ಕರ್ನಾಟಕ

karnataka

ETV Bharat / city

ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ಶಾಸಕರಿಗೆ ಸಿಎಂ ಯಡಿಯೂರಪ್ಪ ಬುಲಾವ್​ - ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ, ಸಚಿವ ಸ್ಥಾನದಿಂದ ವಂಚಿತರಾದ ಶಾಸಕರು ಬಹಿರಂಗವಾಗೇ ಅಸಮಾಧಾನ ಹೊರಹಾಕಿದ್ದಾರೆ. ಈ ಹಿನ್ನೆಲೆ ಸಿಎಂ ಯಡಿಯೂರಪ್ಪ ಅಸಮಾಧಾನಗೊಂಡಿರುವ ಶಾಸಕರ ಮನವೊಲಿಸುವ ಪ್ರಯತ್ನದಲ್ಲಿದ್ದಾರೆ.

ಮೀಟ್​ ಮಾಡುವಂತೆ ಶಾಸಕರಿಗೆ ಸಿಎಂ ಬುಲಾವ್​

By

Published : Aug 20, 2019, 7:21 PM IST

ಬೆಂಗಳೂರು: ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಬಿಜೆಪಿಯಲ್ಲಿ ಸಚಿವ ಸ್ಥಾನ ವಂಚಿತರ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ಅಸಮಾಧಾನಿತ ಶಾಸಕರ ಮನವೊಲಿಕೆಗೆ ಮುಂದಾಗಿರುವ ಸಿಎಂ ಯಡಿಯೂರಪ್ಪ ಶಾಸಕರಿಗೆ ಬುಲಾವ್ ನೀಡಿದ್ದಾರೆ.

ಸಚಿವ ಸ್ಥಾನ ಸಿಗದೇ ತೀವ್ರವಾಗಿ ಅಸಮಧಾನಗೊಂಡಿರುವ ಬಿಜೆಪಿಯ 10 ಕ್ಕೂ ಹೆಚ್ಚು ಶಾಸಕರಲ್ಲಿ ಬೇಸರ ಮನೆ ಮಾಡಿದ್ದು, ಖಾಸಗಿ ಹೋಟೆಲ್​ನಲ್ಲಿ ಊಟದ ನೆಪದಲ್ಲಿ ಸಭೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ‌ ಎಚ್ಚೆತ್ತುಕೊಂಡು ಶಾಸಕರ ಮನವೊಲಿಕೆಗೆ ಮುಂದಾಗಿದ್ದಾರೆ.

ಶಾಸಕರಾದ ಜಿ. ಹೆಚ್. ತಿಪ್ಪಾರೆಡ್ಡಿ, ಉಮೇಶ್ ಕತ್ತಿ, ಎಂ. ಪಿ. ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳಿ, ರವೀಂದ್ರನಾಥ್, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಎಂ. ಪಿ. ಕುಮಾರಸ್ವಾಮಿ, ಅಂಗಾರ, ಅಪ್ಪಚ್ಚು ರಂಜನ್, ಪೂರ್ಣಿಮಾ ಶ್ರೀನಿವಾಸ್, ಕೆ ಜಿ ಬೋಪಯ್ಯ, ಆನಂದ್ ವಿಶ್ವನಾಥ್ ಮಾಮನಿ ಹಾಗು ರಾಜುಗೌಡಗೆ ಸಿಎಂ ಬುಲಾವ್ ನೀಡಿದ್ದಾರೆ.

ಎಲ್ಲ ಶಾಸಕರೂ ಬೆಂಗಳೂರಿನಲ್ಲೇ ಇರುವ ಕಾರಣ ಇಂದು ಭೇಟಿ ಆಗಲು ಬಿಎಸ್​ವೈ ತಿಳಿಸಿದ್ದು, ಪಕ್ಷದ ಹೈಕಮಾಂಡ್ ಸೂಚನೆಯಂತೆ ಶಾಸಕರ ಮನವೊಲಿಕೆ ಕಸರತ್ತನ್ನು ಆರಂಭಿಸಿದ್ದಾರೆ.

ABOUT THE AUTHOR

...view details