ಬೆಂಗಳೂರು: ಕೊಲೆ ಹಾಗೂ ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿಯ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ನಿತ್ಯಾನಂದನ ವಿರುದ್ಧ ವಿದೇಶಾಂಗ ನೀತಿ ಅನ್ವಯ ಗಡಿಪಾರು ಅರ್ಜಿ ಸಲ್ಲಿಸಲು ನಿರ್ದೇಶನ ನೀಡಿದ್ದು, ನಿತ್ಯಾನಂದನ ವಿರುದ್ಧ ಇಂಟರ್ಪೋಲ್ ಮೂಲಕ ರೆಡ್ ಕಾರ್ನರ್ ಹೊರಡಿಸುವ ಸಾಧ್ಯತೆಯಿದೆ.
ಹೀಗಾಗಿ ರಾಜ್ಯದಲ್ಲಿ ನಿತ್ಯಾನಂದ ವಿರುದ್ಧ ಕೊಲೆ ಹಾಗೂ ಅತ್ಯಾಚಾರ ಆರೋಪಗಳ ತನಿಖೆ ನಡೆಸುತ್ತಿರುವ ರಾಜ್ಯ ಸಿಐಡಿ ತಂಡವು ಪ್ರಕರಣದ ಕುರಿತು ಗೃಹ ಇಲಾಖೆ ಮುಖಾಂತರ ಸಿಬಿಐಗೆ ಮಾಹಿತಿ ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.
ಸ್ವಾಮಿ ನಿತ್ಯಾನಂದ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ವಿದೇಶಾಂಗ ಇಲಾಖೆ ಸೂಚನೆ ಒಂದು ವೇಳೆ ನಿತ್ಯಾನಂದ ತಪ್ಪಿತಸ್ಥ ಎಂದು ತನಿಖೆಯಲ್ಲಿ ಕಂಡುಬಂದರೆ ನ್ಯಾಯಾಲಯದ ಅನುಮತಿ ಪಡೆದು ಜಾಮೀನು ರಹಿತ ವಾರೆಂಟ್ ಹೊರಡಿಸುವಂತೆ ಹೇಳಿದೆ. ನಿತ್ಯಾನಂದ ವಿರುದ್ಧ ಈಗಾಗಲೇ ರಾಮನಗರದಲ್ಲಿ ಸೆಷನ್ಸ್ ಕೋರ್ಟ್ನಲ್ಲೂ ಅತ್ಯಾಚಾರ ಆರೋಪ ಪ್ರಕರಣ ವಿಚಾರಣೆ ಹಂತದಲ್ಲಿದೆ.
ನಿತ್ಯಾನಂದ ಸ್ವಾಮಿ ಬಂಧಿಸಲು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ವಿದೇಶಾಂಗ ಇಲಾಖೆ ಸೂಚನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದ ಸಂಗೀತಾ (24 ) ಹತ್ಯೆ ಆರೋಪದಡಿ ಆಕೆಯ ತಾಯಿಯು ನಿತ್ಯಾನಂದನನ್ನು ಭಾರತಕ್ಕೆ ಕರೆತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಹೀಗಾಗಿ ದೇಶಕ್ಕೆ ವಾಪಸ್ ಕರೆತರಲು ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಿ ಎಂದು ಕೇಂದ್ರವು ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದೆ.
ರೆಡ್ ಕಾರ್ನರ್ ನೋಟಿಸ್ ಅಂದರೆ ಏನು ?
ಇಂಟರ್ ಪೋಲ್ ರೆಡ್ ಕಾರ್ನರ್ ಅಂದರೆ ಯಾವುದಾದರೂ ವ್ಯಕ್ತಿ ವಿರುದ್ಧ ಕ್ರಿಮಿನಲ್ ಕೇಸ್ ಇದ್ದರೆ ಹಾಗೂ ಆತ ದೇಶ ಬಿಟ್ಟು ಅಡಗಿ ಕುಳಿತಾಗ, ಆ ದೇಶದ ಮುಖ್ಯ ಕಾರ್ಯದರ್ಶಿ ಇಂಟರ್ ಪೋಲ್ ಇಲಾಖೆಯಿಂದ ನೋಟಿಸ್ ಹೊರಡಿಸಲಾಗುತ್ತೆ. ಇದರಿಂದ ಪೊಲೀಸ್ ಸದಸ್ಯತ್ವ ಹೊಂದಿರುವ 190 ದೇಶಗಳ ಒಕ್ಕೂಟದ ನೆರವಿನೊಂದಿಗೆ ಆರೋಪಿಗಳನ್ನು ಪತ್ತೆ ಹಚ್ಚಬಹುದು. 190 ಸದಸ್ಯ ರಾಷ್ಟ್ರಗಳು ಇದಕ್ಕೆ ನೆರವು ನೀಡುತ್ತವೆ.