪ್ರಕ್ರಿಯೆ ವೀಕ್ಷಿಸುತ್ತೇನೆ
  • ದಿನವಿಡೀ ಮತದಾನ ಕೇಂದ್ರಗಳಿಗೆ ಭೇಟಿ ಕೊಡುವ ಕಾರ್ಯ ಮಾಡುತ್ತೇನೆ
  • ಮತದಾನದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪ್ರತಿಕ್ರಿಯೆ

08:49 November 03

ಜೆಡಿಎಸ್​ ಅಭ್ಯರ್ಥಿ ಕೃಷ್ಣಮೂರ್ತಿ ಬೇಸರ

  • ವೋಟ್​ ಮಾಡಿದ ಬಳಿಕ ಆರ್​ಆರ್​ ನಗರ ಜೆಡಿಎಸ್​ ಅಭ್ಯರ್ಥಿ ಕೃಷ್ಣಮೂರ್ತಿ ಪ್ರತಿಕ್ರಿಯೆ
  • ಮತಗಟ್ಟೆಯಲ್ಲಿ ಪವರ್ ಕಟ್, ಬೆಸ್ಕಾಂ ಸ್ವಲ್ಪ ಎಚ್ಚರ ವಹಿಸಬೇಕಿತ್ತು
  • ಪೂಜೆ ಮಾಡೋದು ನಮ್ಮ ಸಂಪ್ರದಾಯ, ಆದರೆ ಅದಕ್ಕೆ ಅವಕಾಶ ಕೊಡಲಿಲ್ಲ
  • ಬೇಸರ ವ್ಯಕ್ತಪಡಿಸಿದ ಕೃಷ್ಣಮೂರ್ತಿ
  • ಕೊರೊನಾ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ ಮತದಾನ ಮಾಡಿ
  • ಎಲ್ಲರೂ ಕೂಡಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಎಂದ ಜೆಡಿಎಸ್​ ಅಭ್ಯರ್ಥಿ

08:20 November 03

ಮತದಾನ ಕೇಂದ್ರಕ್ಕೆ ಮಂಜುನಾಥ್ ಪ್ರಸಾದ್ ಭೇಟಿ

  • ಮತದಾನ ಕೇಂದ್ರಕ್ಕೆ ಭೇಟಿ‌ ನೀಡಿದ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್
  • ಆರ್ ಆರ್ ನಗರ ಬಿಇಟಿ ಶಾಲೆಯ ಮತದಾನ‌ ಕೇಂದ್ರಕ್ಕೆ ಭೇಟಿ
  • ಮತದಾನದ ವ್ಯವಸ್ಥೆ ಕುರಿತು ಪರಿಶೀಲನೆ

08:16 November 03

ಬಿಜೆಪಿ ಅಭ್ಯರ್ಥಿ ಮುನಿರತ್ನಗಿಲ್ಲ ಮತದಾನದ ಅವಕಾಶ.

ಬಿಜೆಪಿ ಅಭ್ಯರ್ಥಿ ಮುನಿರತ್ನ
  • ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನಗಿಲ್ಲ ಮತದಾನದ ಅವಕಾಶ
  • ಮುನಿರತ್ನರ ನಿವಾಸ ಇರುವುದು ಬೆಂಗಳೂರಿನ ವೈಯಾಲಿಕಾವಲ್​ನಲ್ಲಿ
  • ವೈಯಾಲಿಕಾವಲ್​, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ
  • ಹೀಗಾಗಿ ಅಭ್ಯರ್ಥಿಯಾದರೂ ಮುನಿರತ್ನ ಆರ್ ಆರ್ ನಗರದ ಮತದಾರರಲ್ಲ

08:06 November 03

ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಮತಚಲಾವಣೆ

  • ಶಿರಾ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಮತಚಲಾವಣೆ
  • ಮತಗಟ್ಟೆ ಸಂಖ್ಯೆ 7ರಲ್ಲಿ ವೋಟ್​ ಮಾಡಿದ ರಾಜೇಶ್ ಗೌಡ
  • ಚಿರತಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆ

08:06 November 03

ಪೊಲೀಸ್ ಬಿಗಿ ಭದ್ರತೆ

  • ಕಾಂಗ್ರೆಸ್ ಅಭ್ಯರ್ಥಿ ಮತದಾನ ಮಾಡಲಿರುವ ಮತಗಟ್ಟೆ ಬಳಿ ಪೊಲೀಸ್ ಬಿಗಿ ಭದ್ರತೆ
  • ನಾಗರಬಾವಿ ಮಲ್ಲತ್ತಹಳ್ಳಿ ಸುತ್ತಾ ರಿಸರ್ವ್ ಪೊಲೀಸ್ ಪಡೆ, ಅರೆಸೇನಾಪಡೆ ಕಣ್ಗಾವಲು
  • ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ

