ಕರ್ನಾಟಕ

karnataka

ETV Bharat / city

ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ನಟೋರಿಯಸ್ ರೌಡಿ ಸೈಕಲ್ ರವಿ ಹಾಜರು - ರೌಡಿ ಶೀಟರ್ ಸೈಕಲ್ ರವಿ

ಎನ್​ಡಿಪಿಎಸ್ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನುರಹಿತ ವಾರೆಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಇಂದು ಸೈಕಲ್ ರವಿ (Rowdysheeter Cycle Ravi) ಹಾಜರಾಗಿದ್ದಾನೆ.

ರೌಡಿ ಸೈಕಲ್ ರವಿ,rowdy cycle ravi
ರೌಡಿ ಸೈಕಲ್ ರವಿ

By

Published : Nov 18, 2021, 6:55 PM IST

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿದ್ದಾನೆ.

ಇತ್ತೀಚೆಗೆ ಸುಬ್ರಮಣ್ಯಪುರ ಪೊಲೀಸರು ಎನ್​​ಡಿಪಿಎಸ್ ಪ್ರಕರಣದಲ್ಲಿ ಪ್ರದೀಪ್ ಆಲಿಯಾಸ್ ಲಿಂಗ ಹಾಗೂ ಧೀರಯ್ಯ ಎಂಬುವರನ್ನು ಬಂಧಿಸಿದ್ದರು‌.‌ ಇದೇ ಪ್ರಕರಣದಲ್ಲಿ ಸೈಕಲ್ ರವಿ ಸಹ ಭಾಗಿಯಾಗಿ ತಲೆಮರೆಸಿಕೊಂಡು ಒಡಾಡುತ್ತಿದ್ದ.

ಎನ್​ಡಿಪಿಎಸ್ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೈಕಲ್ ರವಿ ವಿರುದ್ಧ ಜಾಮೀನುರಹಿತ ವಾರೆಂಟ್ (Non-Bailable Warrant) ಹೊರಡಿಸಿತ್ತು. ಈ ಸಂಬಂಧ‌ ಇಂದು ಕೋರ್ಟ್ ಮುಂದೆ ಹಾಜರಾಗಿದ್ದಾನೆ. ಬಳಿಕ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌‌ ಒಪ್ಪಿಸಿದ್ದಾರೆ.

ಒಟ್ಟು ಮೂರು ಸಕ್ರಿಯ ಪ್ರಕರಣಗಳಲ್ಲಿ ಬೇಕಾಗಿದ್ದ ‌ಸೈಕಲ್ ರವಿ, ಜಯನಗರ ಪೊಲೀಸರಿಗೂ ಡ್ರಗ್ಸ್ ಕೇಸ್​​ನ ವಿಚಾರಣೆಗೆ ಬೇಕಾಗಿದ್ದ. ಜೊತೆಗೆ, ಕೆ.ಜಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ದೀಪು ಎಂಬಾತನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಈತನಿಗಾಗಿ ದಕ್ಷಿಣ ವಿಭಾಗದ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಹುಡುಕಾಡುತ್ತಿದ್ದರು.

ABOUT THE AUTHOR

...view details