ಕರ್ನಾಟಕ

karnataka

ETV Bharat / city

ರೇಖಾ ಕದಿರೇಶ್ ಹತ್ಯೆ ಪ್ರಕರಣ: ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಆಶ್ರಯ ನೀಡಿದ್ದ ರೌಡಿಶೀಟರ್ ಅರೆಸ್ಟ್

ರೇಖಾ ಕದಿರೇಶ್ ಹತ್ಯೆ‌ ಪ್ರಕರಣದ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಆಶ್ರಯ ನೀಡಿದ್ದ ವಿವೇಕನಗರ ಠಾಣೆಯ ರೌಡಿಶೀಟರ್ ಸೆಲ್ವರಾಜ್ ಅಲಿಯಾಸ್ ಕ್ಯಾಪ್ಟನ್ ಪೂಬಾಳನ್ ಎಂಬಾತನನ್ನು ಬಂಧಿಸಿ, ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Bangalore
ರೌಡಿಶೀಟರ್ ಸೆಲ್ವರಾಜ್ ಅಲಿಯಾಸ್ ಕ್ಯಾಪ್ಟನ್ ಪೂಬಾಳನ್

By

Published : Jul 5, 2021, 12:45 PM IST

ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ‌ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಕೊಲೆ ಪ್ರಕರಣದ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಆಶ್ರಯ ನೀಡಿದ್ದ ರೌಡಿಶೀಟರ್​​ನನ್ನು ಕಾಟನ್ ಪೇಟೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ವಿವೇಕನಗರ ಠಾಣೆಯ ರೌಡಿಶೀಟರ್ ಸೆಲ್ವರಾಜ್ ಅಲಿಯಾಸ್ ಕ್ಯಾಪ್ಟನ್ ಪೂಬಾಳನ್ ಎಂಬಾತನನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಸೆಲ್ವರಾಜ್, ಬಂಧನಕ್ಕೆ ಒಳಗಾಗಿರುವ ಪೀಟರ್ ಸಹಚರನಾಗಿದ್ದಾನೆ. ಇಬ್ಬರು ಸೇರಿಕೊಂಡು ಈ ಹಿಂದೆ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಕೊಲೆ ಮಾಡಲು ಮೂರು ತಿಂಗಳ ಹಿಂದೆ ಬಂಧಿತ ಆರೋಪಿಗಳೊಂದಿಗೆ ಸಭೆ ನಡೆಸಿದ್ದ. ಹತ್ಯೆ ಬಳಿಕ ಏನು ಮಾಡಬೇಕು ಹಾಗೂ ಪೊಲೀಸರಿಗೆ ಕೈಗೆ ಸಿಗದಂತೆ ಕಾರ್ಯತಂತ್ರಗಳ ಬಗ್ಗೆ ಆರೋಪಿಗಳಿಗೆ ಸಲಹೆ ನೀಡಿದ್ದ ಎನ್ನಲಾಗ್ತಿದೆ.

ರೇಖಾ ಕೊಲೆ ಮಾಡಿದ ಬಳಿಕ ಪೀಟರ್, ಸೂರ್ಯ ಸೇರಿದಂತೆ ಕೆಲ ಆರೋಪಿಗಳಿಗೆ ಈಜಿಪುರದಲ್ಲಿರುವ ರೂಮ್​ನಲ್ಲಿ ಸೆಲ್ವರಾಜ್ ಆಶ್ರಯ ನೀಡಿ, ಉಟೋಪಚಾರ ಮಾಡಿದ್ದ. ಈ ಮೂಲಕ ರೇಖಾ ಕೊಲೆಯಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ‌. ಮಾರನೇ ದಿನ ಪೀಟರ್ ಹಾಗೂ ಸೂರ್ಯ ಎಂಬುವರ ಕಾಲಿಗೆ ಗುಂಡು ಹಾರಿಸಿ ಬಂಧಿಸುತ್ತಿದ್ದಂತೆ ಮೊಬೈಲ್ ಮನೆಯಲ್ಲೇ ಬಿಟ್ಟು ತಲೆಮರೆಸಿಕೊಂಡಿದ್ದ. ಈತನ ಚಲನವಲನೆ ಬಗ್ಗೆ ನಿಗಾ ಇಟ್ಟಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಗಾರ್ಡನ್ ಶಿವ ಎಂಬುವನ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗ್ತಿದೆ. ಈ ಬಗ್ಗೆ ಹೆಚ್ಚಿನ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ:ಹೊನ್ನಾವರ ಬಳಿ ನಾಡದೋಣಿ ದುರಂತ : ಓರ್ವ ಮೀನುಗಾರ ನಾಪತ್ತೆ, ಮೂವರ ರಕ್ಷಣೆ

ABOUT THE AUTHOR

...view details