07:58 November 03

ಅಮ್ಮಾಜಮ್ಮಯಿಂದ ಪತಿ ಸಮಾಧಿಗೆ ಪೂಜೆ

  • ಶಿರಾ ಉಪಕದನ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಯಿಂದ ಪತಿ ಸಮಾಧಿಗೆ ಪೂಜೆ
  • ಅಮ್ಮಾಜಮ್ಮರ ಪತಿ ಬಿ.ಸತ್ಯನಾರಾಯಣರ ನಿಧನದಿಂದ ತೆರವಾಗಿದ್ದ ಸ್ಥಾನ

07:53 November 03

ಮಾದರಿ ಮತಗಟ್ಟೆ

ಮಾದರಿ ಮತಗಟ್ಟೆ
  • ಶಿರಾದಲ್ಲಿ ಮಾದರಿ ಮತಗಟ್ಟೆ
  • ಶಿರಾ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿನ ಮತಗಟ್ಟೆ
  • ಮತದಾರರನ್ನು ಬರಮಾಡಿಕೊಳ್ಳಲು ರೆಡ್ ಕಾರ್ಪೆಟ್

07:50 November 03

ನಟಿ ಅಮೂಲ್ಯಾರಿಂದ ಮತಚಲಾವಣೆ

  • ಆರ್ ಆರ್ ನಗರದಲ್ಲಿ ನಟಿ ಅಮೂಲ್ಯಾರಿಂದ ಮತಚಲಾವಣೆ
  • ಬಿಟಿಎಂಎಲ್​​ ವಾರ್ಡ್​ನ ಮೌಂಟ್​ ಕಾರ್ಮೆಲ್​ ಸ್ಕೂಲ್​ನಲ್ಲಿ ವೋಟ್​ ಮಾಡಿದ ನಟಿ
  • ಪತಿ ಜಗದೀಶ್​ರಿಂದ ಸಹ ಮತದಾನ

07:29 November 03

ಮತಗಟ್ಟೆ ಬಳಿ ಸರತಿ‌ಸಾಲಿನಲ್ಲಿ ನಿಂತಿರುವ ಮತದಾರರು

  • ಆರ್ ಆರ್ ನಗರ ಉಪಕದನ
  • ಭದ್ರತಾ ಸಿಬ್ಬಂದಿಯ ಸರ್ಪಗಾವಲಿನಲ್ಲಿ ಮತದಾನ ಪ್ರಕ್ರಿಯೆ ಆರಂಭ
  • ಬಿಇಟಿ ಕಾನ್ವೆಂಟ್ ಮತಗಟ್ಟೆ ಬಳಿ ಸರತಿ‌ಸಾಲಿನಲ್ಲಿ ನಿಂತಿರುವ ಮತದಾರರು
  • ಮಾಸ್ಕ್​​ ಧರಿಸಿ ಬಂದು ಸಾಮಾಜಿಕ ಅಂತರ ಕಾಯ್ದುಕೊಂಡ ಮತದಾರರು

07:24 November 03

ಲಗ್ಗೆರೆಯಲ್ಲಿ ಮತದಾನ ಪ್ರಾರಂಭ

ಲಗ್ಗೆರೆಯಲ್ಲಿ ಮತದಾನ ಪ್ರಾರಂಭ
  • ಆರ್ ಆರ್ ನಗರ ಉಪಚುನಾವಣೆ
  • ಲಗ್ಗೆರೆಯಲ್ಲಿ ಮತದಾನ ಪ್ರಾರಂಭ
  • ಕೋವಿಡ್ ಮುಂಜಾಗ್ರತಾ ಕ್ರಮಗಳನ್ನನುಸರಿಸಿ ಮತದಾನ ಪ್ರಕ್ರಿಯೆ ಆರಂಭ
  • ಮತದಾನ ಮಾಡುವವರಿಗೆ ಥರ್ಮಲ್​​ ಸ್ಕ್ಯಾನಿಂಗ್​​, ಸ್ಯಾನಿಟೈಸರ್

