ಬೆಂಗಳೂರು:ಪಿಕ್ ಅಪ್ ಆ್ಯಂಡ್ ಡ್ರಾಪ್ ನೆಪದಲ್ಲಿ ದರೋಡೆ ಮಾಡುತ್ತಿದ್ದ ಬಾಲಾಪರಾಧಿ ಸೇರಿ ನಾಲ್ವರು ಆರೋಪಿಗಳನ್ನ ಬಂಧಿಸುವಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರು ಚಾಲಕರಾದ ಸಂದೀಪ್, ಅನುಕುಮಾರ್,ಮನುಕುಮಾರ್, ಒಬ್ಬ ಬಾಲಾಪರಾಧಿ ಬಂಧಿತರು. ನವೆಂಬರ್ 4ರಂದು ನಾಗರಬಾವಿಯ ಗಂಗಾಧರಯ್ಯ ಅವರನ್ನು ಗೊರಗುಂಟೆಪಾಳ್ಯದಲ್ಲಿ ಹತ್ತಿಸಿಕೊಂಡು ನಗರಾದ್ಯಂತ ಸುತ್ತಾಡಿಸಿ ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್, ಉಂಗುರ, ಎಟಿಎಂ ಕಾರ್ಡ್, ನಗದು ₹ 500 ಕಸಿದುಕೊಂಡು ಪರಾರಿಯಾಗಿದ್ದರು.
ದರೋಡೆ ಮಾಡುತ್ತಿದ್ದ ಗ್ಯಾಂಗ್ ಅಂದರ್ ಗ್ಯಾಂಗ್ ತಮ್ಮ ಟಿಟಿ ವಾಹನದಲ್ಲಿ ನಾಗರಬಾವಿ, ಹೊಸಕೆರೆಹಳ್ಳಿ, ಆರ್.ಆರ್.ನಗರ ಸುತ್ತಾಡಿಸಿ ಹಲ್ಲೆ ಮಾಡಿ ಆರ್.ಆರ್.ನಗರದ ದ್ವಾರದ ಗಾಡಿಯಿಂದ ತಳ್ಳಿದರು. ಗಂಭೀರ ಗಾಯದಿಂದ ಗಂಗಾಧರಯ್ಯ ಸ್ಥಳೀಯರ ನೆರವಿನೊಂದಿಗೆ ಮನೆ ಸೇರಿದ್ದರು. ದರೋಡೆ ಬಗ್ಗೆ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.
ಕಾರ್ಯ ಪ್ರವೃತ್ತರಾದ ರಾಜರಾಜೇಶ್ವರಿ ನಗರ ಇನ್ಸ್ಪೆಕ್ಟರ್ ನವೀನ್ ಮತ್ತು ತಂಡ ಹಣ ಡ್ರಾ ಮಾಡಿದ್ದ ಎಟಿಎಂ ಸಿಸಿ.ಟಿ.ವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಆಧಾರದ ಮೇಲೆ ನಾಲ್ವರನ್ನ ವಶಕ್ಕೆ ಪಡೆದಿದ್ದಾರೆ. ದರೋಡೆ ಮಾಡಿದ್ದ ವಸ್ತುಗಳನ್ನು ಮಾಲೀಕ ಗಂಗಾಧರಯ್ಯ ಅವರಿಗೆ ತಲುಪಿಸಿದ್ದಾರೆ