ಸಿಎಂ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಮರು ಹಂಚಿಕೆ ಮಾಡಿ ಸರ್ಕಾರದ ಆದೇಶ..! - ಸಿಎಂ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಮರುಹಂಚಿಕೆ
ಬಿಜೆಪಿಯಲ್ಲಿ ಉಂಟಾದ ಬದಲಾವಣೆಯಿಂದ ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದರು. ಈ ಹಿನ್ನೆಲೆ ಸಿಎಂ ಸಚಿವಾಲಯದ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿತ್ತು. ಸದ್ಯ ಅವರುಗಳಿಗೆ ಕರ್ತವ್ಯ ಮರು ಹಂಚಿಕೆ ಮಾಡಲಾಗಿದೆ.
![ಸಿಎಂ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಮರು ಹಂಚಿಕೆ ಮಾಡಿ ಸರ್ಕಾರದ ಆದೇಶ..! reassignment-of-duty-to-the-officers-of-the-cm-ministry](https://etvbharatimages.akamaized.net/etvbharat/prod-images/768-512-12864977-thumbnail-3x2-kddkd.jpg)
ಸಿಎಂ ಸಚಿವಾಲಯ
ಬೆಂಗಳೂರು: ಸಿಎಂ ಬದಲಾವಣೆ ಹಿನ್ನೆಲೆ ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯವನ್ನು ಮರುಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆ ಸಿಎಂ ಸಚಿವಾಲಯದ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿತ್ತು. ಇದೀಗ ಅವರುಗಳಿಗೆ ಕರ್ತವ್ಯ ಮರು ಹಂಚಿ ಮಾಡಲಾಗಿದೆ.
- ಯಾರಿಗೆ ಯಾವ ಕರ್ತವ್ಯ
- ಸಿಎಂ ಪ್ರಧಾನ ಕಾರ್ಯದರ್ಶಿಯಾಗಿಮಂಜುನಾಥ್ ಪ್ರಸಾದ್ : ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ, ಹಣಕಾಸು, ಇಂಧನ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಸಣ್ಣ ನೀರಾವರಿ, ಲೋಕೋಪಯೋಗಿ, ವಾರ್ತಾ ಇಲಾಖೆ, ಈ ಮೇಲಿನ ಖಾತೆಗಳ ವರ್ಗಾವಣೆ ಹಾಗೂ ಸೇವಾ ವಿಷಯಗಳು, ನೀತಿ ರೂಪಣೆ, ಅಂತರ ರಾಜ್ಯ ಜಲಬಿಕ್ಕಟ್ಟು, ಮೂಲಸೌಕರ್ಯ ಅಭಿವೃದ್ಧಿ ಸಂಬಂಧಿತ ಕಡತಗಳು, ಇತರ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಜೊತೆ ಸಂವಹನ
- ಪೊನ್ನು ರಾಜ್, ಸಿಎಂ ಕಾರ್ಯದರ್ಶಿ:ಪ್ರಧಾನ ಕಾರ್ಯದರ್ಶಿಗೆ ನೀಡಲಾದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ವಿಚಾರ ಹೊರತು ಪಡಿಸಿದ ವಿಚಾರಗಳು, ಗೃಹ ಇಲಾಖೆ, ನಗರಾಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕೆ, ಸಣ್ಣ ಕೈಗಾರಿಕೆ, ಗಣಿ ಮತ್ತು ಭೂ ವಿಜ್ಞಾನ, ಸಾರಿಗೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣ, ಐಟಿ, ಬಿಟಿ, ವಿಜ್ಞಾನ, ತಂತ್ರಜ್ಞಾನ, ಆರ್ ಡಿಪಿಆರ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಮೂಲಭೂತ ಸೌಕರ್ಯ ಅಭಿವೃದ್ಧಿ, ಯುವಜನ ಸೇವೆ ಮತ್ತು ಕ್ರೀಡೆ, ಇ-ಆಡಳಿತ, ಸಿಎಂ ಸಚಿವಾಲಯದ ವಿಚಾರ, ಈ ಮೇಲೆ ಹೇಳಲಾದ ಇಲಾಖೆಗಳ ವರ್ಗಾವಣೆ ಮತ್ತು ಸೇವಾ ವಿಚಾರ.
