ಬೆಂಗಳೂರು:ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರ ಪರ ಹೈಕೋರ್ಟ್‌ಗೆ ಹಿರಿಯ ವಕೀಲ ಅಮೃತೇಶ್ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸ್ಪೀಕರ್ ಕಚೇರಿಗೆ ಹೋದಾಗ ಸುಧಾಕರ್ ಮೇಲೆ ಮಾಜಿ ಸಚಿವ ಜಾರ್ಜ್ ಹಾಗೂ ಕಾಂಗ್ರೆಸ್ ಕೆಲ ನಾಯಕರು ಹಲ್ಲೆ ನಡೆಸಿದ್ದಾರೆ. ಅಂದು ಸುಧಾಕರ್ ಅವರನ್ನ ಒತ್ತಾಯ ಪೂರ್ವಕವಾಗಿ ಜಾರ್ಜ್ ಕೊಠಡಿಯಲ್ಲಿ ಕಾಂಗ್ರೆಸ್ ನಾಯಕರು ಬಂಧನ ಮಾಡಿದ್ರು. ಈ ವೇಳೆ ಕೂಡ ಹಲ್ಲೆಯಾಗಿದೆ.
ಅಂದಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆ ವಿಧಾನಸೌಧ ಪುಲ್ ಖಾಕಿ ಕಣ್ಗಾವಲು ಇಡಲಾಗಿತ್ತು. ಹಲ್ಲೆಯಾದ ಸಂದರ್ಭದಲ್ಲಿ ಪೊಲೀಸರು ಸುಧಾಕರ್ ಸುತ್ತಲೂ ನೆರೆದಿದ್ದರು. ನಂತರ ಘಟನೆ ಬಗ್ಗೆ ವಿಧಾನಸೌಧ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೂ ಪೊಲೀಸರು ದೂರು ದಾಖಲಿಸಿಕೊಳ್ಳಲೇ ಇಲ್ಲ. ಹೀಗಾಗಿ ಪೊಲೀಸರು ಕಾನೂನು ಚೌಕಟ್ಟನ್ನು ಮೀರಿ ಅನ್ಯಾಯ ಮಾಡಿದ್ದಾರೆ.
ಹೀಗಾಗಿ ಕೂಡಲೇ ವಿಧಾನಸೌಧ ಪೊಲೀಸರು ಎಫ್ಐಆರ್ ದಾಖಲಿಸುವಂತೆ ನೋಟಿಸ್ ನೀಡಿ ಎಂದು ಅರ್ಜಿಯಲ್ಲಿ ಕೋರಿಕೆ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.