ಕರ್ನಾಟಕ

karnataka

ETV Bharat / city

'ಆ ದಿನ ರೇಖಾ ಕದಿರೇಶ್ ಬಳಿ ಪಿಸ್ತೂಲ್ ಇದ್ದಿದ್ರೆ ಪರಿಣಾಮವೇ ಬೇರೆಯಾಗಿರ್ತಿತ್ತು' - Rekha Kadiresh

ರೇಖಾ ಕದಿರೇಶ್ ಛಲವಾದಿಪಾಳ್ಯದ ವಾರ್ಡ್ ಕಾರ್ಪೋರೇಟರ್ ಆದ ಬಳಿಕ ರಕ್ಷಣೆ ದೃಷ್ಟಿಯಿಂದ ಹಾಗೂ ಪತ್ನಿಯ ಜೀವಕ್ಕೆ ಕುತ್ತುಬಾರದಿರಲಿ ಎಂದು ಪತಿ ಕದಿರೇಶ್ ಪೊಲೀಸರ ಅನುಮತಿ ಪಡೆದು ಪರವಾನಿಗೆ ಹೊಂದಿರುವ ಬುಲೆಟ್ ಪಿಸ್ತೂಲ್‌ ಖರೀದಿಸಿದ್ದರು. ಹತ್ಯೆ ನಡೆದ ದಿನ ಈ ಪಿಸ್ತೂಲ್ ರೇಖಾ ಬಳಿ ಇದ್ದಿದ್ದರೆ ಘಟನೆಯೇ ಬೇರೆಯಾಗಿರುತ್ತಿತ್ತು ಎಂದು ಅಂದಾಜಿಸಲಾಗಿದೆ.

Rekha Kadiresh
ರೇಖಾ ಕದಿರೇಶ್

By

Published : Jul 4, 2021, 5:15 PM IST

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ರೇಖಾ ಕದಿರೇಶ್ ಕೆಲ ವರ್ಷಗಳ ಹಿಂದೆಯೇ ಸುರಕ್ಷತೆಗೆಂದು ಪರವಾನಗಿ ಪಡೆದಿದ್ದ ಪಿಸ್ತೂಲ್ ಅನ್ನು ಜೊತೆಗೆ ಇಟ್ಟುಕೊಂಡಿದ್ದರು. ಹತ್ಯೆ ವೇಳೆ ಈ ಪಿಸ್ತೂಲ್ ರೇಖಾ ಬಳಿ ಇದ್ದಿದ್ದರೆ ಪರಿಣಾಮವೇ ಬೇರೆಯಾಗಿರುತ್ತಿತ್ತು ಎಂದು ಹೇಳಲಾಗುತ್ತಿದೆ.

ರೇಖಾ ಕದಿರೇಶ್ ಛಲವಾದಿಪಾಳ್ಯದ ವಾರ್ಡ್ ಕಾರ್ಪೋರೇಟರ್ ಆದ ಬಳಿಕ ರಕ್ಷಣೆ ದೃಷ್ಟಿಯಿಂದ ಹಾಗೂ ಪತ್ನಿಯ ಜೀವಕ್ಕೆ ಕುತ್ತುಬಾರದಿರಲಿ ಎಂದು ಪತಿ ಕದಿರೇಶ್ ಪೊಲೀಸರ ಅನುಮತಿ ಪಡೆದು ಪರವಾನಿಗೆ ಹೊಂದಿರುವ ಬುಲೆಟ್ ಪಿಸ್ತೂಲ್‌ ಖರೀದಿಸಿದ್ದರು. ಪತ್ನಿಗೆ ಪಿಸ್ತೂಲ್​ ಬಳಕೆಯ ಟ್ರೈನಿಂಗ್ ಕೂಡ ಕೊಡಲಾಗಿತ್ತು. ಆದರೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ರೇಖಾ ಪಿಸ್ತೂಲ್​ ಬಳಸುತ್ತಿರಲಿಲ್ಲ. ಹತ್ಯೆಯ ದಿನದಂದು ಸಹ ಮನೆಯಲ್ಲೇ‌ ಪಿಸ್ತೂಲ್‌ ಇತ್ತು. ಒಂದು ವೇಳೆ ರಿವಾಲ್ವರ್ ತಂದಿದ್ದರೆ ಆ ದಿನದ ಚಿತ್ರಣವೇ ಬೇರೆಯಾಗಿರುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ:ರೇಖಾ ಕದಿರೇಶ್ ಕೊಲೆ ಪ್ರಕರಣ : ಆರೋಪಿಗಳನ್ನ 14 ದಿನ ಕಸ್ಟಡಿಗೆ ಪಡೆದ ಪೊಲೀಸ್​​

ಪ್ರಕರಣದ ಹಿನ್ನೆಲೆ:

ಕಾರ್ಪೋರೇಟರ್ ತಮಗೆ ಯಾವ ರೀತಿಯಲ್ಲೂ ಸ್ಪಂದಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ರೇಖಾ‌ಳನ್ನು ಮಾಲಾ ಹಾಗೂ‌‌‌ ಪೀಟರ್ ಗ್ಯಾಂಗ್ ಕೊಲೆ ಮಾಡಲು ಸ್ಕೆಚ್ ಹಾಕಿದ್ದರು. ಛಲವಾದಿಪಾಳ್ಯ ವಾರ್ಡ್​ನ ಬಿಜೆಪಿ ಕಚೇರಿ ಬಳಿ ಊಟ ನೀಡಿ ಬರುವಾಗ ಆರೋಪಿಗಳು ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಮಾಜಿ‌ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಮಾಡಿದ್ದಾರೆ‌. ಈ ಸಂಬಂಧ ಕಾಟನ್‌‌ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ್ದು, ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ರೇಖಾ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್: ಮತ್ತೊಬ್ಬನ ಜೊತೆಗಿನ ಸಲುಗೆಯೇ ಹತ್ಯೆಗೆ ಕಾರಣ!?

ಇನ್ನು ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ್ದ ಸೆಂದಿಲ್‌ ಆಲಿಯಾಸ್ ಕ್ಯಾಪ್ಟನ್ ಸೆಂದಿಲ್ ತಲೆಮರೆಸಿಕೊಂಡಿದ್ದು, ಆತನನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details