ಕರ್ನಾಟಕ

karnataka

ETV Bharat / city

ದೇವೇಗೌಡರ ವಿರುದ್ಧ ಎಫ್‌ಬಿನಲ್ಲಿ ಟೀಕಿಸಿದ್ದ ವ್ಯಕ್ತಿ ವಿರುದ್ಧ ಕೇಸ್‌.. ಪೊಲೀಸರಿಗೇ ಹೈಕೋರ್ಟ್‌ ದಂಡ! - Former Prime Minister HD DeveGowda

ಫೇಸ್‌ಬುಕ್​ ಪೇಜ್‌ನಲ್ಲಿ ಜೆಡಿಎಸ್ ವರಿಷ್ಠ,ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕುಟುಂಬದ ವಿರುದ್ಧ ಪೋಸ್ಟ್ ಮಾಡಿದ ಪ್ರಕರಣ ಸಂಬಂಧ ಶ್ರೀರಾಂಪುರ ಪೊಲೀಸರು ದಾಖಲಿಸಿದ್ದ ಎಫ್ಐಆರ್​​ನ ಹೈಕೋರ್ಟ್ ರದ್ದು ಮಾಡಿದೆ. ಜತೆಗೆ ಪೊಲೀಸರಿಗೇ ₹1ಲಕ್ಷ ದಂಡ ಹಾಕಿ ಇಲಾಖಾ ತನಿಖೆಗೆ ಆದೇಶ ನೀಡಿದೆ.0

ದೇವೇಗೌಡರ ಕುಟುಂಬದ ವಿರುದ್ಧ ಫೇಸ್ಬುಕ್​ನಲ್ಲಿ ಟೀಕೆ...ಖಾಸಗಿ ವ್ಯಕ್ತಿ ವಿರುದ್ಧ ಮೊಕದ್ದಮೆ ದಾಖಲಿಸಿದ ಪೊಲೀಸರಿಗೆ ಹೈಕೋರ್ಟ್ ದಂಡ

By

Published : Oct 11, 2019, 5:45 PM IST


ಬೆಂಗಳೂರು:ಫೇಸ್‌ಬುಕ್​ ಪೇಜ್‌ನಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕುಟುಂಬದ ವಿರುದ್ಧ ಪೋಸ್ಟ್ ಮಾಡಿದ ಪ್ರಕರಣ ಸಂಬಂಧ ಶ್ರೀರಾಂಪುರ ಪೊಲೀಸರು ದಾಖಲಿಸಿದ್ದ ಎಫ್ಐಆರ್‌ನ ಹೈಕೋರ್ಟ್ ರದ್ದು ಮಾಡಿದೆ. ಜತೆಗೆ ಪೊಲೀಸರಿಗೆ ₹1ಲಕ್ಷ ದಂಡ ಹಾಕಿ ಇಲಾಖಾ ತನಿಖೆಗೆ ಆದೇಶ ನೀಡಿದೆ.

ಈ ಕುರಿತು ಟ್ರೋಲ್ ಮಗ ಪೇಜ್ ಅಡ್ಮಿನ್ ಎಸ್.ಜಯಕಾಂತ್ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ಇಂದು ನಡೆಯಿತು. ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡನೆ ಮಾಡಿ ಪೇಸ್‌ಬುಕ್​ ಪೇಜ್‌ನಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಕುಟುಂಬ ವಿರುದ್ಧ ಪೋಸ್ಟ್ ಮಾಡಿದ್ದಕ್ಕೆ ಜಯಕಾಂತ್ ಕೆಳ ನ್ಯಾಯಾಲಯದಲ್ಲಿ ತಾತ್ಕಾಲಿಕ ಜಾಮೀನು ಪಡೆದಿದ್ದಾರೆ.ಆದರೆ,ಶ್ರೀರಾಂಪುರ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದಾರೆ. ಹೀಗಾಗಿ ಎಫ್‌ಐಆರ್ ತನಿಖೆಗೆ ತಡೆ ನೀಡಬೇಕೆಂದು ಮನವಿ‌ ಮಾಡಿದರು.

ಇದನ್ನ ಮಾನ್ಯ ಮಾಡಿದ ನ್ಯಾಯಾಲಯ, ಪೊಲೀಸರು ವಿನಾಕಾರಣ ಪ್ರಕರಣ ದಾಖಲಿಸಿದಕ್ಕೆ ಕಿಡಿಕಾರಿ ₹1ಲಕ್ಷ ದಂಡ ಹಾಕಿ ಪೊಲೀಸ್‌ ಮಹಾ ನಿರ್ದೆಶಕಿ ನೀಲಮಣಿ ರಾಜ್ ಇಲಾಖಾ ತನಿಖೆ ನಡೆಸಬೇಕೆಂದು ಸೂಚಿಸಿದೆ.

ಪ್ರಕರಣದ ಹಿನ್ನೆಲೆ:
ಟ್ರೋಲ್ ಮಗಾ ಪೇಜ್ ಅಡ್ಮಿನ್ ಜಯಕಾಂತ್ ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಜಯಕಾಂತ್ ವಿರುದ್ಧ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಶ್ರೀರಾಂಪುರ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಈ ದೂರು ಸಂಬಂಧ ಸೆಷನ್ಸ್ ಕೋರ್ಟ್‌ನಲ್ಲಿ ಆರೋಪಿ ಜಾಮೀನು ತಂದು ದಾಖಲೆಗಳನ್ನು ಸಲ್ಲಿಸಲು ಠಾಣೆಗೆ ಹೋಗಿದ್ದರು. ಈ ವೇಳೆ ಜಯಕಾಂತ್‌ ಮೇಲೆ ಇನ್ನೊಂದು ಎಫ್‌ಐಆರ್ ದಾಖಲಿಸಿ ವಶಕ್ಕೆ ತೆಗೆದುಕೊಂಡಿದ್ದರು.

ABOUT THE AUTHOR

...view details