ಕರ್ನಾಟಕ

karnataka

ETV Bharat / city

ಬ್ಲ್ಯಾಕ್ ಫಂಗಸ್​​​ಗೆ ಬೇಕಾದ ಔಷಧ ಕಳುಹಿಸಲು ಕೇಂದ್ರಕ್ಕೆ ಮನವಿ : ಸಚಿವ ಆರ್. ಅಶೋಕ್ - ಬ್ಲ್ಯಾಕ್ ಫಂಗಸ್ ಮೆಡಿಸಿನ್

ರೆಮ್ಡೆಸಿವಿರ್​ ಔಷಧ ಕೊರತೆಯಂತೂ ಇಲ್ಲವೇ ಇಲ್ಲ. ಆ ಔಷಧಿಯ ಬೇಡಿಕೆ ಇದೀಗ ಇಳಿಕೆ ಕಂಡಿದೆ. ನಿತ್ಯ ರೆಮ್ಡೆಸಿವಿರ್​ 18-20 ಸಾವಿರ ಬೇಕಾಗಿತ್ತು. ಈಗ 5 ಸಾವಿರ ಪ್ರತಿದಿನ ಸಾಕಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

Request Center to send medicine for Black Fungus:R  Ashok
Request Center to send medicine for Black Fungus:R Ashok

By

Published : May 21, 2021, 5:37 PM IST

ಬೆಂಗಳೂರು: ಬ್ಲ್ಯಾಕ್ ಫಂಗಸ್ ಗೆ ಬೇಕಾದ ಮೆಡಿಸಿನ್ ಬಗ್ಗೆಯೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಜೊತೆ ಮಾತನಾಡಿದ್ದೇವೆ. ನಾಳೆ ಕೇಂದ್ರಕ್ಕೆ 10 ಸಾವಿರ ಬ್ಲ್ಯಾಕ್ ಫಂಗಸ್ ಮೆಡಿಸಿನ್ ಲಭ್ಯವಾಗಲಿದೆ. ಅದನ್ನು ರಾಜ್ಯಕ್ಕೆ ಹೆಚ್ಚು ಹಂಚಿಕೆ ಮಾಡುವಂತೆ ಗೌಡರ ಮೂಲಕ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡುತ್ತಿದ್ದೇವೆ ಎಂದು ಕ‌ಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ಮೆಡಿಸಿನ್ ವಿಚಾರದಲ್ಲಿ ಬಹಳಷ್ಡು ಫೋನ್ ಬರುತ್ತಿದೆ. ಆರೋಗ್ಯ ಇಲಾಖೆ, ಲಾಜಿಸ್ಟಿಕ್ಸ್ ಸೊಸೈಟಿ ಹಾಗೂ ಅಧಿಕಾರಿಗಳ ಸಭೆ ಮಾಡಿದ್ದೇನೆ. ಸದ್ಯ 1050 ಡೋಸ್ ಇದುವರೆಗೆ ಬಂದಿದೆ. ಅದು ಸ್ಟ್ರೀಮ್ ಲೈನ್ ಆಗಬೇಕಿತ್ತು. ಇವತ್ತು ಇದಕ್ಕೆ ಸಂಬಂಧಿಸಿದಂತೆ ಆದೇಶ ಮಾಡುತ್ತಾರೆ ಎಂದರು.

ಆನ್​​​​ಲೈನ್ ಮೂಲಕವೇ ಆಸ್ಪತ್ರೆ ಗಳು ಇಂಡೆಂಟ್ ಹಾಕಬೇಕು. ತಕ್ಷಣ ಆ ಆಸ್ಪತ್ರೆಗಳಿಗೆ ಬ್ಲ್ಯಾಕ್ ಫಂಗಸ್​​ಗೆ ಬೇಕಾದ ಔಷಧ ಕಳಿಸುತ್ತೇವೆ ಎಂದು ಹೇಳಿದರು. ರೆಮ್ಡೆಸಿವಿರ್​​ ಔಷಧ ಕೊರತೆಯಂತೂ ಇಲ್ಲವೇ ಇಲ್ಲ. ಆ ಔಷಧಿಯ ಬೇಡಿಕೆ ಇದೀಗ ಇಳಿಕೆ ಕಂಡಿದೆ. ಪ್ರತಿದಿನ ರೆಮ್ಡೆಸಿವಿರ್​ 18-20 ಸಾವಿರ ಬೇಕಾಗಿತ್ತು. ಈಗ 5 ಸಾವಿರ ಪ್ರತಿದಿನ ಸಾಕಾಗುತ್ತಿದೆ ಎಂದರು.

