ಬೆಂಗಳೂರು: ಹಲವಾರು ರಾಜ್ಯಗಳಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಕೊರತೆ ಎದುರಾಗಿತ್ತು. ಆದರೆ ಇದೀಗ ಎಲ್ಲಾ ರಾಜ್ಯಗಳಿಗೂ ಚುಚ್ಚುಮದ್ದು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ. ಈ ಸಂಬಂಧ ಸಚಿವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ವಿವಿಧ ರಾಜ್ಯಗಳಿಗೆ ಮೇ 10ರಿಂದ 16ರವರೆಗಿನ ಬಳಕೆಗಾಗಿ 19.2 ಲಕ್ಷ ರೆಮ್ಡೆಸಿವಿರ್ ಬಾಟಲ್ಗಳನ್ನು ಹಂಚಿಕೆ ಮಾಡಿದ್ದೇವೆ. ಈ ಪೈಕಿ ಕರ್ನಾಟಕಕ್ಕೆ 2,62,346 ಬಾಟಲ್ (13.6%) ಒದಗಿಸಲಾಗಿದೆ. ಏಪ್ರಿಲ್ 21ರಿಂದ ವಿವಿಧ ರಾಜ್ಯಗಳಿಗೆ ಒಟ್ಟು 53 ಲಕ್ಷ ಬಾಟಲಿಯನ್ನು ಹಂಚಿಕೆ ಮಾಡಲಾಗಿದ್ದು ರಾಜ್ಯದ ಪಾಲು 5.75 ಲಕ್ಷ ಆಗಿದೆ ಅಂತ ತಿಳಿಸಿದ್ದಾರೆ.