ಕರ್ನಾಟಕ

karnataka

ETV Bharat / city

ಸಾಲ ತೀರಿಸಲು ದರೋಡೆ: ಬೆಂಗಳೂರಲ್ಲಿ ಇಬ್ಬರು ಆರೋಪಿಗಳು ಅರೆಸ್ಟ್​​ - ಬೆಂಗಳೂರಿನಲ್ಲಿ ಇಬ್ಬರು ಆರೋಪಿಗಳು ಅರೆಸ್ಟ್​​

ಸಾಲ ತೀರಿಸಲು ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

Robbery case Two accused held
ಸಚಿನ್ ಹಾಗೂ ಜಯಂತ್ ಬಂಧಿತ ಆರೋಪಿ

By

Published : Apr 30, 2022, 10:14 AM IST

ಬೆಂಗಳೂರು:ಸಾಲದ ಭಾರ ಇಳಿಸಿಕೊಳ್ಳಲು ವ್ಯವಸ್ಥಿತವಾಗಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಚಿನ್ ಹಾಗೂ ಜಯಂತ್ ಬಂಧಿತ ಆರೋಪಿಗಳು. ಏ. 21ರಂದು ರಾಜಾಜಿನಗರ ಆರ್​​ಟಿಓ ಕಚೇರಿಯಲ್ಲಿ ಸಂಗ್ರಹವಾಗಿದ್ದ 5 ಲಕ್ಷ ಹಣವನ್ನ ಸಮೀಪದ ಬ್ಯಾಂಕಿಗೆ ಜಮಾ ಮಾಡಲು ಕ್ಲರ್ಕ್ ಮಂಜುನಾಥ್ ಎಂಬುವವರು ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ಬೈಕ್​​ನಲ್ಲಿ ಬಂದಿದ್ದ ಈ ಆರೋಪಿಗಳು ಹಣದ ಬ್ಯಾಗ್​​ ಕಿತ್ತುಕೊಂಡು ಪರಾರಿಯಾಗಿದ್ದರು. ಆರೋಪಿಗಳ ವಿರುದ್ದ ರಾಜಾಜಿನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ದರೋಡೆ ಪ್ರಕರಣ: ಬಂಧಿತರಿಂದ ಜಪ್ತಿ ಮಾಡಲಾದ ಹಣ

ಆರು ವರ್ಷಗಳಿಂದ ಆರ್​​ಟಿಓ ಕಚೇರಿಯ ಪಾರ್ಟ್ ಒನ್ ಶಾಪ್​​ನಲ್ಲಿ ಕೆಲಸ ಮಾಡಿಕೊಂಡಿದ್ದ ಸಚಿನ್ ಹಣವನ್ನು ಆರ್​ಟಿಒ ಕಚೇರಿಗೆ ಕಟ್ಟುವ ಜವಾಬ್ದಾರಿ ನಿಭಾಯಿಸುತ್ತಿದ್ದ. ಆದರೆ, ಹಣದ ವಿಚಾರವಾಗಿ ಶಾಪ್ ಮಾಲೀಕನ ಜತೆ ಗಲಾಟೆ ಮಾಡಿ ಕೆಲಸ ಬಿಟ್ಟಿದ್ದ. ಮತ್ತೊಂದೆಡೆ ಸಾಲ ಜಾಸ್ತಿ ಇದ್ದಿದ್ದರಿಂದ ಗೆಳೆಯನ ಜತೆ ಸೇರಿ ಸಚಿನ್ ದರೋಡೆಗೆ ಸಂಚು ರೂಪಿಸಿದ್ದ.

ಅದರಂತೆ ಮೂರು ದಿನಗಳಿಂದ ಆರ್​​ಟಿಓ ಕ್ಲರ್ಕ್ ಮಂಜುನಾಥ್ ಬ್ಯಾಂಕಿಗೆ ಹೋಗಿ ಬರುವುದನ್ನ ಗಮನಿಸಿದ್ದ ಆರೋಪಿಗಳು ಏ.21ರಂದು ಕೃತ್ಯ ಎಸಗಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿರುವ ರಾಜಾಜಿನಗರ ಠಾಣಾ ಪೊಲೀಸರು 2.52 ಲಕ್ಷ ಹಣ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಭದ್ರಾವತಿ: ವಿದ್ಯುತ್ ಶಾಕ್​​​​ನಿಂದ ಬಾಲಕಿ ಸಾವು

ABOUT THE AUTHOR

...view details