ಬೆಂಗಳೂರು:2014 ರಲ್ಲಿ ಬನಶಂಕರಿ ಸಮೀಪದ ಇಟ್ಟಮಡುವಿನಲ್ಲಿ ನಡೆದಿದ್ದ ರಾಘವೇಂದ್ರ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ರಾಮಾಂಜನೇಯನಿಗೆ ಜೀವಾವಧಿ ಶಿಕ್ಷೆ ನೀಡಿ ಬೆಂಗಳೂರಿನ 62ನೇ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ:ಆಂಧ್ರಪ್ರದೇಶ ಮೂಲದ ರಾಮಾಂಜನೇಯ ಬೆಂಗಳೂರಿನಲ್ಲಿ ಶೌಚಾಲಯ ಸ್ವಚ್ಚಗೊಳಿಸುವ ಕೆಲಸ ಮಾಡಿಕೊಂಡಿದ್ದ. ವಾರಕ್ಕೊಮ್ಮೆ ಇಟ್ಟಮಡು 10ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ನಿವೃತ್ತ ನ್ಯಾಯಾಂಗ ಅಧಿಕಾರಿ ರಾಘವೇಂದ್ರ ರಾವ್ ಮನೆಗೆ ಬಂದು ಶೌಚಾಲಯ ಸ್ವಚ್ಚಗೊಳಿಸುತ್ತಿದ್ದ.
2014ರ ಡಿಸೆಂಬರ್ 17ರಂದು ಶುಚಿ ಕಾರ್ಯಕ್ಕೆ ಬಂದಿದ್ದ ರಾಮಾಂಜನೇಯ ಹ್ಯಾಮರ್ನಿಂದ ಹೊಡೆದು ರಾಘವೇಂದ್ರ ರಾವ್ ಅವರನ್ನು ಹತ್ಯೆ ಮಾಡಿದ್ದ. ಬಳಿಕ ರಾಘವೇಂದ್ರ ಪತ್ನಿ ಸುಧಾ ಕುಮಾರಿಗೂ ಸುತ್ತಿಗೆಯಿಂದ ಹಲ್ಲೆ ಮಾಡಿ ಅವರ ಕತ್ತಿನಲ್ಲಿದ್ದ 30 ಗ್ರಾಂ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ.