ಬೆಂಗಳೂರು: ಗಲಭೆಯಲ್ಲಿಇಡೀ ಮನೆಯನ್ನೇ ಧ್ವಂಸಗೊಳಿಸಿದ್ದಾರೆ. ಮನೆಯಲ್ಲಿ ಆಸ್ತಿ ಪತ್ರಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಗೃಹಯೋಪಯೋಗಿ ವಸ್ತುಗಳು ಹಾಗೂ ಕಾರು, ಬೈಕ್ಗಳನ್ನು ನಾಶಪಡಿಸಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಮನೆಯಲ್ಲಿದ್ದ ನನ್ನ ತಂದೆ-ತಾಯಿ ಫೋಟೋ ಸುಟ್ಟು ಹೋಗಿರುವುದು ತೀವ್ರ ಬೇಸರವಾಗಿದೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಖೇದ ವ್ಯಕ್ತಪಡಿಸಿದರು.
ಅದು ನಾನು ಹುಟ್ಟಿದ ಮನೆ. ಚಿಕ್ಕ ವಯಸ್ಸಿನಿಂದಲೂ ಇಲ್ಲೇ ಇದ್ದೇನೆ. ನಾನು ಯಾರ ವಿರೋಧವನ್ನೂ ಕಟ್ಟಿಕೊಂಡಿರಲಿಲ್ಲ. ಮುಸಲ್ಮಾನರೆಲ್ಲರೂ ನಾವು ಅಣ್ಣ ತಮ್ಮಂದಿರ ಹಾಗೆ ಇದ್ದೇವೆ. ಯಾಕೆ ಹೀಗಾಯಿತು ಎಂಬುದೇ ಗೊತ್ತಾಗುತ್ತಿಲ್ಲ. ನ್ಯಾಯಯುತ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.