ಕರ್ನಾಟಕ

karnataka

ETV Bharat / city

ವಿವಾಹ, ನಿವೇಶನದ ಆಮಿಷ; ಪತ್ನಿ ಕೊಟ್ಟ ಮಾಹಿತಿಯಿಂದ್ಲೇ ಬಂಧಿಯಾದ ವಂಚಕ! - ಮದುವೆಯಾಗುವುದಾಗಿ ನಂಬಿಸಿ ಮೋಸ

ವಯೋವೃದ್ದರು, ಮಹಿಳೆಯರು, ಅಂಗವಿಕಲರನ್ನು ಗುರಿಯಾಗಿಸಿಕೊಳ್ತಿದ್ದ ಆರೋಪಿ, ಮದುವೆ, ನಿವೇಶನ ಕೊಡಿಸುವುದಾಗಿ ಆಮಿಷ ಒಡ್ಡುತ್ತಿದ್ದ. ಹೀಗೆ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಆರೆಸ್ಟ್​

By

Published : Sep 19, 2019, 5:54 PM IST

ಬೆಂಗಳೂರು: ವಯೋವೃದ್ದರು, ಮಹಿಳೆಯರು, ಅಂಗವಿಕಲರನ್ನು ಟಾರ್ಗೆಟ್ ಮಾಡಿ ಸೈಟ್(ನಿವೇಶನ) ಕೊಡಿಸುವುದಾಗಿ ಹಾಗು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಡಿಸಿಪಿ, ಆರ್​ಎಂ ಸಿ ಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಣೇಶ್ ಅಲಿಯಾಸ್ ವಿಕ್ರಮ್​ ಬಂಧಿತ ಆರೋಪಿ.

ಈತ ಬ್ರಾಹ್ಮಿ ಮ್ಯಾಟ್ರಿಮೋನಿಯಲ್​ ವೆಬ್‌ಸೈಟ್‌ನಲ್ಲಿ ಪ್ರೊಫೈಲ್ ಹೊಂದಿದ್ದು, ಈ ವೇಳೆ ಹಲವಾರು ಯುವತಿಯರನ್ನು ನಂಬಿಸಿ ಮದುವೆಯಾಗಿದ್ದಾನೆ. ಇದೇ ರೀತಿ ಲಲಿತಾ ಎಂಬಾಕೆಯನ್ನು 2018 ರಲ್ಲಿ‌ ವರಿಸಿರುವ ವಿಚಾರ ಗೊತ್ತಾಗಿದೆ. ಹೀಗೆ ನಂಬಿಸಿ ಮೋಸ ಮಾಡಿ ಮದುವೆಯಾಗುತ್ತಿರುವ ವಿಚಾರವನ್ನು ತಿಳಿದ ಲಲಿತಾ, ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ‌ದಾಖಲಿಸಿದ್ದರು. ಹೀಗಾಗಿ ಆರೋಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಚಾರಣೆ ವೇಳೆ ತನ್ನ ಹೆಸರು ಗಣೇಶ್ ಅಲಿಯಾಸ್ ವಿಕ್ರಮ್​ ಎಂದೂ ಮೂಲತಃ ಮೈಸೂರು ನಗರದವನೆಂದು ಆರೋಪಿ ಹೇಳಿದ್ದಾನೆ. ಬ್ಯಾಂಕ್​ಗಳಲ್ಲಿ ಲೋನ್ ಹಾಗೂ ಸೈಟ್ ಕೊಡಿಸುವ ಕೆಲಸ ಮಾಡಿಕೊಂಡು ವಯೋವೃದ್ಧರಿಗೆ, ವಿಧವೆಯರಿಗೆ, ಮತ್ತು ಅಸಹಾಯಕ ಹೆಣ್ಣು ಮಕ್ಕಳಿಗೆ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ABOUT THE AUTHOR

...view details