ಕರ್ನಾಟಕ

karnataka

ETV Bharat / city

ಸ್ಥಿರಾಸ್ತಿ ವ್ಯಾಜ್ಯ ಪ್ರಕರಣ: ಸಬ್‌ಇನ್ಸ್​ಪೆಕ್ಟರ್​ಗೆ ಹೈಕೋರ್ಟ್ ತೀವ್ರ ತರಾಟೆ - ವಕೀಲ ಬಿ.ಸುಧಾಕರ್ ಕೇಸ್​ ನ್ಯೂಸ್​

ಸ್ಥಿರಾಸ್ತಿ ವ್ಯಾಜ್ಯವೊಂದರಲ್ಲಿ ವಕೀಲರಿಗೆ ಖುದ್ದು ಹಾಜರಾಗಿ ದಾಖಲಾತಿ ನೀಡಬೇಕೆಂದು ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯನಗರದ ಸಬ್ ಇನ್ಸ್​ಪೆಕ್ಟರ್​ ಅವರನ್ನು ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿತು.

ಹೈಕೋರ್ಟ್
ಹೈಕೋರ್ಟ್

By

Published : Dec 11, 2019, 11:48 PM IST

ಬೆಂಗಳೂರು: ಸ್ಥಿರಾಸ್ತಿ ವ್ಯಾಜ್ಯವೊಂದರಲ್ಲಿ ವಕೀಲರಿಗೆ ಖುದ್ದು ಹಾಜರಾಗಿ ದಾಖಲಾತಿ ನೀಡಬೇಕೆಂದು ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯನಗರದ ಸಬ್ ಇನ್ಸ್​ಪೆಕ್ಟರ್​ಗೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿತು.

ಸಬ್ ಇನ್ಸ್​ಪೆಕ್ಟರ್ ನೋಟಿಸ್ ನೀಡಿದ ವಿಚಾರ ಪ್ರಶ್ನಿಸಿ ವಕೀಲ ಬಿ.ಸುಧಾಕರ್ ಅರ್ಜಿ ಸಲ್ಲಿಕೆ ಮಾಡಿದ್ದರು.‌ ಈ ವಿಚಾರ ಇಂದು‌ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.

ವಿಚಾರಣೆ ವೇಳೆ ವಿಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಹಾಗೂ ಇನ್ಸ್‌ಪೆಕ್ಟರ್ ಭರತ್‌ ಇಬ್ಬರು ಹಾಜರಿದ್ದರು. ಈ ವೇಳೆ ಇವರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ಇಂತಹ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಿ ಎಂದು ಸೂಚಿಸಿ ವಿಚಾರಣೆಯನ್ನ ನಾಳೆಗೆ ಮುಂದೂಡಿಕೆ ಮಾಡಲಾಯಿತು.

ABOUT THE AUTHOR

...view details