ಕರ್ನಾಟಕ

karnataka

ETV Bharat / city

ಮೂರು ಕೊಲೆಗೆ‌ ಸಂಚು ರೂಪಿಸಿದ್ದ ರೇಖಾ ಕದಿರೇಶ್‌ ಹಂತಕರು!

ಕಳೆದ ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ ಮಾಲಾ‌ ಪುತ್ರ ಅರುಣ್ ಕದಿರೇಶ್ ಕೊಲೆಗೆ ರೇಖಾ ಕಾರಣ. ಆಕೆಯೇ ನವೀನ್ ಮತ್ತು ವಿನಯ್​ಗೆ ಸಹಾಯ ಮಾಡಿದ್ದಳು ಎಂದು ಪೀಟರ್​ಗೆ ತಿಳಿಸಿದ್ದಾನೆ. ಇದರಂತೆ‌ 4 ತಿಂಗಳ ಹಿಂದೆ ಪೀಟರ್ ನೇತೃತ್ವದಲ್ಲಿ ಅರುಣ್ ಮತ್ತು ಮಾಲಾ ಸಭೆ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

rekha-kadiresh-murder-updates
ರೇಖಾ‌‌ ಕದಿರೇಶ್ ಕೊಲೆ‌

By

Published : Jul 1, 2021, 8:16 PM IST

Updated : Jul 1, 2021, 8:32 PM IST

ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ವಿಚಾರಣೆ ವೇಳೆ ಹೊಸ ಹೊಸ ಸಂಗತಿಗಳನ್ನು ಬಾಯಿಬಿಡುತ್ತಿದ್ದಾರೆ. ಕೊಲೆಯ ಪ್ರಮುಖ ಆರೋಪಿಗಳಾದ ಪೀಟರ್, ಮಾಲಾ, ಮಗ ಅರುಳ್, ರೇಖಾ‌ ಕದಿರೇಶ್ ಕೊಲೆಗೂ ಮುನ್ನ ಕದಿರೇಶ್ ಅವರ ಕೊಲೆ‌ ಮಾಡಿದ್ದ ಮೂವರು ಹಂತಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಸಂಗತಿ ಬಯಲಾಗಿದೆ.

ಮತ್ತೊಂದೆಡೆ, ಕಳೆದ ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ ಮಾಲಾ‌ ಪುತ್ರ ಅರುಣ್ ಕದಿರೇಶ್ ಕೊಲೆಗೆ ರೇಖಾ ಕಾರಣ, ಆಕೆಯೇ ನವೀನ್ ಮತ್ತು ವಿನಯ್​ಗೆ ಸಹಾಯ ಮಾಡಿದ್ದಳು ಎಂದು ಪೀಟರ್​ಗೆ ಕಿವಿ ಊದಿದ್ದ. ಇದರಂತೆ‌ 4 ತಿಂಗಳ ಹಿಂದೆ ಪೀಟರ್ ನೇತೃತ್ವದಲ್ಲಿ ಅರುಣ್ ಮತ್ತು ಮಾಲಾ ಸಭೆ ನಡೆಸಿದ್ದರು ಎನ್ನಲಾಗಿದೆ.

ಮೂರು ವರ್ಷಗಳ ಹಿಂದೆ ಕದಿರೇಶ್ ಹತ್ಯೆ ಮಾಡಿದ್ದ ಗಾರ್ಡನ್ ಶಿವ‌ ಹಾಗೂ ಅವನ ಅಕ್ಕನ‌ ಮಕ್ಕಳಾದ ವಿನಯ್ ಹಾಗೂ ನವೀನ್ ಹತ್ಯೆಗೆ ನಾಲ್ಕು ತಿಂಗಳ ಹಿಂದೆ ಸಂಚು ರೂಪಿಸಲಾಗಿತ್ತು. ಹಣಕಾಸಿನ ಸಹಾಯಕ್ಕಾಗಿ ಪೀಟರ್​​ ಮತ್ತು ಗ್ಯಾಂಗ್​​ ರೇಖಾಳ ನೆರವು ಕೇಳಿದ್ದರು. ಆದ್ರೆ ಪೀಟರ್ ಮಾತು ತಿರಸ್ಕರಿಸಿ ರೇಖಾ ಸಹಕಾರ ಕೊಡಲು ನಿರಾಕರಿಸಿದ್ದಳು. ಈ ವಿಚಾರ ರೇಖಾ ಮೇಲೆ ಪೀಟರ್​ಗೆ‌ ಮತ್ತಷ್ಟು ಕೋಪ ಬರುವಂತೆ ಮಾಡಿತ್ತು.

ಈ ಸಭೆಯಲ್ಲಿ ಪೀಟರ್, ಗಾರ್ಡನ್ ಶಿವನ ಬಗ್ಗೆ ಹೇಳಿದ್ದ. ಅದೇ ಮೀಟಿಂಗ್​ನಲ್ಲಿ ಅರುಣ್, ತಮ್ಮ ಬಗ್ಗೆ ನಿರ್ಲಕ್ಷ್ಯ ತೋರಿದ್ದ ರೇಖಾ ಬಗ್ಗೆ ಹೇಳಿದ್ದಂತೆ ಗಾರ್ಡನ್ ಶಿವ ಮತ್ತು ವಿನಯ್​ನನ್ನು ನಂತರ‌ ಮುಗಿಸೋಣ ಎಂದು‌ ನಿರ್ಧಾರ ಮಾಡಿದ್ದರಂತೆ. ಈ ಪ್ಲಾನ್‌ ಜಾರಿಗೊಳಿಸಲು ಹಲವು ದಿನಗಳ ಕಾಲ ರೇಖಾ ಯಾವಾಗ ಒಂಟಿಯಾಗಿರುತ್ತಾಳೆ ಎಂದು ಗಮನಿಸುತ್ತಿದ್ದರಂತೆ. ಮನೆ ಬಳಿಯ ತಮ್ಮ ಕಚೇರಿ ಬಳಿ ಊಟ ನೀಡಿ ವಾಪಸ್ ಹೋಗುವ ಸಮಯದಲ್ಲಿ ಜನರು ಕಡಿಮೆ ಇರುತ್ತಾರೆ ಎಂದು ಗ್ರಹಿಸಿ ಪ್ಲ್ಯಾನ್ ರೂಪಿಸಿ ಆರೋಪಿಗಳೆಲ್ಲರೂ ಸೇರಿ ರೇಖಾ ಕತೆ ಮುಗಿಸಿದ್ದು ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿದೆ.

Last Updated : Jul 1, 2021, 8:32 PM IST

ABOUT THE AUTHOR

...view details