07:08 November 03

ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿಯಿಂದ ಮತ ಚಲಾವಣೆ

  • ಆರ್​ಆರ್ ನಗರ ಉಪಚುನಾವಣೆ
  • ಮೊಟ್ಟ ಮೊದಲನೆಯದಾಗಿ ಮತ ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ
  • ಜ್ಞಾನಭಾರತಿ ವಾರ್ಡ್​ನ ಹೆಚ್ಎಂಆರ್ ಇಂಟರ್ನ್ಯಾಷನಲ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾವಣೆ
  • ಪತ್ನಿ ಸುಮಿತ್ರಾರಿಂದ ಸಹ ಮತದಾನ

06:57 November 03

ಮತಗಟ್ಟೆ ಬಳಿ ಬಿಗಿ ಭದ್ರತೆ

ಆರ್​ಆರ್ ನಗರ ಉಪಕದನ
  • ಆರ್​ಆರ್ ನಗರ ಉಪಕದನ
  • ಜೆ‌ಪಿ ಪಾರ್ಕ್ ವಾರ್ಡ್​- 17 ರ ಬಿಬಿಎಂಪಿ ಕಚೇರಿಯಲ್ಲಿ ಮತದಾನಕ್ಕೆ ವ್ಯವಸ್ಥೆ
  • ಮತಗಟ್ಟೆ ಬಳಿ ಬಿಗಿ ಭದ್ರತೆ
  • ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡಲು ಬೂತ್ ಮುಂಭಾಗದಲ್ಲಿ ಮಾರ್ಕಿಂಗ್ ಮಾಡಲಾಗಿದೆ

06:11 November 03

ಆರ್​ಆರ್ ನಗರ - ಶಿರಾ ಮಿನಿಸಮರ

ಶಿರಾ ಉಪಕದನ

ಬೆಂಗಳೂರು/ತುಮಕೂರು: ಬೆಂಗಳೂರಿನ ರಾಜರಾಜೇಶ್ವರಿನಗರ ಹಾಗೂ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಗಳು ಉಪಚುನಾವಣೆಗೆ ಸಜ್ಜಾಗಿದ್ದು, 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ.  

4,62,201 ಮತದಾರರಿರುವ ಆರ್.ಆರ್.ನಗರ ಕ್ಷೇತ್ರದಲ್ಲಿ 678 ಮತಗಟ್ಟೆ ಹಾಗೂ 2,15,725 ಮತದಾರರನ್ನೊಳಗೊಂಡ ಶಿರಾ ಕ್ಷೇತ್ರದಲ್ಲಿ 330 ಮತಗಟ್ಟೆ ಸೇರಿ ಒಟ್ಟು 1008 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಹನುಮಂತರಾಯಪ್ಪ, ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ, ಪಕ್ಷೇತರರು ಸೇರಿದಂತೆ 16 ಮಂದಿ ಅಖಾಡದಲ್ಲಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ, ಪಕ್ಷೇತರರು ಸೇರಿದಂತೆ 15 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಮತದಾರರು ಮತ ಚಲಾಯಿಸಲು ತಮ್ಮ ಭಾವಚಿತ್ರವುಳ್ಳ ಗುರುತಿನ ಚೀಟಿ ಹಾಜರು ಪಡಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯ ದಾಖಲೆಗಳಾದ ಆಧಾರ್ ಕಾರ್ಡ್, ನರೇಗಾ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ, ಪಾನ್‌ಕಾರ್ಡ್, ಪಾಸ್‌ಪೋರ್ಟ್, ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡುವ ಗುರುತಿನ ಚೀಟಿ, ಸಂಸದರು-ಶಾಸಕರು ನೀಡಿದ ಅಧಿಕೃತ ಗುರುತಿನ ಚೀಟಿ, ಪದವಿ ಪ್ರಮಾಣ ಪತ್ರ, ವಿಕಲಚೇತನ ಪ್ರಮಾಣ ಪತ್ರವನ್ನು ಸಹ ಹಾಜರುಪಡಿಸಿ ಮತದಾನ ಚಲಾಯಿಸಬಹುದಾಗಿದೆ.

ವಿಕಲಚೇತನರಿಗೆ ಪ್ರತ್ಯೇಕ ವಾಹನಗಳು ಹಾಗೂ ವೀಲ್ ಚೇರ್‌ಗಳ ವ್ಯವಸ್ಥೆ ಮಾಡಲಾಗಿದೆ. ಮತಗಟ್ಎಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್​ ಹಾಗೂ ಶಸ್ತ್ರಾಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

Last Updated : Nov 3, 2020, 7:05 PM IST

ABOUT THE AUTHOR

...view details