ಕರ್ನಾಟಕ

karnataka

ETV Bharat / city

ಡ್ರಗ್ಸ್ ಕೇಸ್: ಬೆಂಗಳೂರಿನಲ್ಲಿ ಮಂಗಳೂರಿನ‌‌ ಕುಖ್ಯಾತ ರೌಡಿಶೀಟರ್ ಸೇರಿ ಇಬ್ಬರು ಅರೆಸ್ಟ್ - ಮಂಗಳೂರಿನ‌‌ ಕುಖ್ಯಾತ ರೌಡಿಶೀಟರ್

ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವುದಕ್ಕಾಗಿ ಹಸನ್ ಸಾಧಿಕ್ ಹಾಗೂ ತಲ್ಲಾಖಾನ್ ತಮ್ಮ ಪರಿಚಯಸ್ಥರಿಂದ ಡ್ರಗ್ಸ್ ಖರೀದಿಸಿ, ಮಾರಾಟಕ್ಕೆ ಯತ್ನಿಸುತ್ತಿದ್ದರು.

ರೌಡಿಶೀಟರ್ ಸೇರಿ ಇಬ್ಬರ ಅರೆಸ್ಟ್
bengaluru police

By

Published : Mar 30, 2022, 4:10 PM IST

ಬೆಂಗಳೂರು: ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಬಂದು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕುಖ್ಯಾತ ರೌಡಿಶೀಟರ್​ ಸೇರಿ ಇಬ್ಬರು ದಂಧೆಕೋರರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ವಿಟ್ಲ ಮೂಲದ ಹಸನ್ ಸಾಧಿಕ್, ಬೆನ್ಸನ್ ಟೌನ್ ನಿವಾಸಿ ತಲ್ಲಾಖಾನ್ ಬಂಧಿತ ಆರೋಪಿಗಳು. ಇತ್ತೀಚೆಗೆ ಹೆಬ್ಬಾಳ ನಾಗೇನಹಳ್ಳಿ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಾಹಿತಿ‌ ಮೇರೆಗೆ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 23 ಗ್ರಾಂ ಡ್ರಗ್ಸ್ ಹಾಗೂ ಒಂದು ರಾಯಲ್ ಎನ್​ಫೀಲ್ಡ್ ಬೈಕ್​ ಜಪ್ತಿ ಮಾಡಿದ್ದಾರೆ.

ಕುಖ್ಯಾತ ಆರೋಪಿಯಾಗಿರುವ ಹಸನ್​ ಸಾಧಿಕ್​ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಉಪ್ಪಿನಂಗಡಿ, ಪುತ್ತೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಕೊಲೆ ಯತ್ನ, ದೊಂಬಿ, ಅಪಹರಣ, ಕೊಲೆ ಬೆದರಿಕೆ ಸೇರಿದಂತೆ‌ 17 ಪ್ರಕರಣಗಳು ದಾಖಲಾಗಿವೆ. ಆರೋಪಿಯು ಜೀವನಕ್ಕಾಗಿ ಬೆಂಗಳೂರಿಗೆ ಮೂರು ತಿಂಗಳ ಹಿಂದಷ್ಟೇ ಬಂದು ಕಾರು ಮಾರಾಟದ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಅಲ್ಲದೇ, ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವುದಕ್ಕಾಗಿ ಹಸನ್ ಸಾಧಿಕ್ ಹಾಗೂ ತಲ್ಲಾಖಾನ್ ತಮ್ಮ ಪರಿಚಯಸ್ಥರಿಂದ ಡ್ರಗ್ಸ್ ಖರೀದಿಸಿ, ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಲಿದೆ. ಸದ್ಯ ಈ ಬಗ್ಗೆ ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೇಂದ್ರ ಸರ್ಕಾರಿ ನೌಕರರಿಗೆ ಯುಗಾದಿ ಗಿಫ್ಟ್‌: ಸಿಬ್ಬಂದಿ, ಪಿಂಚಣಿದಾರರಿಗೂ ತುಟ್ಟಿ ಭತ್ಯೆ ಏರಿಕೆ

ABOUT THE AUTHOR

...view details