ದೇವನಹಳ್ಳಿ(ಬೆಂಗಳೂರು) :ನಿನ್ನೆ (ಸೋಮವಾರ) ರಾತ್ರಿ ವೈದ್ಯನ ಮನೆಗೆ ನುಗ್ಗಿದ ದರೋಡೆಕೋರರ ಗ್ಯಾಂಗ್, ಮನೆಯವರಿಗೆ ಗನ್, ಚಾಕು ತೋರಿಸಿ ಚಿನ್ನಾಭರಣ ಹಾಗೂ ನಗದು ಹಣ ದೋಚಿ ಪರಾರಿಯಾಗಿದ್ದಾರೆ. ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಜ್ಯೂನಿಯರ್ ಕಾಲೇಜಿನ ಸಮೀಪ ಈ ಘಟನೆ ನಡೆದಿದೆ.
ಬೆಂಗಳೂರಲ್ಲಿ ವೈದ್ಯನ ಮನೆಗೆ ನುಗ್ಗಿದ ದರೋಡೆಕೋರರು.. ಚಾಕು, ಗನ್ ತೋರಿಸಿ ಚಿನ್ನಾಭರಣ, ನಗದು ಲೂಟಿ - Bengaluru latest crime news
ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ವೈದ್ಯ ರಾಜಶೇಖರ್ ಎಂಬುವರ ಮನೆಗೆ ನುಗಿದ್ದ ನಾಲ್ವರು ದರೋಡೆಕೋರರು ಮನೆಯವರನ್ನ ಬೆದರಿಸಿ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾದ್ದಾರೆ..
ಸೋಮವಾರ ರಾತ್ರಿ 8:45ರ ವೇಳೆಗೆ ವೈದ್ಯ ರಾಜಶೇಖರ್ ಎಂಬುವರ ಮನೆಗೆ ನುಗಿದ್ದ ನಾಲ್ವರು ದರೋಡೆಕೋರರು, ಮನೆಯವರನ್ನ ಬೆದರಿಸಿ ಮಾಂಗಲ್ಯ ಸರ, ಚಿನ್ನದ ಬಳೆ ಸೇರಿ 170 ಗ್ರಾಂ ಚಿನ್ನಾಭರಣ ಮತ್ತು 5 ಸಾವಿರ ರೂ. ದೋಚಿದ್ದಾರೆ ಎನ್ನಲಾಗ್ತಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನಾ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಪ್ರದೇಶದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದು, ಶೀಘ್ರವೇ ಕಳ್ಳರನ್ನ ಬಂಧಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಆಂಧ್ರಪ್ರದೇಶ : ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು ; ನಾಲ್ವರ ದಾರುಣ ಸಾವು