ಕರ್ನಾಟಕ

karnataka

ETV Bharat / city

ಫಾರ್ಮಸಿ ಇನ್ಸ್​ಪೆಕ್ಟರ್ ನೇಮಕಾತಿಗೆ ಅರ್ಹತಾ ನಿಯಮ ರೂಪಿಸಲಾಗಿದೆ: ಹೈಕೋರ್ಟ್​ಗೆ ಸರ್ಕಾರ ಮಾಹಿತಿ - ಫಾರ್ಮಸಿ ಕಾಯ್ದೆ 1948

ಫಾರ್ಮಸಿ ಇನ್ಸ್​​ಪೆಕ್ಟರ್ ನೇಮಕಾತಿಗೆ ಅರ್ಹತಾ ನಿಯಮಗಳನ್ನು ರೂಪಿಸಲಾಗಿದೆ ಎಂದು ಹೈಕೋರ್ಟ್​ಗೆ ಸರ್ಕಾರ ಮಾಹಿತಿ ನೀಡಿದೆ.

pharmacy inspector appointment eligibility rules, High court news, Government statement, pharmacy act 1948, Public interest litigation, ಫಾರ್ಮಸಿ ಇನ್ಸಪೆಕ್ಟರ್ ನೇಮಕಾತಿಗೆ ಅರ್ಹತಾ ನಿಯಮಗಳು, ಹೈಕೋರ್ಟ್​ಗೆ ಸರ್ಕಾರ ಮಾಹಿತಿ, ಹೈಕೋರ್ಟ್​ ಸುದ್ದಿ, ಸರ್ಕಾರ ಹೇಳಿಕೆ, ಫಾರ್ಮಸಿ ಕಾಯ್ದೆ 1948, ಸಾರ್ವಜನಿಕ ಹಿತಾಸಕ್ತಿ ಅರ್ಜಿ,
ಹೈಕೋರ್ಟ್​ಗೆ ಸರ್ಕಾರ ಮಾಹಿತಿ

By

Published : Dec 16, 2021, 7:54 AM IST

Updated : Dec 16, 2021, 8:36 AM IST

ಬೆಂಗಳೂರು:ರಾಜ್ಯದಲ್ಲಿ ಫಾರ್ಮಸಿ ಇನ್ಸ್‌ಪೆಕ್ಟರ್ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತಾ ನಿಯಮಗಳನ್ನು ರೂಪಿಸಿದ್ದು, ಅವುಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ‘ಫಾರ್ಮಸಿ ಕಾಯ್ದೆ-1948’ರ ನಿಯಮಗಳನ್ನು ಜಾರಿ ಮಾಡಲು ಸರ್ಕಾರಕ್ಕೆ ನಿರ್ದೇಶನ ಕೋರಿ ಅಶೋಕ್ ಸ್ವಾಮಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಓದಿ:Dominican Republic plane crash: ಖಾಸಗಿ ಜೆಟ್​ ಪತನವಾಗಿ 9 ಮಂದಿ ದುರ್ಮರಣ

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಫಾರ್ಮಸಿ ಇನ್ಸ್‌ಪೆಕ್ಟರ್ ನೇಮಕಾತಿಗೆ ಅರ್ಹತಾ ನಿಯಮಗಳನ್ನು ರೂಪಿಸಲಾಗಿದೆ. ಆ ನಿಯಮಗಳಿಗೆ ಸಚಿವ ಸಂಪುಟ ಸಹ ಅನುಮೋದನೆ ನೀಡಿದೆ. ಸದ್ಯ ಸಂಬಂಧಪಟ್ಟ ಸಚಿವರ ಮುಂದೆ ಸಹಿಗಾಗಿ ಕಡತ ಇಟ್ಟಿದ್ದು, ಶೀಘ್ರದಲ್ಲೇ ನಿಯಮಗಳನ್ನು ಪ್ರಕಟಿಸಲಾಗುವುದು ಎಂದು ವಿವರಿಸಿದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ನಿಯಮಗಳನ್ನು ಪ್ರಕಟಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು 2022ರ ಫೆಬ್ರವರಿ 2ಕ್ಕೆ ಮುಂದೂಡಿತು.

Last Updated : Dec 16, 2021, 8:36 AM IST

ABOUT THE AUTHOR

...view details