ಆಕ್ಸಿಜನ್ ಬೆಡ್ ಗೂ ಕೂಡ ಸದ್ಯ ಎಲ್ಲಿಯೂ ಒತ್ತಡ ಕಾಣಿಸುತ್ತಿಲ್ಲ. ವಿಪಕ್ಷ ಗಳು ಟೆಸ್ಟಿಂಗ್ ಕಡಿಮೆ ಮಾಡಿದ್ದೇವೆ ಅಂತ ಆರೋಪ‌ ಮಾಡ್ತಿದ್ದಾರೆ. ಜಿಲ್ಲಾಧಿಕಾರಿಗಳು ಪ್ರತಿ ಹಳ್ಳಿಗೂ ಹೋಗಿ ಟೆಸ್ಟಿಂಗ್ ಮಾಡುವಂತೆ ಆದೇಶ ಮಾಡುತ್ತಿದ್ದಾರೆ. ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿಗಳ ತಂಡ ಮಾಡಿ ಪ್ರತಿ ಹಳ್ಳಿಗಳಿಗೂ ಕೂಡ ಕಳುಹಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಈಗಾಗಲೇ ಜಾರಿಗೆ ತಂದಿದ್ದೇವೆ. ವೈದ್ಯಾಧಿಕಾರಿಗಳೇ ಹಳ್ಳಿಗೆ ನಡೆಯಿರಿ ಎನ್ನೋ ಕಾನ್ಸೆಫ್ಟ್ ಮಾಡ್ತಿದ್ದೇವೆ. ವೈದ್ಯಾಧಿಕಾರಿಗಳಿಗೆ ಒಂದು ವಾಹನ, ಒಂದು ತಿಂಗಳಿಗಾಗುವಷ್ಡು ಮೆಡಿಸಿನ್ ಹಾಗೂ ಪಿಪಿಇ‌ ಕಿಟ್ ಕೊಟ್ಟು ಕಳುಹಿಸಲಾಗುತ್ತಿದ್ದು, ಹಳ್ಳಿ ಹಳ್ಳಿಗೂ ಹೋಗಿ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿ ಟೆಸ್ಟಿಂಗ್ ಮಾಡಿ ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಣ ಮಾಡಬೇಕು ಎಂದು ಹೇಳಿದರು.

ಪತ್ರ ನಿಜ :

ಸಿದ್ದರಾಮಯ್ಯ ಪತ್ರ ಬರೆದಿರುವುದು ನಿಜ. ಆದರೆ ಇದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಿಪಕ್ಷ ನಾಯಕರಿಗೆ ಇಂಥ ಅವಕಾಶ ಇಲ್ಲ ಅಂತ ಅವರೇ ಬರೆದಿದ್ದರು. ಅದನ್ನು ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಲಿ. ಪತ್ರದ ಮೂಲಕ ಮಾಹಿತಿ ಪಡೆದುಕೊಳ್ಳಲು ಪೂರ್ಣ ಅವಕಾಶವಿದೆ. ಆದರೆ ಸಭೆ ನಡೆಸುವುದಕ್ಕೆ ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದರು.

ಅನಾಥ ಶವಗಳ ಅಸ್ಥಿ :

ಒಂದು ಸಾವಿರ ಅನಾಥ ಶವಗಳ ಅಸ್ಥಿ ಇದೆ. ಅಸಹಾಯಕ ಜನರ ಅಸ್ಥಿ ಸರ್ಕಾರದ ಬಳಿ ಇದೆ. ಯಾರೂ ಅಸ್ಥಿ ಪಡೆದಿಲ್ಲ. ಮೃತರ ಸಂಬಂಧಿಕರು ಮೊಬೈಲ್ ಸ್ವಿಚ್ಡ್​​ ಆಫ್ ಇದೆ. ನಾವು ಅಸ್ಥಿ ತೆಗೆದುಕೊಳ್ಳಲು ಮನವಿ ಮಾಡುತ್ತಿದ್ದೇವೆ. ಆದರೆ ಅವರವರ ಕಷ್ಟದಿಂದ ಅಸ್ಥಿ ಪಡೆಯುತ್ತಿಲ್ಲ. ಹಾಗಾಗಿ, ಸರ್ಕಾರದಿಂದಲೇ ಸಂಸ್ಕಾರ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಕಂದಾಯ ಇಲಾಖೆ ಗೌರವಯುತವಾಗಿ ಸಂಸ್ಕಾರ ಮಾಡುತ್ತದೆ. ಬಡವ ಬಲ್ಲಿದ ಎಂದು ಭೇದ ಭಾವ ಮಾಡಲ್ಲ. ಪಂಚಭೂತಗಳಲ್ಲಿ ಲೀನವಾಗುವಂತೆ ನೀರಿನಲ್ಲಿ ಸಂಪ್ರದಾಯಬದ್ಧವಾಗಿ ವ್ಯವಸ್ಥೆ ಮಾಡಲಿದ್ದೇವೆ ಎಂದರು.

ಸಾವಿನಲ್ಲಿ ರಾಜಕೀಯ :

ಸಾವಿನ ಬಗ್ಗೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಾವಿನ ಮೇಲೆ ರಾಜಕೀಯ ಮಾಡಿದವರು ಮೂಲೆ ಸೇರಿದ್ದಾರೆ. ಸಾವಿನ ಲೆಕ್ಕ ಮುಚ್ಚಿಡುವುದರಿಂದ ಸರ್ಕಾರಕ್ಕೆ ಯಾವುದೇ ಲಾಭ ಇಲ್ಲ. ಅಲ್ಲದೇ ಸತ್ತವರ ಬಗ್ಗೆ ಒಂದಲ್ಲ ಒಂದು ಕಡೆ ಮಾಹಿತಿ ಇರುತ್ತದೆ. ಇಂತಹ ಸಮಯದಲ್ಲಿ ರಾಜಕೀಯ ಹೇಳಿಕೆ ಕೊಡುವುದಕಿಂತಲೂ ಸರ್ಕಾರಕ್ಕೆ ಸಲಹೆ ಕೊಟ್ಟು ಸಹಕಾರ ನೀಡಲಿ. ಎಲ್ಲರೂ ಸೇರಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ತಿರುಗೇಟು ನೀಡಿದರು.

ABOUT THE AUTHOR

...view details