ದೇವನಹಳ್ಳಿ:ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸಾಯಿ ಬಾಬಾ ದೇಗುಲದ ಬಳಿ ನಡೆದಿದೆ.
ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ದೇವನಹಳ್ಳಿ ಬಳಿ ಇಬ್ಬರು ಯುವಕರ ಸಾವು - ದೇವನಹಳ್ಳಿ
ತಡರಾತ್ರಿ ಮೂವರು ಯುವಕರು ಒಂದೇ ಬೈಕ್ನಲ್ಲಿ ಆವತಿ ಕಡೆಯಿಂದ ದೇವನಹಳ್ಳಿಗೆ ಬರುತ್ತಿದ್ದಾಗ ಸಾಯಿಬಾಬಾ ದೇವಸ್ಥಾನದ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಮತ್ತೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವನಹಳ್ಳಿಯಲ್ಲಿ ತಡರಾತ್ರಿ ಭೀಕರ ಅಪಘಾತ
ದೇವನಹಳ್ಳಿ ತಾಲೂಕಿನ ತಿಮ್ಮಳ್ಳಿ ನಿವಾಸಿಗಳಾದ ಚರಣ್ (24), ಮೋಹನ್ (23) ಮೃತರು. ಬೈಕ್ನಲ್ಲಿದ್ದ ಮತ್ತೋರ್ವ ಯುವಕ ರಿಷಬ್ (23) ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ಮೂವರು ಯುವಕರು ಒಂದೇ ಬೈಕ್ನಲ್ಲಿ ಆವತಿ ಕಡೆಯಿಂದ ದೇವನಹಳ್ಳಿಗೆ ಬರುತ್ತಿದ್ದಾಗ ಸಾಯಿಬಾಬಾ ದೇವಸ್ಥಾನದ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಇನ್ನು ಸ್ಥಳಕ್ಕೆ ಭೇಟಿ ನೀಡಿದ ದೇವನಹಳ್ಳಿಯ ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.