ಕರ್ನಾಟಕ

karnataka

ETV Bharat / city

ಪೊಲೀಸ್ ಎಸ್ಟಾಬ್ಲಿಷ್​ಮೆಂಟ್ ಬೋರ್ಡ್ ಸದಸ್ಯರ ನೇಮಕ - ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಪೊಲೀಸ್ ಎಸ್ಟಾಬ್ಲಿಷ್​​ಮೆಂಟ್ ಬೋರ್ಡ್​ನ (ಪಿಇಬಿ) ಸದಸ್ಯರ ಪುನರ್​ ರಚನೆ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

Redesigned Home Department of Police Establishment Board Members

By

Published : Aug 17, 2019, 7:59 AM IST

ಬೆಂಗಳೂರು: ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಬಿಜೆಪಿ‌ ಸರ್ಕಾರ, ಇದೀಗ ಪೊಲೀಸ್ ಎಸ್ಟಾಬ್ಲಿಷ್​​ಮೆಂಟ್ ಬೋರ್ಡ್ (ಪಿಇಬಿ) ಸದಸ್ಯರನ್ನು ಪುನರ್​ ರಚಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್​. ರಾಜು ಅಧ್ಯಕ್ಷತೆಯಲ್ಲಿ ಪಿಇಬಿ ಸದಸ್ಯರಾಗಿ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಎಡಿಜಿಪಿ ಎಸ್.ಪರಶಿವಮೂರ್ತಿ, ಸದಸ್ಯ ಕಾರ್ಯದರ್ಶಿಯಾಗಿ ಡಾ. ಎಂ.ಎ.ಸಲೀಂ ಅವರನ್ನು ನೇಮಕ ಮಾಡಲಾಗಿದೆ.

ಗೃಹ ಇಲಾಖೆ ಆದೇಶ

ಈ ಹಿಂದೆ ಟಿ.ಸುನೀಲ್ ಕುಮಾರ್ ಅವರ ವರ್ಗಾವಣೆ ಹಿನ್ನೆಲೆ ಪಿಇಬಿ ಸದಸ್ಯ ಸ್ಥಾನ ಖಾಲಿ ಇತ್ತು. ಬಳಿಕ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ಅಲೋಕ್ ಕುಮಾರ್ ಅವರನ್ನು ಸದಸ್ಯರನ್ನಾಗಿ ಮಾಡಲಾಯಿತು. ಮತ್ತೆ ಇದೀಗ ಅಲೋಕ್ ಕುಮಾರ್ ಅವರೂ ವರ್ಗಾವಣೆಯಿಂದ ತೆರವಾದ ಸದಸ್ಯ ಸ್ಥಾನಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನೇಮಕಗೊಂಡಿದ್ದಾರೆ.

ABOUT THE AUTHOR

...view details