ಬೆಂಗಳೂರು :ಮುಂಗಾರು ಮಳೆ ರಾಜ್ಯದ ಬಹುಭಾಗ ತನ್ನ ಆರ್ಭಟವನ್ನು ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವೂ ಹೆಚ್ಚಾಗಿದೆ.
ರಾಜ್ಯದಲ್ಲಿ ಕಾವೇರಿ ಮತ್ತು ಕೃಷ್ಣಾ ಕಣಿವೆ ಪ್ರದೇಶಗಳ ನದಿಗಳಲ್ಲಿ ಮತ್ತು ಜಲವಿದ್ಯುತ್ ಉತ್ಪಾದನೆಗಾಗಿ ಇರುವ ಅಣೆಕಟ್ಟುಗಳಲ್ಲಿ ಒಟ್ಟು 860.27 ಟಿಎಂಸಿ ನೀರನ್ನು ಸಂಗ್ರಹಿಸಬಹುದಾಗಿದೆ. ಈಗ 458.72 ಟಿಎಂಸಿ ನೀರಿನ ಸಂಗ್ರಹವಿದೆ. ಹಿಂದಿನ ವರ್ಷ ಇದೇ ವೇಳೆಯಲ್ಲಿ 360.20 ಟಿಎಂಸಿ ನೀರು ಸಂಗ್ರಹವಾಗಿತ್ತು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್ಎನ್ಡಿಎಂಸಿ) ರಾಜ್ಯದ ಪ್ರಮುಖ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟವನ್ನು ಹಾಗೂ ಹೊರ ಹರಿವು ಮತ್ತು ಒಳಹರಿವಿನ ಪ್ರಮಾಣವನ್ನು ಬಿಡುಗಡೆ ಮಾಡಿದ್ದು, ಕೆಎಸ್ಎನ್ಡಿಎಂಸಿ ನೀಡಿರುವ ಮಾಹಿತಿ ಇಲ್ಲಿದೆ.
ಕೆಎಸ್ಎನ್ಡಿಎಂಸಿ ನೀಡಿರುವ ಮಾಹಿತಿ ಈ ಪ್ರಮುಖ ಜಲಾಶಯಗಳಲ್ಲಿ ಶೇ.53ರಷ್ಟು ನೀರಿನ ಸಂಗ್ರಹವಿದೆ. ಮಳೆಯ ಪ್ರಮಾಣ ಹೀಗೆಯೇ ಮುಂದುವರೆದರೆ, ಆದಷ್ಟು ಶೀಘ್ರ ಜಲಾಶಯಗಳು ತುಂಬುವ ಸಾಧ್ಯತೆಯಿದೆ.
ಇದನ್ನೂ ಓದಿ:ತಾಲಿಬಾನ್ ದಾಳಿಗೆ ಪುಲಿಟ್ಜರ್ ಪುರಸ್ಕೃತ ಭಾರತದ ಫೋಟೋ ಜರ್ನಲಿಸ್ಟ್ ಬಲಿ