ನೆಲಮಂಗಲ:ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ ಮಾರಾಟ ಜಾಲವನ್ನು ಮಾದನಾಯಕನಹಳ್ಳಿ ಪೊಲೀಸರು ಬೇಧಿಸುವ ಮೂಲಕ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ಚಿಕ್ಕಗೊಲ್ಲರಹಟ್ಟಿಯ ಕೆಂಗನಾರ್ ಆಸ್ಪತ್ರೆಯ ಮುಂಭಾಗ ರೆಮ್ಡೆಸಿವಿರ್ ಇಂಜೆಕ್ಷನ್ ಮಾರಾಟ ಮಾಡುವಾಗ ಪೊಲೀಸರ ಕೈಗೆ ಆರೋಪಿ ಮಂಜುನಾಥ್.ಎಸ್ ಸಿಕ್ಕಿಬಿದ್ದಿದ್ದಾನೆ. ಬಳಿಕ ಮಾರಾಟ ದಂಧೆಯಲ್ಲಿದ್ದ ನಾಗರಾಜ್, ಸುರೇಶ್ ಕಣ್ಣನ್, ಝಾನ್ಸಿ ಸೇರಿದಂತೆ ನಾಲ್ಕು ಆರೋಪಿಗಳನ್ನ ಬಂಧಿಸಲಾಗಿದೆ.
ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ: ಮಾದನಾಯಕನಹಳ್ಳಿ ನಾಲ್ವರ ಬಂಧನ - ಕರ್ನಾಟಕ ಲಾಕ್ಡೌನ್
ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಾದನಾಯಕನಹಳ್ಳಿಯಲ್ಲಿ ಪೊಲೀಸರು ಕಾರ್ಯಾಚರಣೆ ಮಾಡಿ, ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ
ನಂತರ ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ ಜಾಲದಲ್ಲಿದ್ದ ಇನ್ನುಳಿದ ಆರೋಪಿಗಳನ್ನ ಸಹ ಬಂಧಿಸಲಾಗಿದೆ. ಬಂಧಿತರಿಂದ 4 ರೆಮ್ಡೆಸಿವಿರ್ ವಶಕ್ಕೆ ಪಡೆಯಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಔಷಧ ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆ)
Last Updated : May 8, 2021, 6:36 AM IST