ಕರ್ನಾಟಕ

karnataka

ETV Bharat / city

ಅರಣ್ಯ ಇಲಾಖೆಯಲ್ಲಿ ಗಣರಾಜ್ಯೋತ್ಸವ ಆಚರಣೆ - ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್

71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಕರ್ನಾಟಕ ಅರಣ್ಯ ಇಲಾಖೆಯಲ್ಲಿಂದು ಸಂಭ್ರಮದಿಂದ ಆಚರಿಸಲಾಯ್ತು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಧ್ವಜಾರೋಹಣ ನೆರವೇರಿಸಿದರು.

ಅರಣ್ಯ ಇಲಾಖೆಯಲ್ಲಿ ಗಣರಾಜ್ಯೋತ್ಸವ ಆಚರಣೆ
ಅರಣ್ಯ ಇಲಾಖೆಯಲ್ಲಿ ಗಣರಾಜ್ಯೋತ್ಸವ ಆಚರಣೆ

By

Published : Jan 26, 2020, 3:25 PM IST

ಬೆಂಗಳೂರು: 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಕರ್ನಾಟಕ ಅರಣ್ಯ ಇಲಾಖೆಯಲ್ಲಿಂದು ಸಂಭ್ರಮದಿಂದ ಆಚರಿಸಲಾಯ್ತು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಧ್ವಜಾರೋಹಣ ನೆರವೇರಿಸಿದರು.

ಅರಣ್ಯ ಇಲಾಖೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಅರಣ್ಯಾಧಿಕಾರಿಗಳ ಕಾರ್ಯಕ್ಷಮತೆಯನ್ನು ಕೊಂಡಾಡಿದರು. ಬದ್ಧತೆ ಅನ್ನೋದು ಅಧಿಕಾರಿಗಳಿಗೆ ಅತೀ ಮುಖ್ಯ, ಎಲ್ಲರೂ ನಮ್ಮನ್ನು ಬೈಯ್ಯುತ್ತಿದ್ದಾರೆ ಅಂದ್ರೆ ನಾವು ಅರಣ್ಯ ಸಂರಕ್ಷಣೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ ಎಂದರ್ಥ. ವಿಧಾನಸಭೆಯಲ್ಲಿ ಎಲ್ಲರೂ ಅರಣ್ಯ ಇಲಾಖೆಯನ್ನು ಟೀಕೆ ಮಾಡ್ತಿದ್ದಾರೆ. ನಾವು ಯಾರಿಗೂ ಭೂಮಿಯನ್ನು ಬಿಟ್ಟು ಕೊಡದೇ ನಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಗದಗದಲ್ಲಿ ಒತ್ತುವರಿ ತೆರವು ಮಾಡುವ ವಿಚಾರದಲ್ಲಿ ಅಧಿಕಾರಿಯೊಬ್ಬರ ಮೇಲೆ ದೌರ್ಜನ್ಯದ ಕೇಸ್ ಹಾಕಲಾಗಿದೆ. ಈ ರೀತಿಯ ಅನೇಕ ವಿಷಯಗಳಲ್ಲಿ ಹಲವು ಕೇಸ್‍ಗಳನ್ನು ನಾವು ಎದುರಿಸುತ್ತಿದ್ದೇವೆ. ಇಷ್ಟಾದ್ರೂ ಕಾಡಿನ ರಕ್ಷಣೆಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ನಮ್ಮ ಎದುರಿಗೆ ಹುಲಿ, ಆನೆ ಬಂದು ನಿಂತಾಗ ನಮ್ಮ ಪ್ರಾಣ ಹೋಗುತ್ತೆ ಅನ್ನೋದು ಗೊತ್ತಿದ್ದರೂ, ಕರ್ತವ್ಯ ನಿಭಾಯಿಸುತ್ತಿರೋದು ಹೆಮ್ಮೆಯ ವಿಷಯ ಎಂದು ಪುನಾಟಿ ಶ್ರೀಧರ್ ಮೆಚ್ಚುಗೆ ವ್ಯಕ್ತಪಡಿಸಿದರು.

ನನ್ನ ನಿವೃತ್ತಿಗೆ ಇನ್ನು 3 ತಿಂಗಳು ಬಾಕಿ ಇದ್ದು, ಒತ್ತುವರಿ ತೆರವು, ಪ್ರಚಾರ ಸೇರಿದಂತೆ ಇಲಾಖೆಯಲ್ಲಿ ವಿವಿಧ ಯೋಜನೆಗಳ ಕುರಿತು 135 ರಿಂದ 140 ವಿಷಯಗಳ ಕುರಿತು ಪಟ್ಟಿ ಮಾಡಿಕೊಂಡಿದ್ದು, ನನ್ನ ಉಳಿದ ಅವಧಿಯಲ್ಲಿ ಇವುಗಳ ಅನುಷ್ಟಾನಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇನ್ನು ಸಮಾರಂಭದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಸಂಜಯ್ ಮೋಹನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಚಾರ & ಐಸಿಟಿ) ಶಿವರಾಜ್ ಸಿಂಗ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗಮೋಹನ್ ಶರ್ಮಾ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆಡಳಿತ ಮತ್ತು ಸಮನ್ವಯ) ಡಾ. ಸಂಜಯ್ ಎಸ್. ಬಿಜ್ಜೂರು ಸೇರಿದಂತೆ ಇತರರು ಹಾಜರಿದ್ದರು.

ABOUT THE AUTHOR

...view details