ಬೆಂಗಳೂರು: ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ತನಕ ಅತೃಪ್ತ ಶಾಸಕರ ಅಜ್ಞಾತವಾಸ ಮುಂದುವರಿಯಲಿದೆ.
ಬಿಎಸ್ವೈ ಬಹುಮತ ಸಾಬೀತು ಪಡಿಸುವ ವರೆಗೂ ಅತೃಪ್ತರ ಅಜ್ಞಾತವಾಸ ಮುಂದುವರಿಕೆ...! - undefined
ಸ್ಪೀಕರ್ ರಮೇಶ್ ಕುಮಾರ್ ಇನ್ನೂ ಅತೃಪ್ತರ ರಾಜೀನಾಮೆ ಅಂಗೀಕಾರದ ಬಗ್ಗೆ ತೀರ್ಪು ನೀಡದೇ ಇರುವುದರಿಂದ ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ಬಿಜೆಪಿ ಸರಕಾರಕ್ಕೆ ತೊಂದರೆಯಾಗಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಅತೃಪ್ತರು ಮುಂಬೈನಲ್ಲೇ ಇದ್ದಾರೆಂದು ಹಾಗೂ ಬಹುಮತ ಸಾಬೀತು ಆದ ನಂತರ ರಾಜ್ಯಕ್ಕೆ ಮರಳಲಿದ್ದಾರೆ ಎನ್ನಲಾಗುತ್ತದೆ.
ಇಂದು ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಯಡಿಯೂರಪ್ಪನವರಿಗೆ ಒಂದು ವಾರದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಇನ್ನೂ ಅತೃಪ್ತರ ರಾಜೀನಾಮೆ ಅಂಗೀಕಾರದ ಬಗ್ಗೆ ತೀರ್ಪು ನೀಡದೇ ಇರುವುದರಿಂದ ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ಬಿಜೆಪಿ ಸರಕಾರಕ್ಕೆ ತೊಂದರೆಯಾಗಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಅತೃಪ್ತರು ಮುಂಬೈನಲ್ಲೇ ಇದ್ದಾರೆಂದು ಹೇಳಲಾಗಿದೆ.
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರ ಪತನಗೊಳಿಸಲು ನಿರ್ಣಾಯಕ ಪಾತ್ರವಹಿಸಿದ್ದ ಅತೃಪ್ತರು ಬಿಜೆಪಿ ಸರಕಾರ ಬಹುಮತ ಸಾಬೀತುಪಡಿಸುವಲ್ಲಿಯೂ ಮಹತ್ವದ ಪಾತ್ರವಿದೆ. ಅತೃಪ್ತರ ನೆರವಿಲ್ಲದೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಶ್ವಾಸ ಮತ ಗೆಲ್ಲುವುದು ಕಷ್ಟಕರವಾಗಿದೆ. ಏಕೆಂದರೆ ಸಿಎಂ ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಾಗ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅತೃಪ್ತರು ಸದನಕ್ಕೆ ಗೈರು ಹಾಜರಾದರೆ ಸುಲಭವಾಗಿ ಬಿಜೆಪಿ ಸರಕಾರ ಬಹುಮತ ಸಾಬೀತುಪಡಿಸಬಹುದಾಗಿದೆ. ಇಲ್ಲವಾದಲ್ಲಿ ರಾಜೀನಾಮೆ ಇನ್ನೂ ಅಂಗೀಕಾರಗೊಳ್ಳದ ಶಾಸಕರು ಸದನಕ್ಕೆ ಹಾಜರಾದರೆ ಅವರು ತಾವು ಪ್ರತಿನಿಧಿಸಿದ ಪಕ್ಷದ ಪರವಾಗಿಯೇ ಮತಚಲಾವಣೆ ಮಾಡಬೇಕಾಗುತ್ತದೆ. ಆಗ ಬಹುಮತ ಸಾಬೀತುಪಡಿಸದೇ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಬಿಜೆಪಿ ಸರಕಾರದ ಬಹುಮತ ಸಾಬೀತು ಮಾಡುವವರೆಗೆ ಅಜ್ಞಾತ ವಾಸದಲ್ಲಿದ್ದು ನಂತರ ರಾಜ್ಯಕ್ಕೆ ಮರಳಲಿದ್ದಾರೆ ಎನ್ನಲಾಗುತ್ತದೆ.