ಕರ್ನಾಟಕ

karnataka

ETV Bharat / city

ಕುಸಿದಿರುವ ಶಿಕ್ಷಣ ಕ್ಷೇತ್ರಕ್ಕೆ, ಕೇಂದ್ರ ಬಜೆಟ್‌ನಲ್ಲಿ ಹೆಚ್ಚುವರಿ ಹಣ ಬಿಡುಗಡೆಗೆ ಮನವಿ

ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಬಹಳ ಹಿಂದೆ ಉಳಿದಿದ್ದು, ಶಾಲಾ-ಕಾಲೇಜು ಆರಂಭವಾಗದ ಕಾರಣ ಕೂಲಿ ಕೆಲಸಕ್ಕೆ ಹೋಗುವಂತಾಗಿದೆ. ಇಂತಹ ಮಕ್ಕಳನ್ನ ಶಾಲೆಗೆ ಮತ್ತೆ ಮರಳುವಂತೆ ಪ್ರೋತ್ಸಾಹಿಸುವ ಯೋಜನೆ ರೂಪಿಸಬೇಕು..‌

education-sector-central-budget
ಶಿಕ್ಷಣ ಕ್ಷೇತ್ರಕ್ಕೆ, ಕೇಂದ್ರ ಬಜೆಟ್ ನಲ್ಲಿ ಹೆಚ್ಚುವರಿ ಹಣ ಬಿಡುಗಡೆಗೆ ಮನವಿ

By

Published : Jan 30, 2021, 5:45 PM IST

ಬೆಂಗಳೂರು :ಇಡೀ ದೇಶವೇ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾಕಷ್ಟು ಸಂಕಷ್ಟ ಎದುರಿಸಬೇಕಾಯಿತು. ಅದರಲ್ಲೂ ಶಿಕ್ಷಣ ಕ್ಷೇತ್ರವೂ ಇಕ್ಕಟ್ಟಿಗೆ ಸಿಲುಕಿದೆ.

ಈ ಸಲದ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು ಎಂದು ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿರುವ ಪ್ರೊ. ಡಾ. ಸದಾಶಿವೆ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರಕ್ಕೆ, ಕೇಂದ್ರ ಬಜೆಟ್‌ನಲ್ಲಿ ಹೆಚ್ಚುವರಿ ಹಣ ಬಿಡುಗಡೆಗೆ ಮನವಿ..

ಓದಿ: ಪ್ರೇಮಿ ಜೊತೆ ಫೋನ್​​ನಲ್ಲಿ ಕಿರಿಕ್​: ನೇಣಿಗೆ ಕೊರಳೊಡ್ಡಿದ 19ರ ಯುವತಿ

ಫೆಬ್ರವರಿ 1ರಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್‌ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.‌ ಕೋವಿಡ್‌ನಿಂದ ಪೂರ್ವ ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣದ ತನಕ ಸಮಸ್ಯೆ ಇದೆ. ಈ ಸಮಸ್ಯೆ ನಿವಾರಣೆಗೆ ಸರ್ಕಾರ ಹೆಚ್ಚು ಹಣ ಬಿಡುಗಡೆ ಮಾಡಬೇಕು, ಜೊತೆಗೆ ಸರಿಯಾದ ರೀತಿ ಆ ಹಣ ಬಳಕೆ ಆಗಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಬಹಳ ಹಿಂದೆ ಉಳಿದಿದ್ದು, ಶಾಲಾ-ಕಾಲೇಜು ಆರಂಭವಾಗದ ಕಾರಣ ಕೂಲಿ ಕೆಲಸಕ್ಕೆ ಹೋಗುವಂತಾಗಿದೆ. ಇಂತಹ ಮಕ್ಕಳನ್ನ ಶಾಲೆಗೆ ಮತ್ತೆ ಮರಳುವಂತೆ ಪ್ರೋತ್ಸಾಹಿಸುವ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.‌

ಉನ್ನತ ಶಿಕ್ಷಣದಲ್ಲೂ ವಿದ್ಯಾರ್ಥಿಗಳು ಪದವಿ ಪಡೆದ ನಂತರ ಉದ್ಯೋಗ ಸಿಗದೇ ಪರದಾಡುವ ಸ್ಥಿತಿ ಇದೆ‌‌. ಇದಕ್ಕಾಗಿ ಕೌಶಲ್ಯ ತರಬೇತಿ ಅಗತ್ಯವಿದ್ದು, ಹಣದ ಅವಶ್ಯಕತೆ ಇದೆ. ಹೀಗಾಗಿ, ಸರ್ಕಾರ ಶೇ. 6%ರಷ್ಟು ಹಣ ಮೀಸಲಾಗಿಟ್ಟರೆ, ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಕಾಣಬಹುದು.

ABOUT THE AUTHOR

...view details