ಕನ್ನಡ ಚಿತ್ರರಂಗದ ಬುದ್ಧಿವಂತ ನಟ, ನಿರ್ದೇಶಕ ಎಂದೇ ಹೆಸರಾದವರು ರಿಯಲ್ ಸ್ಟಾರ್ ಉಪೇಂದ್ರ. ಸದ್ಯ ಕಬ್ಜ ಸಿನಿಮಾದ ಚಿತ್ರೀಕರಣದಲ್ಲಿರುವ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ವೊಂದನ್ನು ನೀಡಿದ್ದಾರೆ.
ಹೌದು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಈಗ ಅಭಿಮಾನಿಗಳ ಚಕ್ರವರ್ತಿ ಕೊನೆಗೂ ಡೈರೆಕ್ಟರ್ ಕ್ಯಾಪ್ ತೊಡೋಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದೇ ಮಾರ್ಚ್ 10 ರಂದು ಅಧಿಕೃತವಾಗಿ ಅವರ ನಿರ್ದೇಶನದ ಚಿತ್ರ ಘೋಷಿಸಲಿದ್ದಾರೆ. ಇದರ ಬೆನ್ನಲ್ಲೇ ಈ ಚಿತ್ರದ ಟೈಟಲ್ ಏನು?. ಉಪ್ಪಿಯ ಹೊಸ ಕಲ್ಪನೆಗೆ ಬಂಡವಾಳ ಹಾಕುತ್ತಿರುವವರು ಯಾರು? ಎಂಬುದು ಗಾಂಧಿನಗರದಲ್ಲಿ ಟಾಕ್ ಆಗುತ್ತಿದೆ.
ಬರೋಬ್ಬರಿ 7 ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡ್ತಿರುವ ಚಿತ್ರಕ್ಕೆ ಟಗರು, ಸಲಗಗಳಂತಹ ಎರಡು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಉಪ್ಪಿಯ ಹೊಸ ಕನಸಿಗೆ ನೀರೆರೆಯಲಿದ್ದಾರೆ. ವೀನಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಮೂರನೇ ಚಿತ್ರವಾಗಿ ಉಪ್ಪಿಯ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.
ಉಪೇಂದ್ರರ ಸಿನಿಮಾಗೆ ಕೆ.ಪಿ ಶ್ರೀಕಾಂತ್ ನಿರ್ಮಾಪಕ ಲಹರಿ ಸಂಸ್ಥೆಗೆ ಸಿನಿಮಾ ಹಾಡುಗಳ ಹಕ್ಕು:ಇದೇ ತಿಂಗಳ 10ನೇ ತಾರೀಖು ಉಪೇಂದ್ರ ಅವರು ಇದನ್ನು ಅನಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ವಿಶೇಷ ಅಂದ್ರೆ ಈ ಜೋಡಿ ಒಂದಾಗ್ತಿದ್ದಂತೆೆ ಸಿನಿಮಾ ಶುರುವಾಗುವ ಮೊದಲೇ ಚಿತ್ರದ ಆಡಿಯೋ ಹಕ್ಕು ಲಹರಿ ಸಂಸ್ಥೆಯ ಪಾಲಾಗಿದೆ.
ಈ ಸೂಪರ್ ಕಾಂಬೋ ಚಿತ್ರಕ್ಕೆ ಸಂಗೀತ ನಿರ್ದೆಶನ ಯಾರು ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ. ಜೊತೆಗೆ ಕೆ.ಪಿ. ಶ್ರೀಕಾಂತ್ ನಿರ್ಮಾಣದ ಹಿಂದಿನ ಎರಡೂ ಚಿತ್ರಕ್ಕೆ ಚರಣ್ರಾಜ್ ಸಂಗೀತ ಇತ್ತು. ಉಪೇಂದ್ರರ ಸಿನಿಮಾಕ್ಕೂ ಚರಣ್ ರಾಜ್ ಸಂಗೀತ ನೀಡಲಿದ್ದಾರಾ ಎಂಬುದು ಸದ್ಯದ ಸಸ್ಪೆನ್ಸ್.
ಕಳೆದ ವರ್ಷ ಉಪೇಂದ್ರ ಅವರು ನಿರ್ದೇಶನ ಮಾಡುವುದರ ಬಗ್ಗೆ ನಾಮದ ಸಿಂಬಲ್ ಇದ್ದ ಪೋಸ್ಟರ್ ರಿವೀಲ್ ಮಾಡಿದ್ದರು. ಅಲ್ಲದೇ, ನಾನು ನಿರ್ದೇಶನ ಮಾಡುವ ಮುಂದಿನ ಚಿತ್ರದ ಟೈಟಲ್ ಏನು ಅಂತ ಗೆಸ್ ಮಾಡಿ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಉಪ್ಪಿ ಹರಿಬಿಟ್ಟಿದ್ದ ಪೋಸ್ಟರ್ ನೋಡಿ ಬಹಳಷ್ಟು ಮಂದಿ ಉಪ್ಪಿ ನಿರ್ದೇಶನದ ಮುಂದಿನ ಚಿತ್ರದ ಹೆಸರು ಪಂಗನಾಮ ಅಂತ ಫಿಕ್ಸ್ ಆಗಿದ್ರು.
ಆದ್ರೆ ಪಂಗನಾಮ ಟೈಟಲ್ಗೆ ವಿರೋಧ ವ್ಯಕ್ತವಾದ್ದರಿಂದ ಈ ಟೈಟಲ್ ಚೇಂಜ್ ಆಗುತ್ತೆ ಅನ್ನೋ ಮಾಹಿತಿ ಉಪ್ಪಿ ಬಳಗದಿಂದ ಬಂದಿದೆ. ಆದರೆ ಈ ಚಿತ್ರಕ್ಕೆ ಉಪ್ಪಿ ಯಾವ ಟೈಟಲ್ ಫಿಕ್ಸ್ ಮಾಡ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಉಪೇಂದ್ರ ಅವರ ನಿರ್ದೇಶನದ ಸಿನಿಮಾ ಸುದ್ದಿ ಸ್ಯಾಂಡಲ್ವುಡ್ ಅಲ್ಲದೇ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:ದಿವ್ಯಾ ಅಗರ್ವಾಲ್ - ವರುಣ್ ಸೂದ್ ಮಧ್ಯೆ ಬಿರುಕು: ಮುರಿದು ಬಿತ್ತು ನಾಲ್ಕು ವರ್ಷದ ಪ್ರೀತಿ