- ಸಿಎಂ ಕಾರ್ಯದರ್ಶಿ: ಎಲ್ಲಾ ಇಲಾಖೆಗೆ ಬಿಡುಗಡೆ ಮಾಡಬೇಕಾದ ಅನುದಾನಕ್ಕಾಗಿ ಕೇಂದ್ರ ಸರ್ಕಾರದ ಜೊತೆ ಸಮನ್ವಯತೆ, ಶಾಸಕರು, ಸಂಸದರಿಗೆ ಸಂಬಂಧ ಪಟ್ಟ ವಿಚಾರ, ಜಲಸಂಪನ್ಮೂಲ ಇಲಾಖೆ, ಪ್ರವಾಸೋದ್ಯಮ ಇಲಾಖೆ, ವಾಣಿಜ್ಯ ಇಲಾಖೆ ಸಂಬಂಧಿತ ಸೇವಾ ವಿಚಾರ, ಅರಣ್ಯ, ಪರಿಸರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ ಇಲಾಖೆ, ಕಾರ್ಮಿಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯೋಜನೆ ಇಲಾಖೆ, ವಸತಿ ಇಲಾಖೆ, ಮಹಿಳಾ ಮತ್ತು ಮಕ್ಳಳ ಕಲ್ಯಾಣ ಇಲಾಖೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ, ಅತಿಗಣ್ಯರ ಜೊತೆ ಸಂವಹನ, ಪ್ರಮುಖ ಯೋಜನೆಗಳ ಮೇಲೆ ನಿಗಾ.
- ಸಿಎಂ ಜಂಟಿ ಕಾರ್ಯದರ್ಶಿ:ಸಿಎಂ ಪರಿಹಾರ ನಿಧಿ, ಸಕ್ಕರೆ, ಜವಳಿ ಇಲಾಖೆ, ಪಶುಸಂಗೋಪನೆ, ಆಹಾರ ಮತ್ತು ಪೂರೈಕೆ, ಮೀನುಗಾರಿಕೆ, ಕೌಶಲ್ಯಾಭಿವೃದ್ಧಿ, ಸಹಕಾರ ಇಲಾಖೆ, ಜನತಾ ದರ್ಶನ, ಹಾವೇರಿ ಎಂಪಿ, ಶಾಸಕರ ಕ್ಷೇತ್ರ ಅಭಿವೃದ್ಧಿ ಕಾಮಗಾರಿ, ಶಾಸಕಾಂಗ ವಿಚಾರ, ಸಿಎಂ ಸಚಿವಾಲಯದ ಆಡಳಿತ.
- ಅನಿಲ್ ಕುಮಾರ್,ಸಿಎಂ ಖಾಸಗಿ ಕಾರ್ಯದರ್ಶಿ: ಸಿಎಂ ಜೊತೆಗೆ ಗಣ್ಯರು ಹಾಗೂ ಸಾರ್ವಜನಿಕರ ಸಭೆ, ಗೃಹಕಚೇರಿ ಮತ್ತು ಕೃಷ್ಣಾ ಜೊತೆ ಸಮನ್ವಯತೆ, ಮೂಲಭೂತ ಸೌಕರ್ಯ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಸರ್ಕಾರದ ಜೊತೆ ಸಮನ್ವಯತೆ, ಸಿಎಂ ಸಂಬಂಧಿತ ಶಿಷ್ಟಾಚಾರ, ಸಿಎಂ ಸಭೆಗಳು.
- ಎನ್.ರಂಗರಾಜು,ಸಿಎಂ ಒಎಸ್ಡಿ: ಸಿಎಂ ನಿವಾಸದ ಉಸ್ತುವಾರಿ, ಗೃಹ ಕಚೇರಿ ಕೃಷ್ಣಾ ನಿಯೋಜಿತ ಅಧಿಕಾರಿಗಳ ಜೊತೆ ಸಮನ್ವಯತೆ, ಕಾರ್ಯದರ್ಶಿ ನಿಭಾಯಿಸುವ ಸಚಿವರುಗಳ ಕಚೇರಿಗಳಿಗೆ ಸಿಬ್ಬಂದಿ ನೇಮಕ.
- ಚನ್ನಬಸವೇಶ,ಸಿಎಂ ಒಎಸ್ಡಿ: ಸಭೆಗಳ ಆಯೋಜನೆ, ದಿನಚರಿ ಸಭೆ, ಪ್ರವಾಸ ಕಾರ್ಯಕ್ರಮಗಳು.
- ರೋಹನ್ ಬಿರಾದಾರ್,ಸಿಎಂ ಒಎಸ್ಡಿ: ಸಿಎಂ ಕಚೇರಿ ಕಂಪ್ಯೂಟರೈಸೇಷನ್, ಸಿಎಂ ಡ್ಯಾಶ್ ಬೋರ್ಡ್ ಸಂಬಂಧಿತ ವಿಚಾರ, ಹೊಸ ಉಪಕ್ರಮಗಳು.
- ಎಚ್.ಎಸ್.ಸತೀಶ್,ಸಿಎಂ ವಿಶೇಷ ಅಧಿಕಾರಿ: ಗೃಹ ಕಚೇರಿ ಕೃಷ್ಣಾದ ಉಸ್ತುವಾರಿ.